ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಕುಂಜತಬೈಲ್ ಹಾಗೂ ಶಕ್ತಿನಗರ ಕ್ಕೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಭರತ್ ಶೆಟ್ಟಿ ಯವರು ಮಂಗಳವಾರ ಭೇಟಿ ನೀಡಿದರು. ನಮಗಾಗಿ ತಮ್ಮ ಪ್ರಾಣದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆ ಸಹೋದರಿಯರ ಸೇವೆಯನ್ನು ಶಾಸಕರು ಶ್ಲಾಘಿಸಿದರು. ಮನೆಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿರುವ ಆಶಾ ಕಾರ್ಯಕರ್ತೆ ತಾಯಂದಿರು ಎಷ್ಟೋ ಟೀಕೆ ಕೇಳಿದರೂ ಸೇವೆಯಲ್ಲಿ ನಿರತರಾಗಿರುವುದರಿಂದ ಸಾರ್ವಜನಿಕರು ನೆಮ್ಮದಿಯಲ್ಲಿ ಇರುವಂತಾಗಿದೆ ಎಂದು ಅಭಿನಂದಿಸಿದರು. ಆಶಾ ಕಾರ್ಯಕರ್ತೆಯರು ಕರ್ತವ್ಯದಲ್ಲಿದ್ದಾಗ ಏನೇ ತೊಂದರೆ ಆದ್ರೂ ಒಬ್ಬ ಚುನಾಯಿತ ಜನಪ್ರತಿನಿಧಿಯಾಗಿ ನಾನು ಮತ್ತು ಸಮಾಜ ನಿಮ್ಮೊಂದಿಗೆ ಇದೆ. ನಿಮ್ಮ ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದಲ್ಲಿ ಶಾಸಕನ ನೆಲೆಯಲ್ಲಿ ಸರಕಾರದ ಮೂಲಕ ಪರಿಹರಿಸಲು ಏನು ಮಾಡಲು ಸಾಧ್ಯವಿದೆಯೋ ಆ ಬಗ್ಗೆ ಕೆಲಸ ಮಾಡಲಾಗುವುದು ಎಂದು ಶಾಸಕರು ಹೇಳಿದರು. ಆಹಾರ ಸಾಮಗ್ರಿಗಳ ಕಿಟ್ ಮತ್ತು ಸಹಾಯಧನದ ಜೊತೆಗೆ ಬಿಸಿಲು, ಮಳೆ ಲೆಕ್ಕಿಸದೆ ನಮಗಾಗಿ ಶ್ರಮಿಸುತ್ತಿರುವ ನರ್ಸ್, ಆಶಾ ಕಾರ್ಯಕರ್ತೆ ಸಹೋದರಿಯರಿಗೆ ಅಗತ್ಯವಾಗಿ ಬೇಕಾಗುವ ಕೊಡೆ ವಿತರಿಸಿದರು. ಶಾಸಕರೊಂದಿಗೆ ಮಂಗಳೂರು ನಗರ ಉತ್ತರ ಮಂಡಲದ ಭಾಜಪಾ ಅಧ್ಯಕ್ಷರಾದ ತಿಲಕರಾಜ್ ಕೃಷ್ಣಾಪುರ, ಮನಪಾ ಸದಸ್ಯರಾದ ಶರತ್ ಕುಮಾರ್, ಕಿರಣ್ ಕುಮಾರ್ ಕೋಡಿಕಲ್, ಸುಮಂಗಲಾ, ಗಾಯತ್ರಿ, ಶಕಿಲಾಕಾವ, ವನಿತಾ ಪ್ರಸಾದ್, ಬಿಜೆಪಿ ಮುಖಂಡರಾದ ರಾಜೇಶ್ ಕೊಟ್ಟಾರಿ, ಸಂದೀಪ್ ಪಚ್ಚನಾಡಿ ಸಹಿತ ಕಾರ್ಯಕರ್ತರು ಉಪಸ್ಥಿತರಿದ್ದರು. ಶಾಸಕರ ಈ ಕಾರ್ಯಕ್ಕೆ ಅಲ್ಲಿನ ನರ್ಸ್ ಗಳು, ಆಶಾ ಕಾರ್ಯಕರ್ತೆಯರು ಧನ್ಯವಾದದ ಮಾತುಗಳನ್ನು ಆಡಿದರು. ಈಗಾಗಲೇ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸುರತ್ಕಲ್, ಕಾಟಿಪಳ್ಳ, ಕುಳಾಯಿ, ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸ್ವತ: ಶಾಸಕ ಡಾ.ಭರತ್ ಶೆಟ್ಟಿಯವರು ಭೇಟಿ ನೀಡಿ ಆಹಾರ ಸಾಮಾಗ್ರಿ ಕಿಟ್, ಸಹಾಯಧನ, ಕೊಡೆ ವಿತರಿಸಿ ಆರೋಗ್ಯ ಯೋಧರಂತೆ ಕೆಲಸ ಮಾಡುವ ಆಶಾ ಕಾರ್ಯಕರ್ತೆಯರಲ್ಲಿ ಧೈರ್ಯ ತುಂಬಿದ್ದನ್ನು ಸ್ಮರಿಸಬಹುದು.
ಈ ರೀತಿ ಗಣಪತಿಯನ್ನು ಪೂಜಿಸಿ ಸಾಕು,ಜೀವನದಲ್ಲಿ ಎಲ್ಲಾ ಸಂಪತ್ತು ಆಸಕ್ತಿಗಳು ನಿಮ್ಮ ಬಳಿಗೆ ಬರುತ್ತವೆ. ಗಣೇಶ ಚತುರ್ಥಿಯಂದು ಗಣೇಶನ ಪೂಜೆಯ ಸಮಯಗಳ ವಿವರಣೆ.
ಈ ರೀತಿ ಗಣಪತಿಯನ್ನು ಪೂಜಿಸಿ ಸಾಕು,ಜೀವನದಲ್ಲಿ ಎಲ್ಲಾ ಸಂಪತ್ತು ಆಸಕ್ತಿಗಳು ನಿಮ್ಮ ಬಳಿಗೆ ಬರುತ್ತವೆ. ಗಣೇಶ ಚತುರ್ಥಿಯಂದು ಗಣೇಶನ ಪೂಜೆಯ ಸಮಯಗಳ ವಿವರಣೆ. ಗಣೇಶ ಚತುರ್ಥಿಯನ್ನು ಎಲ್ಲಾ ದೇವರುಗಳ...