ಬೆಂಗಳೂರು : ವಿಧಾನ ಪರಿಷರತ್ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿರುವ ಗೋವಿಂದರಾಜು ಉದ್ಯಮಿ ಅಲ್ಲ ಅವರೊಬ್ಬ ಪ್ರಗತಿಪರ ರೈತ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಜೆಡಿಎಸ್ ಅಭ್ಯರ್ಥಿ ಒಬ್ಬ ಉದ್ಯಮಿ ಎಂದು ಸುದ್ದಿ ಆಗುತ್ತಿದೆ. ಆದರೆ ಗೋವಿಂದರಾಜು ಉದ್ಯಮಿ ಅಲ್ಲ ಅವರೊಬ್ಬ ಪ್ರಗತಿಪರ ರೈತ ಆಗಿದ್ದರೆ. ಮೊದಲು ಅವರು ಸರ್ಕಾರಿ ಸೇವೆಯಲ್ಲಿದ್ದರು ಸ್ವಯಂ ನಿವೃತಿ ಪಡೆದು ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲದೆ ಪಕ್ಷಕ ಸಂಘಟನೆ ಮಾಡಲು ಕೆಲಸ ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಪಕ್ಷದ ಕಾರ್ಯಕರ್ತ ಆಶೆಯಂತೆ ಗೋವಿಂದರಾಜು ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ಹೆಚ್ಡಿಕೆ ಹೇಳಿದ್ದಾರೆ.
ಇದೆ ಸಮಯದಲ್ಲಿ ಭಾರತ – ಚೀನಾ ಗಡಿ ಸಂಘರ್ಷಣೆ ಬಗ್ಗೆ ಮಾತನಾಡಿದ ಅವರು ಹಲವು ದಿನಗಳಿಂದ ಭಾರತ – ಚೀನಾ ನಡುವೆ ಸಂಘರ್ಷ ನಡೆಯುತ್ತಿದೆ. ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ದೇಶಕ್ಕೆ ಇದರು ಸಂಕಷ್ಟದ ಸಮಯ. ಕೊರೊನಾ ಸೋಂಕಿ ಕಾರಣಕ್ಕೆ ದೇಶದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ಹಾಗಾಗಿ ಇದು ಯುದ್ದ ಮಾಡುವ ಸಮಯವಲ್ಲ. ಶಾಂತಿ ಕಾಪಾಡಿಕೊಳ್ಳಬೇಕಿದೆ. ಮಾತುಕತೆ ಮೂಲಕ ಶಾಂತಿ ಕಾಪಾಡಿಕೊಳ್ಳಬೇಕು. ಇಂತಹ ಸಮಯದಲ್ಲಿ ವೀರಾವೇಶದ ಮಾತುಗಳು ಆಡಬಾರದು. ಮಾತುಕತೆ ಮೂಲಕ ಸಮಸ್ಯೆ ಬಗೆ ಹರಿಸಿಕೊಳ್ಳಬೇಕು. ಹುತಾತ್ಮರಾದ ಯೋಧರಿಗೆ ಸರ್ಕಾರ ಹೆಚ್ಚಿನ ನೆರವು ನೀಡಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ.








