ಕೊಹ್ಲಿ ಬದಲು ರಾಹುಲ್ ಅಲ್ಲ.. ನಾಯಕನ ಸ್ಥಾನಕ್ಕೆ ಆತನೇ ಸೂಕ್ತ

1 min read
icc-test-rankings-kl-rahul saaksha tv

ಕೊಹ್ಲಿ ಬದಲು ರಾಹುಲ್ ಅಲ್ಲ.. ನಾಯಕನ ಸ್ಥಾನಕ್ಕೆ ಆತನೇ ಸೂಕ್ತ

ಜೋಹಾನ್ಸ್ ಬರ್ಗ್ ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ. ಈ ಮೂಲಕ ಸರಣಿ 1-1ರಲ್ಲಿ ಸಮಬಲಗೊಂಡಿದೆ.

ಎರಡನೇ ಟೆಸ್ಟ್‌ನಲ್ಲಿ ಭಾರತದ ಸೋಲಿನ ಬಗ್ಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಪ್ರತಿಕ್ರಿಯಿಸಿದ್ದಾರೆ.

ಎರಡನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಲಭ್ಯತೆ ಎದ್ದು ಕಾಣುತ್ತಿತ್ತು, ಇದರಿಂದಲೇ ಟೀಂ ಇಂಡಿಯಾ ಸೋತಿದೆ ಎಂದು ಜಾಫರ್ ಅಭಿಪ್ರಾಯಪಟ್ಟಿದ್ದಾರೆ.

 ವಿರಾಟ್ ಮೈದಾನದಲ್ಲಿ ಆಕ್ರಮಣಕಾರಿಯಾಗಿರುತ್ತಾರೆ ಮತ್ತು ಪ್ರತಿಯೊಬ್ಬ ಆಟಗಾರನ ಮೇಲೆ ಕೇಂದ್ರೀಕರಿಸುತ್ತಾರೆ.

ಆದರೆ, ವಿರಾಟ್ ಸ್ಥಾನದಲ್ಲಿ ನಾಯಕತ್ವ ವಹಿಸಿಕೊಂಡಿರುವ ರಾಹುಲ್ ಗೆ ಆ ಗುಣಗಳಿರಲಿಲ್ಲ ಎಂದು ಜಾಫರ್ ಪ್ರತಿಪಾದಿಸಿದ್ದಾರೆ.

wasim-jaffer talks k l rahul captaincy virat  saaksha tv

“ಜೋಹಾನ್ಸ್‌ಬರ್ಗ್ ಟೆಸ್ಟ್‌ನಲ್ಲಿ ವಿರಾಟ್ ಸೇವೆಯನ್ನು ಟೀಂ ಇಂಡಿಯಾ ಖಂಡಿತವಾಗಿಯೂ ಕಳೆದುಕೊಂಡಿತ್ತು.

ಅವರು ಮೈದಾನದಲ್ಲಿ ತುಂಬಾ ಆಕ್ರಮಣಕಾರಿ. ಅವರು ಎದುರಾಳಿಗಳ ವಿರುದ್ಧ ತಂತ್ರಗಳನ್ನು ರೂಪಿಸುತ್ತಾರೆ.

ವಿರಾಟ್ ಅನುಪಸ್ಥಿತಿಯಲ್ಲಿ ರಾಹುಲ್ ಅವರನ್ನು ನಾಯಕರನ್ನಾಗಿ ನೇಮಿಸಿದ್ದು, ನನಗೆ ಆಶ್ಚರ್ಯವನ್ನುಂಟು ಮಾಡಿತ್ತು. 

ರಹಾನೆ ಲಭ್ಯವಿದ್ದಾಗ ರಾಹುಲ್ ಅವರನ್ನು ನಾಯಕರನ್ನಾಗಿ ನೇಮಿಸುವ ಅವಶ್ಯಕತೆ ಇಲ್ಲ.

ರಹಾನೆ ಸಾರಥ್ಯದಲ್ಲಿ  ಭಾರತ ತಂಡವು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿರುವುದು ನಮಗೆ ತಿಳಿದಿದೆ.

ಕೆಎಲ್ ರಾಹುಲ್ ಬಗ್ಗೆ ನನಗೆ ವೈಯಕ್ತಿಕವಾಗಿ ಯಾವುದೇ ಅಭ್ಯಂತರವಿಲ್ಲ. ಅವರು ಕೆಲವು ವರ್ಷಗಳಿಂದ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್‌ನ ನಾಯಕರಾಗಿದ್ದಾರೆ.

ಆದರೆ ಕೊಹ್ಲಿ ಅನುಪಸ್ಥಿತಿಯಲ್ಲಿ ರಹಾನೆ ತಂಡವನ್ನು ಮುನ್ನಡೆಸಬೇಕಿತ್ತು ಎಂದು ನಾನು ಭಾವಿಸುತ್ತೇನೆ ಎಂದು ಜಾಫರ್ ಹೇಳಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd