Weight Loss: ಈ 1 ಚಮಚ ಆಯುರ್ವೇದದ ಮಿಶ್ರಣ ತೂಕ ಇಳಿಸಲು ಸಹಾಯ ಮಾಡುತ್ತದೆ…
ಅಶ್ವಗಂಧ ಭಾರತೀಯ ಆಯುರ್ವೇದದಲ್ಲಿ ಪ್ರಸಿದ್ಧವಾದ ಗಿಡಮೂಲಿಕೆಯಾಗಿದೆ. ಈ ಒಂದು ಮೂಲಿಕೆಯಿಂದ ಹಲವಾರು ಕಾಯಿಲೆಗಳಗೆ ಔಷಧಿಯಾಗಿ ತೆಗೆದುಕೊಳ್ಳಲಾಗುತ್ತದೆ. ಅಶ್ವಗಂಧದಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆಯಾದರೂ ಇಂದು ನಾವು ತೂಕ ಇಳಿಸಲು ಹೇಗೆ ಸಹಕಾರಿ ಎಂಬುದರ ಕುರಿತು ನೋಡೋಣ..
ಅಶ್ವಗಂಧ ತೂಕ ಇಳಿಸಲು ಹೇಗೆ ಸಹಕಾರಿ ?
ಅಶ್ವಗಂಧ ಕೇವಲ ದೇಹದ ಒಂದು ನಿರ್ದಿಷ್ಟ ವಿಷಯದ ಮೇಲೆ ಕೇಂದ್ರಿಕರಿಸುವುದಿಲ್ಲ. ಇದು ತೂಕ ಇಳಿಸಲು ಸುಲಭ ಮತ್ತು ಪರಿಣಾಮಕಾರಿಯಾಗಿ ಮಾಡಲು ಸಹಾಯ ಮಾಡುವ ಹಲವಾರು ವಿಭಿನ್ನ ಅಂಶಗಳ ಮೇಲೆ ಕೆಂದ್ರೀಕರಿಸುತ್ತದೆ. ಅಶ್ವಗಂಧವು ತೂಕ ಇಳಿಸಲು ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಎನ್ನುದನ್ನ ನೋಡುವುದಾದರೆ.
ಒತ್ತಡವನ್ನು ನಿವಾರಿಸುವಲ್ಲಿ ಸಹಾಯ
ತೂಕ ಹೆಚ್ಚಾಗಲು ಮುಖ್ಯ ಕಾರಣವೆಂದರೆ ಒತ್ತಡ. ಒತ್ತಡಕ್ಕೆ ಒಳಗಾದಾಗ, ಜನರು ಹೆಚ್ಚು ಜಂಕ್ ಪುಡ್ ಗಳ ಮೊರೆಹೋಗುತ್ತಾರೆ. ಇದರಿಂದ ದೇಹಕ್ಕೆ ಅನಿವಾರ್ಯವಲ್ಲದ ಹೆಚ್ಚುವರಿ ಕಿಲೋಗಳೂ ಸರಿಕೊಳ್ಳುತ್ತವೆ. ಮತ್ತು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅಶ್ವಗಂಧ ಒತ್ತಡವನ್ನ ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ತೂಕ ಇಳಿಕೆಗೆ ಕಾರಣವಾಗುತ್ತದೆ. ನಷ್ಟವನ್ನು ಉತ್ತೇಜಿಸುತ್ತದೆ.
ನಿದ್ರೆಯ ಗುಣಮಟ್ಟ ಸುಧಾರಣೆ
ಸಾಕಷ್ಟು ನಿದ್ರೆ ಮಾಡದಿದ್ದರೆ ಹಾರ್ಮೋನುಗಳ ಅಸಮತೋಲನ ಹೆಚ್ಚಾಗುತ್ತದೆ. ಇದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅಶ್ವಗಂಧ ಸೇವೆನೆಯಿಂದ ನಿದ್ರೆಯ ಗುಣಮಟ್ಟ ಮತ್ತು ಪ್ರಮಾಣ ಹೆಚ್ಚಾಗುತ್ತದೆ. ಈ ಮೂಲಕ ಪರೋಕ್ಷವಾಗಿ ತೂಕ ಹೆಚ್ಚಾಗದಂತೆ ಸಹಾಯ ಮಾಡುತ್ತದೆ.
ಜೀರ್ಣಕ್ರಿಯೆ ಸುಧಾರಣೆ
ಅಶ್ವಗಂಧ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಅಸಮರ್ಪಕ ಜೀರ್ಣಕ್ರಿಯೆಯಿಂದ ತೂಕವನ್ನ ಕಳೆದುಕೊಳ್ಳುವುದು ಕಷ್ಟ. ನೀವು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನ ಹೊಂದಿದ್ದರೆ ಈ ಮೂಲಿಕೆ ನಿಮಗೆ ಸಹಾಯ ಮಾಡಬಲ್ಲದು. ಅಶ್ವಗಂಧವು ಜೀರ್ಣಕ್ರಿಯೆಯನ್ನ ಹೆಚ್ಚಿಸಿ ಕೊಬ್ಬನ್ನ ಕರಗಿಸುವಲ್ಲಿ ದೇಹಕ್ಕೆ ಸಹಾಯ ಮಾಡುತ್ತದೆ.
ಉತ್ತಮ ಆ್ಯಂಟಿಆಕ್ಸಿಡೆಂಟ್
ಅಶ್ವಗಂಧವು ಆ್ಯಂಟಿಆಕ್ಸಿಡೆಂಟ್‌ಗಳಿಂದ ಕೂಡಿದ್ದು ಇದು ತೂಕ ಇಳಿಸಲು ಅವಶ್ಯಕವಾಗಿದೆ. ನಿಮ್ಮ ಚಯಾಪಚಯ ಮತ್ತು ಶಕ್ತಿಯನ್ನ ಹೆಚ್ಚಿಸಲು ಆಂಟಿ ಆಕ್ಸಿಡೆಂಟ್ ಗಳು ಅತ್ಯಗತ್ಯ. ಇದು ಉರಿಯೂತವನ್ನ ಕಡಿಮೆ ಮಾಡುತ್ತದೆ ಮತ್ತು ಕೊಬ್ಬು ಕರಗಿಸುವಲ್ಲಿ ಸಹಾಯ ಮಾಡುತ್ತದೆ.
ಅಶ್ವಗಂಧವನ್ನು ಹೇಗೆ ಸೇವಿಸುವುದು ?
ಅಶ್ವಗಂಧವು ಕ್ಯಾಪ್ಸುಲ್ ರೂಪದಲ್ಲಿ ಲಭ್ಯವಿದೆ, ಆದರೆ ಒಣಗಿದ ಅಶ್ವಗಂಧದ ಎಲೆಗಳಿಂದ ಮಾಡಿದ ಪುಡಿಯನ್ನ ಸೇವಿಸಿದಾಗ ಅದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಒಂದು ಲೋಟ ಹಾಲಿಗೆ ಒಂದು ಚಮಚ ಒಣಗಿದ ಅಶ್ವಗಂಧದ ಎಲೆಗಳನ್ನು ಸೇರಿಸಿ ಮತ್ತು ಸ್ವಲ್ಪ ಜೇನುತುಪ್ಪ ಅಥವಾ ಏಲಕ್ಕಿ ಸೇರಿಸಿ ರುಚಿ ಹೆಚ್ಚಿಸಿ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಇದರಿಂದ ನೀವು ಪರಿಣಾಮಕಾರಿ ಫಲಿತಾಂಶಗಳನ್ನ ನೋಡುತ್ತೀರ.