ವೆಬ್ ಸಿರೀಜ್ ನೋಡುತ್ತಿದ್ದ ಯುವಕನೊಬ್ಬ ಅದೇ ರೀತಿಯಲ್ಲಿ ಅಪಹರಣ ಮಾಡಿ, ಅಪಹರಣ ಮಾಡಿದ ವ್ಯಕ್ತಿಯ ತಂದೆಗೆ ಕರೆ ಮಾಡಿ ಈಗ ಸಿಕ್ಕಿ ಬಿದ್ದಿದ್ದಾನೆ.
ತುಮಕೂರಿನಿಂದ ಬೆಂಗಳೂರಿಗೆ ಬಂದು ಏನಾದರೂ ಸಾಧಿಸಬೇಕು ಎಂದಿದ್ದ ಅರ್ಜುನ್ ಎಂಬ ಯುವಕನೇ ಈ ರೀತಿ ಮಾಡಿದವನು. ಆತ ಖ್ಯಾತ ಜ್ಯೋತಿಷಿಯೋಬ್ಬರ ಮಗನನ್ನು ಅಪಹರಣ ಮಾಡಿದ್ದ. ಆದರೆ, ಅಹರಣ ಮಾಡಿದ ಮೂರೇ ಗಂಟೆಗಳಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ.
ತುಮಕೂರಿನ ಅರ್ಜುನ್ ಬೆಂಗಳೂರಿಗೆ ಬಂದು ಪಿಜಿಯಲ್ಲ ವಾಸಿಸುತ್ತಿದ್ದ. ಆದರೆ, ಅವನಿಗೆ ಇನ್ನೂ ಕೆಲಸ ಸಿಕ್ಕಿರಲಿಲ್ಲ. ಹೀಗಾಗಿ ಇಂತಹ ಕೆಟ್ಟ ವಿಚಾರವನ್ನು ತಲೆಯಲ್ಲಿ ಹಾಕಿಕೊಂಡು ಜ್ಯೋತಿಷಿಯೊಬ್ಬರ ಮಗನನ್ನು ಅಪಹಹರಿಸಿ ಪೊಲೀಸರ ಅತಿಥಿಯಾಗಿದ್ದಾನೆ. ವಾಣಿವಾಸನ್ ಎಂಬ ಜ್ಯೋತಿಷಿ ಮಗನನ್ನು ಒಂದು ತಿಂಗಳ ಕಾಲ ವಾಚ್ ಮಾಡಿ, ಬೊಲೆರೋದಲ್ಲಿ ನೀಟ್ ಕೋಚಿಂಗ್ ಗೆ ಹೋಗುತ್ತಿದ್ದ ಜಯಸೂರ್ಯನ ಓಡಾಟದ ಟೈಮಿಂಗ್ ತಿಳಿದುಕೊಂಡಿದ್ದ ಆರೋಪಿ, ಆಗಸ್ಟ್ 4ರಂದು ಈ ಕೃತ್ಯ ಎಸಗಿದ್ದಾನೆ.
ಕೋಚಿಂಗ್ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಅರ್ಜುನ್, ತಿಲಕ್ ನಗರದ ಕಡೆ ನನ್ನನ್ನು ಬಿಡಿ ಎದು ಡ್ರಾಪ್ ಕೇಳಿದ್ದಾನೆ. ಆಗ ಜಯಸೂರ್ಯನು ಅರ್ಜುನನ್ನು ಕಾರಿಗೆ ಹತ್ತಿಸಿಕೊಂಡಿದ್ದಾನೆ. ಆದರೆ, ಸ್ವಲ್ಪ ದೂರ ವಾಹನ ಹೋಗುತ್ತಿದ್ದಂತೆ ಜಯಸೂರ್ಯನ ತಲೆಗೆ ಗನ್ ಇಟ್ಟಿದ್ದಾನೆ. ಪೋಷಕರಿಗೆ ಕಾಲ ಮಾಡಿಸಿ 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ವಿಡಿಯೋ ಕಾಲ್ ಮೂಲಕವೇ ಮಣಿವಾಸನ್ ಅವರಿಗೆ ಕಾಲ್ ಮಾಡಿಸಿದ್ದಾನೆ. ಕರೆ ಸ್ವೀಕರಿಸಿದ ಜ್ಯೋತಿ, ಮಣಿವಾಸನ್ ಅವರು ಕೂಡಲೇ ಎಚ್ ಎಸ್ ಆರ್ ಲೇಔಟ್ ಠಾಣೆಗೆ ದೂರು ನೀಡಿದ್ದರು. ವಿಡಿಯೋ ಕಾಲ್, ಕಾರಿನ ಓಡಾಟದ ರೂಟ್ ಮತ್ತು ಜಯಸೂರ್ಯನ ಮೊಬೈಲ್ ಟ್ರ್ಯಾಕ್ ಮಾಡಿದ ಪೊಲೀಸರು, ಕೇವಲ ಮೂರು ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಈತ ಡೂಪ್ಲಿಕೇಟ್ ಗನ್ ಬಳಸಿ ಬೆದರಿಕೆ ಹಾಕಿರುವು ತಿಳಿದು ಬಂದಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸಿದ್ದಾರೆ.








