ಕೇರಳದ ವಯನಾಡು ಪ್ರವಾಹದ ಭೀಕರತೆಗೆ ಕಾರಣವಾಗಿದೆ. ಅಲ್ಲಿ ಸಾವನ್ನಪ್ಪಿದವರ ಸಂಖ್ಯೆ 104ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ ಇನ್ನೂ ಏರುವ ಸಾಧ್ಯತೆಗಳಿವೆ. ನೂರಾರು ಜನರು ಮನೆಗಳಡಿ, ನದಿಯಲ್ಲಿ ಸಿಲುಕಿಕೊಂಡಿದ್ದು, ಅವರ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.
ಘಟನೆಯ ಹಿನ್ನೆಲೆಯಲ್ಲಿ ಸಿಎಂ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತವು ಈಗಾಗಲೇ ಕನಿಷ್ಠ 104 ಜನರನ್ನು ಬಲಿ ತೆಗೆದುಕೊಂಡಿದೆ. ಕೇರಳ ಸರ್ಕಾರ ಇಂದು ಮತ್ತು ನಾಳೆ ರಾಜ್ಯದಲ್ಲಿ ಶೋಕಾಚರಣೆಯನ್ನು ಘೋಷಿಸಿದೆ.
ಮೆಪ್ಪಾಡಿ ಬಳಿಯ ಗುಡ್ಡಗಾಡು ಪ್ರದೇಶಗಳಲ್ಲಿ ಭಾರೀ ಭೂಕುಸಿತಗಳು ಸಂಭವಿಸಿದ ಮಳೆಯಿಂದಾಗಿ ಕೇರಳದ ವಯನಾಡಿನಲ್ಲಿ ಭಾರತೀಯ ಸೇನೆಯ ತಂಡವನ್ನು ನಿಯೋಜಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ.ಭಾರತೀಯ ಸೇನೆಯು ವಯನಾಡಿನಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಕಾರ್ಯಾಚರಣೆಗಾಗಿ ಈಗಾಗಲೇ ನಿಯೋಜಿಸಲಾದ ಸುಮಾರು 225 ಸಿಬ್ಬಂದಿಯ ಹೊರತಾಗಿ, ಕನಿಷ್ಠ 140 ಸಿಬ್ಬಂದಿಗಳನ್ನು ಒಳಗೊಂಡಿರುವ ಇನ್ನೂ ಎರಡು ತಂಡಗಳನ್ನು ತಿರುವನಂತಪುರಂನಲ್ಲಿ ತುರ್ತು ಸಂದರ್ಭದಲ್ಲಿ ಏರ್ಲಿಫ್ಟ್ ಮಾಡಲು ಸ್ಟ್ಯಾಂಡ್ ಬೈನಲ್ಲಿ ಸಿದ್ಧಗೊಳಿಸಲಾಗಿದೆ.
ಅನಿವಾರ್ಯ ಪರಿಸ್ಥಿತಿಯ ಹೊರತು ವಯನಾಡಿಗೆ ಪ್ರಯಾಣಿಸುವುದನ್ನು ತಪ್ಪಿಸುವಂತೆ ಸಿಎಂ ಪಿಣರಾಯಿ ವಿಜಯನ್ ಜನರಿಗೆ ಮನವಿ ಮಾಡಿದ್ದಾರೆ. ವ ವಿನಾಶಕಾರಿ ಭೂಕುಸಿತವು ಈಗಾಗಲೇ ಕನಿಷ್ಠ 98 ಜನರನ್ನು ಬಲಿ ತೆಗೆದುಕೊಂಡ ನಂತರ, ಕೇರಳ ಸರ್ಕಾರವು ಇಂದು ಎರಡು ದಿನಗಳ ಕಾಲ ರಾಜ್ಯದಲ್ಲಿ ಶೋಕಾಚರಣೆಯನ್ನು ಘೋಷಿಸಿದೆ. ಕೇರಳ ಬ್ಯಾಂಕ್ ಈಗಾಗಲೇ ಸಿಎಂಡಿಆರ್ಎಫ್ಗೆ 50 ಲಕ್ಷ ರೂ., ಸಿಕ್ಕಿಂ ಮುಖ್ಯಮಂತ್ರಿ 2 ಕೋಟಿ ರೂ., ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ 5 ಕೋಟಿ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ