ADVERTISEMENT
Saturday, November 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಎಂಜಿನಿಯರ್ ನೇಮಕಾತಿ ಹಗರಣದ ತನಿಖೆ ಯಾರ ಮನೆ ಬಾಗಿಲಿಗೆ ಹೋಗಿ ಬೀಳುತ್ತದೋ ನೋಡೋಣ? 20 ವರ್ಷಗಳ ಹಿಂದಿನ ಕೇಸ್ ಈಗ ತೆಗೆದಿರುವ ಇ.ಡಿ ಅಧಿಕಾರಿಗಳು ಅಂದಿನಿಂದ ಕತ್ತೆ ಕಾಯುತ್ತಿದ್ರಾ?ಬಿಜೆಪಿ ಸೇರಿದ ಭ್ರಷ್ಟರೆಲ್ಲಾ ವಾಷಿಂಗ್ ಮಷಿನ್‌ನಲ್ಲಿ ವೈಟ್ ವಾಶ್ ಆದ್ರಾ? ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ

Shwetha by Shwetha
November 28, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ರಾಮನಗರ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಂಜಿನಿಯರ್ ನೇಮಕಾತಿ ಹಗರಣವೂ ಸೇರಿದಂತೆ ಯಾವುದೇ ಅಕ್ರಮದ ತನಿಖೆಯಿಂದಲೂ ನಮ್ಮ ಸರ್ಕಾರ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಈ ಹಗರಣದ ಹಿಂದೆ ಎಷ್ಟೇ ಪ್ರಭಾವಿಗಳು ಇದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಇಂದಲ್ಲ ನಾಳೆ ಸತ್ಯ ಹೊರಬರಲೇಬೇಕು, ಈಗಾಗಲೇ ಈ ಕುರಿತು ಸಿಐಡಿ ಹಾಗೂ ಎಸ್‌ಐಟಿ ತನಿಖೆ ನಡೆದಿದ್ದು, ಎಲ್ಲವೂ ಪಾರದರ್ಶಕವಾಗಿ ಸಾಗುತ್ತಿದೆ. ಅಂತಿಮವಾಗಿ ಇದು ಯಾರ ಮನೆ ಬಾಗಿಲಿಗೆ ಹೋಗಿ ಬೀಳುತ್ತದೋ ಕಾದು ನೋಡೋಣ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾರ್ಮಿಕವಾಗಿ ಎಚ್ಚರಿಕೆ ನೀಡಿದ್ದಾರೆ.

ಇ.ಡಿ ದೂರಿನ ಬಗ್ಗೆ ಕಾನೂನು ಅಭಿಪ್ರಾಯ: ಬಿಜೆಪಿ ಸೇರಿದ ತಕ್ಷಣ ವೈಟ್ ವಾಶ್ ಆದ್ರಾ?

Related posts

10-15 ದಿನಗಳಿಂದ ಆಶಾ ಕಾರ್ಯಕರ್ತೆಯರು ಕೆಲಸ ಮಾಡದಿದ್ದರೂ ಜನ ಆರೋಗ್ಯವಾಗಿದ್ದಾರೆ, ಬ್ಲ್ಯಾಕ್‌ಮೇಲ್‌ಗೆ ಸರ್ಕಾರ ಮಣಿಯಲ್ಲ, ತಕ್ಷಣ ಕರ್ತವ್ಯಕ್ಕೆ ಮರಳಿ: ಆಶಾ ಕಾರ್ಯಕರ್ತೆಯರಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ!

10-15 ದಿನಗಳಿಂದ ಆಶಾ ಕಾರ್ಯಕರ್ತೆಯರು ಕೆಲಸ ಮಾಡದಿದ್ದರೂ ಜನ ಆರೋಗ್ಯವಾಗಿದ್ದಾರೆ, ಬ್ಲ್ಯಾಕ್‌ಮೇಲ್‌ಗೆ ಸರ್ಕಾರ ಮಣಿಯಲ್ಲ, ತಕ್ಷಣ ಕರ್ತವ್ಯಕ್ಕೆ ಮರಳಿ: ಆಶಾ ಕಾರ್ಯಕರ್ತೆಯರಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ!

November 28, 2026
ಯೋಗಿ ಆದಿತ್ಯನಾಥ್ ಇಲ್ಲದಿದ್ದರೆ ಉತ್ತರ ಪ್ರದೇಶವೇ ಇಲ್ಲ: ಹಿಂದುತ್ವದ ಪ್ರಬಲ ಮುಖ ಹಾಗೂ ಸಮರ್ಥ ನಾಯಕ ಎಂದು ಕೊಂಡಾಡಿದ ಶಿವಸೇನೆ ಸಂಸದ ಸಂಜಯ್ ರಾವತ್!

ಯೋಗಿ ಆದಿತ್ಯನಾಥ್ ಇಲ್ಲದಿದ್ದರೆ ಉತ್ತರ ಪ್ರದೇಶವೇ ಇಲ್ಲ: ಹಿಂದುತ್ವದ ಪ್ರಬಲ ಮುಖ ಹಾಗೂ ಸಮರ್ಥ ನಾಯಕ ಎಂದು ಕೊಂಡಾಡಿದ ಶಿವಸೇನೆ ಸಂಸದ ಸಂಜಯ್ ರಾವತ್!

November 28, 2026

ನಗರದ ಜಾನಪದ ಲೋಕದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆಪಿಎಸ್‌ಸಿ (KPSC) ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ) ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿರುವ ಕುರಿತು ಪ್ರತಿಕ್ರಿಯಿಸಿದರು. ಇ.ಡಿ ನೀಡಿರುವ ದೂರನ್ನು ನಾನು ಇನ್ನೂ ನೋಡಿಲ್ಲ. ಇನ್ನೂ ಮೂರು ಪ್ರಕರಣಗಳನ್ನು ದಾಖಲಿಸಬೇಕು ಎಂದು ಅವರು ಹೇಳುತ್ತಿದ್ದಾರೆ. ಈ ಎಲ್ಲದರ ಕುರಿತು ಸೂಕ್ತ ಕಾನೂನು ಅಭಿಪ್ರಾಯ ಪಡೆದು ಮುಂದಿನ ಪರಿಶೀಲನೆ ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಕೇಂದ್ರ ತನಿಖಾ ಸಂಸ್ಥೆಗಳ ಕಾರ್ಯವೈಖರಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಿಯಾಂಕ್ ಖರ್ಗೆ, ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸಿಕೊಂಡು ಐ.ಟಿ ಮತ್ತು ಇ.ಡಿ ದಾಳಿಗಳನ್ನು ನಡೆಸಿ ಸಾವಿರಾರು ಪ್ರಕರಣಗಳನ್ನು ದಾಖಲಿಸಲಾಗಿದೆ. ಆದರೆ, ಈವರೆಗೆ ಎಷ್ಟು ಜನರಿಗೆ ಶಿಕ್ಷೆಯಾಗಿದೆ? ಕೇವಲ ಶೇಕಡಾ 2ರಷ್ಟು ಪ್ರಕರಣಗಳಲ್ಲೂ ಶಿಕ್ಷೆಯಾಗಿಲ್ಲ. ಈ ಕಟು ಸತ್ಯವನ್ನು ಸ್ವತಃ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಸಂಸತ್ ಅಧಿವೇಶನದಲ್ಲಿ ತಿಳಿಸಿದ್ದಾರೆ. ತಮ್ಮ ಮೇಲೆ ದಾಳಿಯಾಗುತ್ತಿದ್ದಂತೆಯೇ ಹಲವು ನಾಯಕರು ಬಿಜೆಪಿ ಸೇರಿದರು, ಇನ್ನು ಕೆಲವರು ಮುಖ್ಯಮಂತ್ರಿಗಳೂ ಆದರು. ಹಿಂದೆ ಅವರೆಲ್ಲರನ್ನೂ ಇದೇ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಭ್ರಷ್ಟರು ಎಂದು ಕರೆದಿದ್ದರು. ಹಾಗಾದರೆ ಬಿಜೆಪಿ ಸೇರುತ್ತಿದ್ದಂತೆಯೇ ಅವರೆಲ್ಲರೂ ವಾಷಿಂಗ್ ಮಷಿನ್‌ನಲ್ಲಿ ವೈಟ್ ವಾಶ್ ಆದ್ರಾ ಎಂದು ಖಾರವಾಗಿ ಪ್ರಶ್ನಿಸಿದರು.

20 ವರ್ಷಗಳ ಕಾಲ ಕತ್ತೆ ಕಾಯುತ್ತಿದ್ರಾ? ಚುನಾವಣೆ ಬಂದಾಗಲೆಲ್ಲಾ ಇ.ಡಿ ದಾಳಿ!

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಎಳೆದು ತರುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರು, ಖರ್ಗೆ ಅವರಿಗೂ ಯಂಗ್ ಇಂಡಿಯಾ ಟ್ರಸ್ಟ್‌ಗೂ ಏನು ಸಂಬಂಧ? ಬರೋಬ್ಬರಿ 20 ವರ್ಷಗಳ ಹಿಂದಿನ ವಿಷಯವನ್ನು ಇ.ಡಿ ಅಧಿಕಾರಿಗಳು ಈಗ ಕೆದಕಿದ್ದಾರೆ. ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರ ಮೇಲೂ ಅನೇಕ ಪ್ರಕರಣಗಳನ್ನು ಜಡಿದಿದ್ದಾರೆ. ರಾಬರ್ಟ್ ವಾದ್ರಾ ಸೇರಿದಂತೆ ಹಲವರ ಹೆಸರನ್ನು ತೆಗೆದುಕೊಂಡಿದ್ದಾರೆ. ಹಾಗಾದರೆ ಅಂದಿನಿಂದ ಇವರೇನು ಕತ್ತೆ ಕಾಯುತ್ತಿದ್ರಾ? ಇದುವರೆಗೆ ಒಂದೇ ಒಂದು ಪ್ರಕರಣವನ್ನೂ ಸಾಬೀತುಪಡಿಸಲು ಇವರಿಗೆ ಸಾಧ್ಯವಾಗಿಲ್ಲ. ಸುಮ್ಮನೆ ದಾಳಿ ನಡೆಸಿ ವಿರೋಧ ಪಕ್ಷಗಳ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಸುಪ್ರೀಂ ಕೋರ್ಟ್ ಕೂಡ ತನಿಖಾ ಸಂಸ್ಥೆಗಳಿಗೆ ಛೀಮಾರಿ ಹಾಕಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಇಂತಹ ದಾಳಿಗಳು ಇನ್ನಷ್ಟು ಜಾಸ್ತಿಯಾಗಲಿವೆ. ಅದರಲ್ಲೂ ಬಿಜೆಪಿ, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ವಿರುದ್ಧ ಯಾರಾದರೂ ಧ್ವನಿ ಎತ್ತಿದರೆ ತಕ್ಷಣವೇ ಅವರ ಮೇಲೆ ದಾಳಿಯಾಗುತ್ತದೆ ಎಂದು ಇ.ಡಿ ಕಾರ್ಯವೈಖರಿ ವಿರುದ್ಧ ಕಿಡಿಕಾರಿದರು.

ಶೇ.90ರಷ್ಟು ಹಣ ವಸೂಲಿ: ಸಾಕ್ಷ್ಯಾಧಾರ ಆಧರಿಸಿಯೇ ನಾಗೇಂದ್ರಗೆ ಸಿಐಡಿ ಕ್ಲೀನ್‌ಚಿಟ್!

ಇನ್ನು ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಸಿಐಡಿ ಕ್ಲೀನ್‌ಚಿಟ್ ನೀಡಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಸೂಕ್ತ ದಾಖಲೆಗಳು ಹಾಗೂ ಸಾಕ್ಷ್ಯಾಧಾರಗಳ ಆಧಾರದ ಮೇಲೆಯೇ ಮಾಜಿ ಸಚಿವ ನಾಗೇಂದ್ರ ಅವರಿಗೆ ಸಿಐಡಿ ಕ್ಲೀನ್‌ಚಿಟ್ ನೀಡಿದೆ. ಆ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಶೇಕಡಾ 90ರಷ್ಟು ಹಣವನ್ನು ವಸೂಲಿ ಮಾಡಲಾಗಿದೆ. ವಿಚಾರಣೆ ವೇಳೆ ನಾಗೇಂದ್ರ ಅವರ ಬಳಿ ಯಾವುದೇ ಅಕ್ರಮ ಹಣ ಪತ್ತೆಯಾಗಿಲ್ಲ. ಈ ತನಿಖೆಯಲ್ಲಿ ರಾಜ್ಯ ಸರ್ಕಾರ ಯಾವುದೇ ರೀತಿಯ ಹಸ್ತಕ್ಷೇಪ ಮಾಡಿಲ್ಲ. ಅಲ್ಲದೆ, ಇದೇ ಪ್ರಕರಣದ ತನಿಖೆಯು ಪರ್ಯಾಯವಾಗಿ ಐ.ಟಿ ಮತ್ತು ಇ.ಡಿ ಸಂಸ್ಥೆಗಳಿಂದಲೂ ನಡೆಯುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡರು.

ShareTweetSendShare
Join us on:

Related Posts

10-15 ದಿನಗಳಿಂದ ಆಶಾ ಕಾರ್ಯಕರ್ತೆಯರು ಕೆಲಸ ಮಾಡದಿದ್ದರೂ ಜನ ಆರೋಗ್ಯವಾಗಿದ್ದಾರೆ, ಬ್ಲ್ಯಾಕ್‌ಮೇಲ್‌ಗೆ ಸರ್ಕಾರ ಮಣಿಯಲ್ಲ, ತಕ್ಷಣ ಕರ್ತವ್ಯಕ್ಕೆ ಮರಳಿ: ಆಶಾ ಕಾರ್ಯಕರ್ತೆಯರಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ!

10-15 ದಿನಗಳಿಂದ ಆಶಾ ಕಾರ್ಯಕರ್ತೆಯರು ಕೆಲಸ ಮಾಡದಿದ್ದರೂ ಜನ ಆರೋಗ್ಯವಾಗಿದ್ದಾರೆ, ಬ್ಲ್ಯಾಕ್‌ಮೇಲ್‌ಗೆ ಸರ್ಕಾರ ಮಣಿಯಲ್ಲ, ತಕ್ಷಣ ಕರ್ತವ್ಯಕ್ಕೆ ಮರಳಿ: ಆಶಾ ಕಾರ್ಯಕರ್ತೆಯರಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ!

by Shwetha
November 28, 2026
0

ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆಯ ವಿರುದ್ಧ ರಾಜ್ಯ ಸರ್ಕಾರ ಅತ್ಯಂತ ಕಠಿಣ ನಿಲುವು ತಳೆದಿದೆ. ಯಾವುದೇ...

ಯೋಗಿ ಆದಿತ್ಯನಾಥ್ ಇಲ್ಲದಿದ್ದರೆ ಉತ್ತರ ಪ್ರದೇಶವೇ ಇಲ್ಲ: ಹಿಂದುತ್ವದ ಪ್ರಬಲ ಮುಖ ಹಾಗೂ ಸಮರ್ಥ ನಾಯಕ ಎಂದು ಕೊಂಡಾಡಿದ ಶಿವಸೇನೆ ಸಂಸದ ಸಂಜಯ್ ರಾವತ್!

ಯೋಗಿ ಆದಿತ್ಯನಾಥ್ ಇಲ್ಲದಿದ್ದರೆ ಉತ್ತರ ಪ್ರದೇಶವೇ ಇಲ್ಲ: ಹಿಂದುತ್ವದ ಪ್ರಬಲ ಮುಖ ಹಾಗೂ ಸಮರ್ಥ ನಾಯಕ ಎಂದು ಕೊಂಡಾಡಿದ ಶಿವಸೇನೆ ಸಂಸದ ಸಂಜಯ್ ರಾವತ್!

by Shwetha
November 28, 2026
0

ಮುಂಬೈ: ಉತ್ತರ ಪ್ರದೇಶದಲ್ಲಿ ಮುಂಬರುವ 2027ರ ವಿಧಾನಸಭಾ ಚುನಾವಣೆಗೆ ರಾಜಕೀಯ ಚಟುವಟಿಕೆಗಳು ಗರಿಗೆದರಿರುವ ನಡುವೆಯೇ, ವಿರೋಧ ಪಕ್ಷಗಳ ಮೈತ್ರಿಕೂಟದ ಭಾಗವಾಗಿರುವ ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್...

ಅಮಿತ್ ಶಾ ಅವರಿಗೆ ಮರೆವಿನ ಕಾಯಿಲೆ ಇರಬೇಕು ಅಥವಾ ಸುಳ್ಳು ಹೇಳುತ್ತಿದ್ದಾರೆ: ಮಹಿಳಾ ಮೀಸಲಾತಿ ವಿಚಾರದಲ್ಲಿ ಕೇಂದ್ರ ಗೃಹ ಸಚಿವರಿಗೆ ಪಿ. ಚಿದಂಬರಂ ಖಡಕ್ ತಿರುಗೇಟು!

ಅಮಿತ್ ಶಾ ಅವರಿಗೆ ಮರೆವಿನ ಕಾಯಿಲೆ ಇರಬೇಕು ಅಥವಾ ಸುಳ್ಳು ಹೇಳುತ್ತಿದ್ದಾರೆ: ಮಹಿಳಾ ಮೀಸಲಾತಿ ವಿಚಾರದಲ್ಲಿ ಕೇಂದ್ರ ಗೃಹ ಸಚಿವರಿಗೆ ಪಿ. ಚಿದಂಬರಂ ಖಡಕ್ ತಿರುಗೇಟು!

by Shwetha
November 28, 2026
0

ನವದೆಹಲಿ: ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ಕಲ್ಪಿಸುವ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ...

ದೇಶದ ಪ್ರಮುಖ ವಿರೋಧ ಪಕ್ಷವು ಇಂದು ಅಡಚಣೆಯ ಪಕ್ಷವಾಗಿ ಮಾರ್ಪಟ್ಟಿದೆ: ಸಾಮಾನ್ಯ ಕುಟುಂಬದಲ್ಲಿ ಜನಿಸಿದ ನಾನು ಪ್ರಧಾನಿಯಾಗಲು ಸಂವಿಧಾನವೇ ಕಾರಣ: ಭಾರತದಲ್ಲಿ 50 ಕೋಟಿ ಜನರು ಬಡತನದಿಂದ ಮುಕ್ತ ಎಂದ ಮೋದಿ

ದೇಶದ ಪ್ರಮುಖ ವಿರೋಧ ಪಕ್ಷವು ಇಂದು ಅಡಚಣೆಯ ಪಕ್ಷವಾಗಿ ಮಾರ್ಪಟ್ಟಿದೆ: ಸಾಮಾನ್ಯ ಕುಟುಂಬದಲ್ಲಿ ಜನಿಸಿದ ನಾನು ಪ್ರಧಾನಿಯಾಗಲು ಸಂವಿಧಾನವೇ ಕಾರಣ: ಭಾರತದಲ್ಲಿ 50 ಕೋಟಿ ಜನರು ಬಡತನದಿಂದ ಮುಕ್ತ ಎಂದ ಮೋದಿ

by Shwetha
November 28, 2026
0

ನವದೆಹಲಿ: ಭಾರತದ ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದು, ಸಾಮಾಜಿಕ ಹಾಗೂ ಆರ್ಥಿಕ ನ್ಯಾಯಕ್ಕೆ ಭದ್ರ ಬುನಾದಿಯಾಗಿ ನಿಂತಿದೆ ಎಂದು ಪ್ರಧಾನಿ ನರೇಂದ್ರ ಮೋದಿ...

ದಿನ ಭವಿಷ್ಯ (19-10-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (28-11-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
November 28, 2026
0

ದಿನ ಭವಿಷ್ಯ: 28-11-2026 ಮೇಷ ರಾಶಿ ಇಂದು ನಿಮ್ಮ ರಾಶಿಯಿಂದ ಚತುರ್ಥ ಭಾವದಲ್ಲಿ ಗಜಕೇಸರಿ ಯೋಗ ನಿರ್ಮಾಣವಾಗಿರುವುದರಿಂದ ಸುಖ ಸಂತೋಷಗಳು ವೃದ್ಧಿಸಲಿವೆ. ವೃತ್ತಿ ಜೀವನ: ಕೆಲಸದ ಸ್ಥಳದಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram