ಕನ್ನಡತಿ ಧಾರಾವಾಹಿಯ ನಟಿ ರಂಜನಿ ರಾಘವನ್ ಅವರ ಮದುವೆ ಫಿಕ್ಸ್ ಆಗಿರಬಹುದು ಎಂಬ ಗುಲ್ಲು ಹಬ್ಬಿದೆ. ಸುಂದರವಾದ ಸೀರೆ ಉಟ್ಟುಕೊಂಡಿರುವ ಅವರು ಕ್ಯೂಟ್ ಆಗಿ ಕಾಣುತ್ತಿದ್ದು, ಫೋಟೋಸ್ ಈಗ ವೈರಲ್ ಆಗಿದೆ.
ಆಕಾಶ ನೀಲಿ ಬಣ್ಣದ ಸೀರೆಯುಟ್ಟಿರುವ ಅವರು, ಆಕರ್ಷಕ ಆಭರಣ ತೊಟ್ಟು, ಸರಳವಾದ ಮೇಕಪ್ ಮಾಡಿಕೊಂಡಿದ್ದಾರೆ. ಹೀಗಾಗಿ ಸರಳವಾಗಿ ಸುಂದರವಾಗಿ ಕಾಣುತ್ತಿದ್ದಾರೆ. ಸದ್ಯ ಅವರು ತಮ್ಮ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಾನೇ ವೀಣೆ.. ನೀನೇ ತಂತಿ.. ಅವನೇ ವೈಣಿಕಾ. ಸರ್ವರಿಗೂ ಗೌರಿ ಗಣಪತಿ ಹಬ್ಬದ ಶುಭಾಶಯಗಳು ಎಂದು ಅವರು ಬರೆದುಕೊಂಡಿದ್ದಾರೆ.
ಹಸಿರು ಪರಿಸರದ ಮಧ್ಯೆ ನಟಿ ವೀಣೆ ಹಿಡಿದು ಅವರು ತಲ್ಲೀನರಾಗಿದ್ದಾರೆ. ತನ್ಮಯತೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಮುದ್ದು ಗೌರಿ ಸರಸ್ವತಿ ಹಾಗೆ ವೀಣೆ ಹಿಡಿದು ನಿಂತಿದ್ದಾರೆ. ವೀಣೆ ನುಡಿಸುತ್ತ ನಮಗಾಗಿ ಒಂದು ದೇವರ ನಾಮ ಹಾಡಿ ರಂಜು. ಗೌರಿ ಗಣೇಶ ಹಬ್ಬದ ಶುಭಾಶಯಗಳು ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.