ನಾನೊಬ್ಬ ಡ್ರಗ್ಸ್ (ಕೊಕೇನ್) ವ್ಯಸನಿಯಾಗಿದ್ದೆ – ವಸೀಮ್ ಅಕ್ರಮ್
ನಾನೊಬ್ಬ ಡಗ್ಸ್ (ಕೊಕೇನ್) ವ್ಯಸನಿಯಾಗಿದ್ದೆ ಎಂಬ ಅಚ್ಚರಿಯ ಸತ್ಯವನ್ನ ಪಾಕಿಸ್ತಾನ ತಂಡದ ಮಾಜಿ ನಾಯಕ ಹಾಗೂ ದಿಗ್ಗಜ ವೇಗದ ಬೌಲರ್ ವಸೀಮ್ ಅಕ್ರಮ್ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
ತಾವು ಹೊರತಂದ ಹೊಸ ಪುಸ್ತಕ ಸುಲ್ತಾನ್: ಅ ಮೆಮೊಯರ್ ಪುಸ್ತಕದಲ್ಲಿ ಈ ಅಚ್ಚರಿಯ ಸಂಗತಿ ಬಗ್ಗೆ ಹೇಳಿಕೊಂಡಿದ್ದಾರೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 500ಕ್ಕೂ ಹೆಚ್ಚು ವಿಕೆಟ್ ಪಡೆದ ಮೊತ್ತ ಮೊದಲ ವೇಗದ ಬೌಲರ್ ‘ಸುಲ್ತಾನ್ ಆಫ್ ಸ್ವಿಂಗ್’ ವಸೀಮ್ ಅಕ್ರಮ್, ಕ್ರಿಕೆಟ್ ವೃತ್ತಿಬದುಕಿಗೆ ನಿವೃತ್ತಿ ನೀಡಿದ ನಂತರದ ದಿನಗಳಲ್ಲಿ ಕೊಕೇನ್ ವ್ಯಸನಿಯಾಗಿದ್ದ ಸಂಗತಿಯನ್ನು ಬಹಿರಂಗ ಪಡಿಸಿದ್ದಾರೆ.
ತಮ್ಮ ಹೊಸ ಆತ್ಮಕತೆಯಲ್ಲಿ ಡ್ರಗ್ಸ್ ವ್ಯಸನದ ಬಗ್ಗೆ ಮಾತನಾಡಿರುವ ವಸೀಮ್, 2009ರಲ್ಲಿ ತೀರಾ ಅಪರೂಪದ ಸೋಂಕಿನಿಂದಾಗಿ ತಮ್ಮ ಮೊದಲ ಪತ್ನಿಯ ಅಕಾಲಿಕ ಸಾವಿನ ಬಳಿಕ ಡ್ರಗ್ಸ್ ವ್ಯಸನದಿಂದ ಹೊರಬರುವ ಶಪತ ಮಾಡಿದ್ದಾಗಿ ತಿಳಿಸಿದ್ದಾರೆ.
ಕೊಕೇನ್ ವ್ಯಸನದಿಂದ ನಾನು ಸಾಕಷ್ಟು ತೊಂದರೆ ಅನುಭವಿಸಿದ್ದೇನೆ. ಹುಮಾ, ತನ್ನ ಕಡೇ ದಿನಗಳಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ನನ್ನಿಂದ ಕೊಕೇನ್ ವ್ಯಸನವನ್ನು ದೂರವಾಗುವಂತೆ ಮಾಡಿದರು. ಅಂದಿನಿಂದ ಆ ವ್ಯಸನದ ಜೀವನದಿಂದ ಹೊರಬಂದೆ. ಆ ಕಡೆಗೆ ಮತ್ತೆ ತಿರುಗಿಯೂ ನೋಡಲಿಲ್ಲ,” ಎಂದು ಹೇಳಿದ್ದಾರೆ.
Wasim Akram: I Was A Drug (Cocaine) Addict – Wasim Akram