ಇತ್ತೀಚೆಗೆ ಕೊರೋನಾ ಸೋಂಕು ಪೀಡಿತ ಚೀನಾದಿಂದ ಹುಟ್ಟೂರು ಕಡಬಕ್ಕೆ ಮರಳಿದ ವ್ಯಕ್ತಿಯೊಬ್ಬರ ಮೇಲೆ ಆರೋಗ್ಯ ಇಲಾಖೆ 14 ದಿನಗಳ ಕಾಲ ನಿಗಾ ಇರಿಸಿದೆ.
ಉದ್ಯೋಗದ ನಿಮಿತ್ತ ಚೀನಾಕ್ಕೆ ತೆರಳಿದ್ದ ಇವರು, ಮಾರ್ಚ್ 6ರಂದು ಭಾರತ ತಲುಪಿದ್ದರು. ವಿಮಾನ ನಿಲ್ದಾಣದಲ್ಲಿ ಎಲ್ಲಾ ರೀತಿಯ ವೈದ್ಯಕೀಯ ತಪಾಸಣೆಗೆ ಒಳಪಟ್ಟು, ಕೊರೋನಾ ಸೋಂಕು ತಗುಲದಿರುವುದು ಖಚಿತಗೊಂಡ ಹಿನ್ನೆಲೆಯಲ್ಲಿ ಅಧಿಕಾರಿಗಳು ಮಾರ್ಚ್ 9ರಂದು ಇವರಿಗೆ ಮನೆಗೆ ತೆರಳಲು ಅನುಮತಿ ನೀಡಿದ್ದರು.
ಆದರೆ ಊರಿನ ಕೆಲವು ಜನರು ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬುಧವಾರ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿದ ಇವರು, ತಾನು ಆರೋಗ್ಯದಿಂದ ಇರುವ ಕುರಿತು ಹಾಗೂ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ನಡೆಸಿದ ಆರೋಗ್ಯ ತಪಾಸಣೆಗಳ ಸಂಪೂರ್ಣ ಮಾಹಿತಿಯನ್ನು ಕಡಬ ವೈದ್ಯಾಧಿಕಾರಿಗಳಿಗೆ ನೀಡಿದರು. ಮಾಹಿತಿಯನ್ನು ಖಚಿತ ಪಡಿಸಿ ಕೊಂಡ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ತ್ರಿಮೂರ್ತಿ, ಇವರಲ್ಲಿ ಕೊರೋನಾ ಸೋಂಕು ಲಕ್ಷಣಗಳು ಕಂಡು ಬರದ ಹಿನ್ನೆಲೆಯಲ್ಲಿ ಮನೆಗೆ ಕಳುಹಿಸಿ ಕೊಡಲಾಗಿದೆ ಎಂದು ತಿಳಿಸಿದರು . ಹಾಗೆಯೇ ಮುಂಜಾಗ್ರತಾ ಕ್ರಮವಾಗಿ 14ದಿನಗಳ ಕಾಲ ಹೊರಗೆ ಹೋಗದೆ, ಆರೋಗ್ಯ ಇಲಾಖೆಯ ಸೂಚನೆಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಪ್ರತಿ ದಿನ ಆರೋಗ್ಯ ಕಾರ್ಯಕರ್ತ ರಿಗೆ ಅವರ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವಂತೆಯೂ ಸೂಚಿಸಿದರು.
ಈ ವಿಚಾರದಲ್ಲಿ ಯಾರೂ ಭಯ ಪಡುವ ಅಗತ್ಯವಿಲ್ಲ ಎಂದ ವೈದ್ಯಾಧಿಕಾರಿ, ಇಲಾಖೆಯ ಸೂಚನೆಯಂತೆ ನಿಗಾ ಇರಿಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು.
ಲೈಂಗಿಕ ದೌರ್ಜನ್ಯ: ಅಪರಾಧಿಗೆ ಜೀವಾವಧಿ ಶಿಕ್ಷೆ
ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಅಪರ ಜಿಲ್ಲಾ ಸತ್ರ ನ್ಯಾಯಾಲಯದ FTSC-1 (ಫಾಸ್ಟ್ ಟ್ರಾಕ್ ವಿಶೇಷ ಕೋರ್ಟ್) ಅಪರಾಧಿ ರಾಜು...