ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹಲಕ್ಷ್ಮಿ’ ಯೋಜನೆಯ ₹2,000 ಸಹಾಯಧನ ಕಳೆದ ನಾಲ್ಕು ತಿಂಗಳಿಂದ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಜಮಾ ಆಗಿಲ್ಲ. ಈ ಹಣ ಯಾವಾಗ ಎಂಬ ಪತ್ರಕರ್ತರ ಪ್ರಶ್ನೆಗೆ ಕಾಂಗ್ರೆಸ್ ಸಾಧನಾ ಸಮಾವೇಶದಲ್ಲಿ ಉಪಮುಖ್ಯಮಂತ್ರಿ (ಡಿಸಿಎಂ) ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ನಾವು ಗೃಹಲಕ್ಷ್ಮಿ ಹಣವನ್ನ ಪ್ರತಿ ತಿಂಗಳೂ ಕೊಡ್ತೀವಿ ಅಂತ ಹೇಳಿಲ್ಲ. ಯೋಜನೆಯ ಉದ್ದೇಶ ಸಾಂಸಾರಿಕ ಹೊರೆ ತಗ್ಗಿಸಲು ಆರ್ಥಿಕ ಬೆಂಬಲ. ಆದರೆ ಪ್ರತಿ ತಿಂಗಳು ಜಮಾ ಮಾಡುತ್ತೀವಿ ಎಂದು ನಾವು ಹೇಳಿಲ್ಲ ಎಂದು ಅವರು ಕಾಂಗ್ರೆಸ್ ಸಾಧನಾ ಸಮಾವೇಶದಲ್ಲಿ ಹೇಳಿದ್ದಾರೆ.
ನೀವು ಒಬ್ಬ ನಾಗರಿಕರಾಗಿ ಸರಿಯಾಗಿ ತೆರಿಗೆ (ಟ್ಯಾಕ್ಸ್) ಕಟ್ಟುತ್ತಿದ್ದರೆ, ಸರ್ಕಾರವೂ ನಿಮ್ಮ ಬೆಂಬಲಕ್ಕೆ ಬರುತ್ತದೆ.. ನೀವು ಟ್ಯಾಕ್ಸ್ ಕಟ್ಟುತ್ತಾ ಇರಬೇಕು. ನಾವು ದುಡ್ಡು ಕೊಡ್ತಾ ಇರಬೇಕು. ಗುತ್ತಿಗೆ ಕೆಲಸ ಮಾಡುವವರಿಗೆ ಹಣ ಬರುವುದು 2, 3, 5 ವರ್ಷ ಆಗುತ್ತೆ ಅಲ್ವಾ. ಅದೇ ರೀತಿ ಯಜಮಾನಿಯರಿಗೆ ಬಂದಾಗ ಬರುತ್ತೆ ಎಂದು ಹೇಳಿದ್ದಾರೆ.
ಗೃಹಲಕ್ಷ್ಮಿಯ ಫಲಾನುಭವಿಯರಿಗೆ ಹಣ ತಲುಪೋದು ಸ್ವಲ್ಪ ಹಿಂದೆ ಮುಂದೆ ಆಗಬಹುದು; ಆದರೆ ತಲುಪುತ್ತದೆ, ಎಂದು ಸಮಾವೇಶದ ವೇದಿಕೆಯಲ್ಲಿ ಅವರು ಸ್ಪಷ್ಟನೆ ನೀಡಿದರು








