ಫಿಫಾ 2022 ಅರ್ಹತಾ ಟೂರ್ನಿ- ಬಾಂಗ್ಲಾ ವಿರುದ್ಧ ಭಾರತಕ್ಕೆ ಜಯ…!

1 min read
suni chetri football saakshatv

ಫಿಫಾ 2022 ಅರ್ಹತಾ ಟೂರ್ನಿ- ಬಾಂಗ್ಲಾ ವಿರುದ್ಧ ಭಾರತಕ್ಕೆ ಜಯ…!

indian football saakshatv2022ರ ಫಿಫಾ ವಿಶ್ವಕಪ್ ಟೂರ್ನಿಯ ಅರ್ಹತಾ ಟೂರ್ನಿಯಲ್ಲಿ ಭಾರತ ಮೊದಲ ಗೆಲುವು ದಾಖಲಿಸಿದೆ. ಆರು ವರ್ಷಗಳ ಬಳಿಕ ಮೊದಲ ಜಯವನ್ನು ಸಾಧಿಸಿರುವ ಭಾರತ ತಂಡಕ್ಕೆ ಸುನೀಲ್ ಚೆಟ್ರಿ ಅವರು ಗೆಲುವಿನ ರೂವಾರಿಯಾದ್ರು.
ದೋಹಾದಲ್ಲಿ ನಡೆದ ಪಂದ್ಯದಲ್ಲಿ ಭಾರತ 2-0ಯಿಂದ ಬಾಂಗ್ಲಾ ದೇಶ ತಂಡವನ್ನು ಪರಾಭವಗೊಳಿಸಿತ್ತು. ಭಾರತ ತಂಡದ ಪರ ಸುನೀಲ್ ಚೆಟ್ರಿ ಅವರು ಎರಡು ಗೋಲುಗಳನ್ನು ದಾಖಲಿಸಿದ್ರು.
suni chetri football saakshatvಇ ಬಣದಲ್ಲಿರುವ ಭಾರತ ತಂಡ ಸದ್ಯ ಮೂರನೇ ಸ್ಥಾನದಲ್ಲಿದೆ. ಏಳು ಪಂದ್ಯಗಳಲ್ಲಿ ಆರು ಅಂಕಗಳನ್ನು ಗಿಟ್ಟಿಸಿಕೊಂಡಿದೆ. ಆದ್ರೆ ಪಂದ್ಯ ಗೆದ್ರೂ ಭಾರತ ತಂಡ ಫಿಫಾ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯಲು ವಿಫಲವಾಗಿದೆ. ಆದ್ರೆ 2023ರ ಏಷ್ಯಾಕಪ್ ಟೂರ್ನಿಗೆ ಅರ್ಹತೆ ಪಡೆದುಕೊಂಡಿದೆ.
ಲೀಗ್ ನ ಮುಂದಿನ ಪಂದ್ಯದಲ್ಲಿ ಭಾರತ ಅಫಘಾನಿಸ್ತಾನ ವಿರುದ್ಧ ಜೂನ್ 15ರಂದು ಆಡಲಿದೆ.
ಒಟ್ಟಿನಲ್ಲಿ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಭಾರತದ ಕನಸು ಇನ್ನೂ ನನಸಾಗಿಲ್ಲ. ಭಾರತದಲ್ಲಿ ಫುಟ್ ಬಾಲ್ ಆಟವನ್ನು ಜನಪ್ರಿಯತೆಗೊಳಿಸಲು ಮತ್ತು ಅಭಿವೃದ್ದಿಪಡಿಸಲು ಸಾಕಷ್ಟು ಶ್ರಮವಹಿಸಿದ್ರೂ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಆಡುವಂತಹ ಆಟಗಾರರು ನಮಗೆ ಸಿಕ್ಕಿಲ್ಲ ಎಂಬುದು ವಿಷಾದದ ಸಂಗತಿ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd