ಯೂಟ್ಯೂಬ್ ವಿಡಿಯೋ ನೋಡಿ ತನ್ನ ಪತ್ನಿಗೆ ಹೆರಿಗೆ ಮಾಡಿಸಲು ಹೋಗಿ ಸಾವಿಗೆ ಕಾರಣವಾಗಿರುವ ಘಟನೆಯೊಂದು ಆಕೆಯ ಸಾವಿಗೆ ಕಾರಣವಾಗಿರುವ ಹೃದಯವಿದ್ರಾವಕ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಎಂ. ಲೋಕನಾಯಕಿ (27) ಸಾವನ್ನಪ್ಪಿದ ದುರ್ದೈವಿ ಪತ್ನಿ. ಕೃಷ್ಣಗಿರಿ ಜಿಲ್ಲೆಯ ಪೊಚಂಪಲ್ಲಿ ಹತ್ತಿರದ ಪುಲಿಂಪಟ್ಟಿ ಗ್ರಾಮದ ನಿವಾಸಿ ಮಾದೇಶ್ (30) ಎಂಬುವರ ಪತ್ನಿಯಾಗಿದ್ದರು. ಆದರೆ, ಇವರು ಇತಿಯಾದ ರಕ್ತಸ್ರಾವದಿಂದಾಗಿ ಸಾವನ್ನಪ್ಪಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಮಾದೇಶ್ ನನ್ನು ಬಂಧಿಸಿದ್ದಾರೆ. ನವಜಾತ ಶಿಶುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಲೋಕನಾಯಕಿ ನ್ನ ಮನೆಯಲ್ಲಿ ಮಗುವಿಗೆ ಜನ್ಮ ನೀಡಿದಳು. ಹೆರಿಗೆ ನೋವು ಕಾಣಿಸಿಕೊಂಡಾಗ ಅಲ್ಲಿಯೇ ಇದ್ದ ಗಂಡ ಮಾದೇಶ್, ಆಸ್ಪತ್ರೆಗೆ ದಾಖಲಿಸುವ ಬದಲು ಮನೆಯಲ್ಲಿಯೇ ಹೆರಿಗೆ ಮಾಡುವ ಪ್ರಯತ್ನ ಮಾಡಿದ್ದಾನೆ. ಹೆರಿಗೆಯಾದ ನಂತರ ಲೋಕನಾಯಕಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಆನಂತರ ಮಾದೇಶ್, ತನ್ನ ಪತ್ನಿ ಮತ್ತು ಮಗುವನ್ನು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದನು. ಲೋಕನಾಯಕಿಯನ್ನು ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದು ಘೋಷಿಸಿದ್ದಾರೆ.
ಈ ಕುರಿತು ಪೊಲೀಸರು ತನಿಖೆ ನಡೆಸಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ. ಮಾದೇಶ್, ಮನೆಯಲ್ಲಿಯೇ ಹೆರಿಗೆ ಮಾಡಲು ಯೂಟ್ಯೂಬ್ ವಿಡಿಯೋಗಳನ್ನು ವೀಕ್ಷಣೆ ಮಾಡಿದ್ದ. ಇದರ ಆಧಾರದ ಮೇಲೆ ಆತನನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.