ಶಿವಮೊಗ್ಗ : 10 ಜನ ಸೇರಿಕೊಂಡು ಓರ್ವನ ಮೇಲೆ ಹಲ್ಲೆ ನಡೆಸಿದರು, ಮೂರು ಚೀಲಗಳಲ್ಲಿ ಟೈಲ್ಸ್ ಪೀಸ್ ತುಂಬಿಟ್ಟಿದ್ದೇನೆ ಎಂದು ಮಹಿಳೆಯೊಬ್ಬರು ಬಿಜೆಪಿಯ ಸತ್ಯಶೋಧನಾ ಸಮಿತಿ ನಾಯಕರ ಮುಂದೆ ಅಳಲು ತೋಡಿಕೊಂಡರು.
ಶಿವಮೊಗ್ಗದಲ್ಲಿ (Shivamogga) ಈದ್ ಮಿಲಾದ್ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟದಲ್ಲಿ ಸಂದರ್ಭದಲ್ಲಿ ಅನುಭವಿಸಿದ ಸಂತ್ರಸ್ತರ ಮನೆಗೆ ತೆರಳಿದ್ದ ಬಿಜೆಪಿ ಸತ್ಯಶೋಧನಾ ಸಮಿತಿ ನಾಯಕರಿಗೆ ನಡೆದ ವಿಷಯವನ್ನು ಜನರು ತಿಳಿಸಿದರು.
ಈ ಸಂದರ್ಭದಲ್ಲಿ ಮಹಿಳೆಯೊಬ್ಬರು ಕಣ್ಣಿರು ಸುರಿಸಿದ್ದಾರೆ. ಟೈಲ್ಸ್ ಪೀಸ್ಗಳನ್ನು ಮೂರು ಚೀಲ ತುಂಬಿಟ್ಟಿದ್ದೇನೆ. ಎಸ್ಪಿಗೆ ಹೊಡೆತ ಬಿದ್ದ ಮೇಲೆ ಲಾಠಿ ಚಾರ್ಜ್ ನಡೆಯಿತು. ಈಗ ನಾವು ಇಲ್ಲಿ ವಾಸಿಸಬೇಕೋ ಅಥವಾ ಬೇಡವೋ ಎಂಬ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ನನ್ನ ಪತ್ನಿ ಸುಶೀಲಾ ಉರ್ದು ಶಾಲೆ ಶಿಕ್ಷಕಿ. ಅವಳು ಉರ್ದು ಮಕ್ಕಳಿಗೆ ಕನ್ನಡ ಕಲಿಸಿದ್ದಳು. ನನ್ನ ಪತ್ನಿ ಕಲಿಸಿದ 90% ರಷ್ಟು ಮಕ್ಕಳು ನಮ್ಮ ಮನೆ ಮೇಲೆ ದಾಳಿ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.