ಮದುವೆಗೆ ಬಂದ ಅತಿಥಿಗಳ ಬಳಿ ಊಟದ ಬಿಲ್ ಪಾವತಿಸಿ ಎಂದ ವಧು..!

1 min read

ಮದುವೆಗೆ ಬಂದ ಅತಿಥಿಗಳ ಬಳಿ ಊಟದ ಬಿಲ್ ಪಾವತಿಸಿ ಎಂದ ವಧು..!

ಮದುವೆಗಳಲ್ಲಿ ಸಾಮಾನ್ಯವಾಗಿ ಬಂದ ಅತಿಥಿಗಳಿಗೆ ಭೋಜನ ವ್ಯವಸ್ಥೆ ಮಾಡುವುದು ಕಾಮನ್.. ಆದ್ರೆ ಇಲ್ಲೊಂದು ಮದುವೆಯಲ್ಲಿ ವಧು ಅತಿಥಿಗಳು ಮಾಡಿದ ಊಟದ ವೆಚ್ಚವನ್ನ ಭರಿಸುವಂತೆ ಕೇಳಿರುವ ವಿಚಿತ್ರ ಘಟನೆ ನೆಟ್ಟಿಗರನ್ನ ಬೆರಗಾಗಿಸಿದೆ..ಹೌದು ಮದುವೆಯ ಆರತಕ್ಷತೆಯ ವೆಚ್ಚವನ್ನು ಭರಿಸಲು ಆಗದೇ ವಧು ತನ್ನ ಅತಿಥಿಗಳಿಗೆ ಅಂದಾಜು 7,370ರೂ. (ಅಮೇರಿಕನ್ ಡಾಲರ್ 99) ಗಳನ್ನು ಪಾವತಿಸುವಂತೆ ಕೇಳಿದ್ದಾರೆ.

ಈ ವಿಚಿತ್ರ ಘಟನೆ ಕುರಿತಂತೆ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ನಾನು ಕೆಲ ದಿನಗಳ ಹಿಂದೆ ಮದುವೆಯೊಂದಕ್ಕೆ ಹೋಗಿದ್ದೆ.ಈ ವೇಳೆ ಆರತಕ್ಷತೆಗೆ ಆಗಮಿಸಿದ ಅತಿಥಿಗಳಿಗಳು 7,300 ರೂಪಾಯಿಯನ್ನು ಪಾವತಿಸಿ ಊಟ ಮಾಡುವಂತೆ ವಧು ಹೇಳಿದಳು. ಕಾರಣ ವಧು ಮತ್ತು ವರ ಮದುವೆಗೆ ಹಣ ಖರ್ಚು ಮಾಡಲು ಶಕ್ತರಾಗಿರಲಿಲ್ಲ ಎಂದಿದ್ದಾರೆ.Saakshatv story episode 1

ಆಹ್ವಾನ ಪತ್ರಿಕೆಯಲ್ಲಿ ವಧು, ತನಗೆ ಊಟದ ವೆಚ್ಚ ಭರಿಸುವ ಸಾಮರ್ಥ್ಯ ಇಲ್ಲ. ಹಾಗಾಗಿ ಮದುವೆಗೆ ಆಗಮಿಸುವ ಅತಿಥಿಗಳು ತಮ್ಮ ಊಟದ ಬಿಲ್ ಪಾವತಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು, ಮದುವೆಗೆ ಆಗಮಿಸುವ ಅತಿಥಿಗಳಿಗೆ 7,300 ರೂಪಾಯಿ ಕೇಳಿದ್ದರು ಎಂದಿದ್ದಾರೆ.ಮದುವೆ ಸಮಾರಂಭ ಮನೆಯಿಂದ ದೂರದಲ್ಲಿದ್ದು, 4 ಗಂಟೆಗಳ ಕಾಲ ಪ್ರಯಾಣ ಮಾಡಬೇಕಾಯಿತು.

ಹೆಚ್ಚು ಸಮಯದ ಜೊತೆಗೆ ಪೆಟ್ರೋಲ್ ಹಾಗೂ ಹಣ ಕೂಡ ವ್ಯಯ ಮಾಡಲಾಯಿತು. ಅಲ್ಲದೇ ಮದುವೆಯಲ್ಲಿ ಊಟ ಮಾಡಲು ನಮ್ಮ ಹಣವನ್ನೇ ಪಾವತಿಸಬೇಕಾಯಿತು. ಮದುವೆ ದಿನ ವೇದಿಕೆ ಮುಂಭಾಗ ಬಾಕ್ಸ್ ಇಟ್ಟು ಡಬ್ಬದ ಮೇಲೆ ಅತಿಥಿಗಳಿಗೆ ಹಣ ಹಾಕುವಂತೆ ಮನವಿ ಮಾಡಲಾಗಿತ್ತು. ಜೋಡಿಯ ಹನಿಮೂನ್ ಮತ್ತು ಒಳ್ಳೆಯ ಭವಿಷ್ಯ ಹಾಗೂ ಹೊಸ ಮನೆಗಾಗಿ ಹಣ ನೀಡಬೇಕೆಂದು ಡಬ್ಬದ ಮೇಲೆ ಬರೆಯಲಾಗಿತ್ತು ಎಂದು ತಿಳಿಸಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದ್ದು, ಹಲವಾರು ಮಂದಿ ಕಾಮೆಂಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd