IPL ಸ್ಟ್ರಾಂಗೆಸ್ಟ್ 11.. ರೋಹಿತ್ ಶರ್ಮಾಗೆ ಅವಮಾನ
ಟೀಂ ಇಂಡಿಯಾದ ಮಾಜಿ ಬ್ಯಾಟರ್ ವಾಸೀಂ ಜಾಫರ್ ಐಪಿಎಲ್ ನಲ್ಲಿ ತನ್ನ ಆಲ್ ಟೈಂ ಫೆವರೇಟ್ ತಂಡವನ್ನು ಪ್ರಕಟಿಸಿದ್ದಾರೆ.
ತಮ್ಮ ತಂಡಕ್ಕೆ ಮಹೇಂದ್ರ ಸಿಂಗ್ ಧೋನಿ ಅವರನ್ನು ವಾಸೀಂ ಜಾಫರ್ ನಾಯಕರನ್ನಾಗಿ ಮಾಡಿದ್ದಾರೆ.
ಅಲ್ಲದೆ ಕ್ರಿಸ್ ಗೇಲ್, ಮಲಿಂಗಾ ಅಂತಹ ದಿಗ್ಗಜ ಆಟಗಾರರಿಗೆ ಸ್ಥಾನ ನೀಡಿದ್ದಾರೆ.
ಅದೇ ರೀತಿ ಆಲ್ ರೌಂಡರ್ ಗಳ ಸ್ಥಾನದಲ್ಲಿ ಆಂಡ್ಯೂ ರಸೆಲ್, ಹಾರ್ದಿಕ್ ಪಾಂಡ್ಯ ಅವರಿಗೆ ಸ್ಥಾನ ನೀಡಿದ್ದಾರೆ.
ಈ ಸೀಸನ್ ಭಾನುವಾರ ಅಂತಿಮಗೊಂಡಿದೆ.
ಚೊಚ್ಚಲ ಪ್ರಯತ್ನದಲ್ಲಿಯೇ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ಈ ಹಿನ್ನೆಲೆಯಲ್ಲಿ ವಾಸೀಂ ಜಾಫರ್ ಇಂಡಿಯನ್ ಪ್ರಿಮಿಯರ್ ಲೀಗ್ ನ ಆಲ್ ಟೈಂ ಫೇವರೇಟ್ ತಂಡವನ್ನು ಪ್ರಕಟಿಸಿದ್ದಾರೆ.
ಜಾಫರ್ ತಂಡದಲ್ಲಿ ಓಪನರ್ ಗಳಾಗಿ ಕ್ರಿಸ್ ಗೇಲ್, ರಾಹುಲ್ ಗೆ ಅವಕಾಶ ನೀಡಿದ್ದಾರೆ.
ಒನ್ ಡೌನ್ ನಲ್ಲಿ ವಿರಾಟ್.. ಮಿಡಲ್ ಆರ್ಡರ್ ನಲ್ಲಿ ಸುರೇಶ್ ರೈನಾ, ಧೋನಿ ಇದ್ದಾರೆ.
ಆಲ್ ರೌಂಡರ್ ಗಳ ವಿಭಾಗದಲ್ಲಿ ಹಾರ್ದಿಕ್ ಪಾಂಡ್ಯ, ಆಂಡ್ರ್ಯೂ ರಸೆಲ್ ಕಾಣಿಸಿಕೊಂಡಿದ್ದಾರೆ.
ಬೌಲರ್ ಗಳ ವಿಭಾಗದಲ್ಲಿ ರಷೀದ್ ಖಾನ್, ರವಿಚಂದ್ರನ್ ಅಶ್ವಿನ್, ಯುಜುವೇಂದ್ರ ಚಹಾಲ್, ವೇಗದ ಬೌಲರ್ ಗಳಾಗಿ ಜಸ್ಪ್ರೀತ್ ಬೂಮ್ರಾ, ಲಸಿತ್ ಮಲಿಂಗಾ ಇದ್ದಾರೆ.
ಆದ್ರೆ ಈ ತಂಡದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಐದು ಬಾರಿ ಚಾಂಪಿಯನ್ ಆಗಿ ಮಾಡಿದ ರೋಹಿತ್ ಶರ್ಮಾ ಅವರಿಗೆ ವಾಸೀಂ ಅವಕಾಶ ನೀಡಿಲ್ಲ.
ವಸೀಂ ಜಾಫರ್ ಆಲ್ ಟೈಂ ಬೆಸ್ಟ್ ಐಪಿಎಲ್ ಪ್ಲೇಯಿಂಗ್ 11 ಹೀಗಿದೆ..
ಕ್ರಿಸ್ ಗೇಲ್, ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಎಂ.ಎಸ್ ಧೋನಿ (ನಾಯಕ), ಆಂಡ್ರಿ ರಸೆಲ್, ಹಾರ್ದಿಕ್ ಪಾಂಡ್ಯ, ರಷೀದ್ ಖಾನ್, ರವಿಚಂದ್ರನ್ ಅಶ್ವಿನ್ / ಯಜುವೇಂದ್ರ ಚಹಾಲ್, ಜಸ್ ಪ್ರೀತ್ ಬೂಮ್ರಾ, ಲಸಿತ್ ಮಲಿಂಗ