ಬೆಳಗಾವಿ: ಬ್ರಿಟಿಷರನ್ನೇ ಒದ್ದೊಡಿಸಿದ ಕಾಂಗ್ರೆಸ್ (Congress)ನವರಿಗೆ ಬಿಜೆಪಿ ಯಾವ ಲೆಕ್ಕ ಎಂದು ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಸಿದ್ಧಾಂತವೇ ಇಲ್ಲ. ಸಿದ್ಧಾಂತ ಬಗ್ಗೆ ಗೌರವವೂ ಇಲ್ಲ..12 ವರ್ಷ ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದೆ. ರಾಜ್ಯದಲ್ಲೂ ಹಿಂದೆ ಅಧಿಕಾರದಲ್ಲಿತ್ತು. ಆದರೆ, ರೈತರ, ಬಡವರ ಪರ ಒಂದೇ ಒಂದು ಉತ್ತಮ ಯೋಜನೆಯನ್ನು ಇವರಿಂದ ತರಲು ಆಗಲಿಲ್ಲ ಎಂದು ಗುಡುಗಿದ್ದಾರೆ.
ಇವರಿಗೆ ಹಿಂದೂ, ಮುಸ್ಲಿಂ ಗಲಾಟೆ ಬೇಕು. ಮಸೀದಿ ದೇವಾಲಯಗಳು ಬೇಕು.ಈ ರಾಜ್ಯದ ಬಡವರ ಬಗ್ಗೆ ಚರ್ಚೆ ಮಾಡಲು ಮಾತ್ರ ಇವರಿಗೆ ಮನಸ್ಸಿಲ್ಲ. ಇವರದ್ದು ಏನೇ ಇದ್ದರೂ ಅಧಿಕಾರ ದಾಹ ಮಾತ್ರ ಎಂದು ಗುಡುಗಿದ್ದಾರೆ.