Rohit sharma ಅದ್ಭುತ ಕ್ಯಾಪ್ಟನ್
ರೋಹಿತ್ ಶರ್ಮಾ ಕ್ಯಾಪ್ಟನ್ಸಿ ಬಗ್ಗೆ ತಂಡದ ಆಟಗಾರರು ಸಂತೃಪ್ತರಾಗಿದ್ದಾರೆ.
ರೋಹಿತ್ ಆಟಗಾರರಿಗೆ ಸಾಕಷ್ಟು ಸ್ವತಂತ್ರ್ಯವನ್ನು ನೀಡುತ್ತಾರೆ ಎಂದು ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರನ್ನು ಟೀಂ ಇಂಡಿಯಾದ ಮಾಜಿ ಆಟಗಾರ ವಾಸೀಂ ಜಾಫರ್ ಹೊಗಳಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಭಾರತ ಇನ್ನಿಂಗ್ಸ್ ಮತ್ತು 222 ರನ್ಗಳಿಂದ ಗೆದ್ದಿದೆ.
ಇದರೊಂದಿಗೆ ರೋಹಿತ್ ಶರ್ಮಾ ನೇತೃತ್ವದಲ್ಲಿ ಟೀಂ ಇಂಡಿಯಾ ಮೊದಲ ಜಯ ದಾಖಲಿಸಿದೆ.
ರೋಹಿತ್ ಬ್ಯಾಟಿಂಗ್ ನಲ್ಲಿ ವಿಫಲರಾದರು.. ಆದರೆ ನಾಯಕನಾಗಿ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ಭಾರತ ತಂಡದ ಮಾಜಿ ಆಟಗಾರ ವಾಸಿಂ ಜಾಫರ್ ರೋಹಿತ್ ಶರ್ಮಾ ಬಗ್ಗೆ ಪ್ರಶಂಸೆಯ ಸುರಿಮಳೆಗೈದಿದ್ದಾರೆ.
“ಭಾರತದ ಸೀಮಿತ ಓವರ್ಗಳ ನಾಯಕನಾಗಿ ರೋಹಿತ್ ಈಗಾಗಲೇ ಮಿಂಚುತ್ತಿದ್ದಾರೆ. ತಂಡದಲ್ಲಿರುವ ಹಲವು ಆಟಗಾರರು ರೋಹಿತ್ ಶರ್ಮಾ ನಾಯಕತ್ವದಿಂದ ತೃಪ್ತರಾಗಿದ್ದಾರೆ.
“ಅವರು ಆಟಗಾರರಿಗೆ ಸಾಕಷ್ಟು ಸ್ವಾತಂತ್ರ್ಯವನ್ನು ನೀಡುತ್ತಾರೆ. ರೋಹಿತ್ ಫೀಲ್ಡ್ ಪ್ಲೇಸ್ಮೆಂಟ್ ಮತ್ತು ಬೌಲಿಂಗ್ನಲ್ಲಿ ಅದ್ಭುತ ಬದಲಾವಣೆಗಳನ್ನು ಮಾಡುತ್ತಿದ್ದಾರೆ ಎಂದು ವಾಸೀಂ ಹೇಳಿದ್ದಾರೆ.
ಶ್ರೀಲಂಕಾ ತಂಡದ ಮೇಲೆ ಫಾಲೋ ಆನ್ ಹೇರಿ ರೋಹಿತ್ ಸರಿಯಾದ ನಿರ್ಧಾರ ತೆಗೆದುಕೊಂಡರು.
ರೋಹಿತ್ ನಿರ್ಧಾರದಿಂದಲೇ ಪಂದ್ಯ ಮೂರೇ ದಿನದಲ್ಲಿ ಮುಕ್ತಾಯಗೊಂಡಿದೆ ಎಂದಿದ್ದಾರೆ ವಾಸೀಂ. wasim-jaffer-praises-rohit-sharma