ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ : ಮತಗಟ್ಟೆಯಲ್ಲಿ CRPF ಯೋಧನ ಶವ ಪತ್ತೆ..!
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಘೋಷಣೆ ಯಾಗುವುದಕ್ಕೆ ಮುಂಚೆಯಿಂದಲು ಗಲಾಟೆ, ಹೊಡೆದಾಟ, ಬಿಜೆಪಿ ಕಾರ್ಯಕರ್ತರು ಅಥವ ಬಿಜೆಪಿ ಕಾರ್ಯಕರ್ತರು ಸಾವನಪ್ಪುದು ಗಾಯಗೊಳ್ಳುವುದು ನಡೆಯುತ್ತಲೇ ಇದೆ. ಇದೀಗ ಸಾಕಷ್ಟು ಹೈಡ್ರಾಮಾಗಳ ನಡುವೆ ಇಂದು ಪಶ್ಚಿಮ ಬಂಗಾಳದಲ್ಲಿ ಮುಂಜಾನೆಯಿಂದಲೇ 2ನೇ ಹಂತದ ಮತದಾನ ನಡೆಯುತ್ತಿದೆ. ಆದ್ರೆ ಜಿಲ್ಲೆಯ ಪಾತರ್ ಪ್ರತಿಮಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಸಿಆರ್ಪಿಎಫ್ ಯೋಧನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಇಂದು ಮುಂಜಾನೆಯಿಂದಲೂ ಪಶ್ಚಿಮ ಬಂಗಾಲದಲ್ಲಿ ಅಲ್ಲಲ್ಲಿ ಅಹಿತಕರ ಘಟನೆಗಳು ನಡೆಯುತ್ತಿವೆ. ಇಂದು ಬೆಳಗ್ಗೆ ನಂದಿಗ್ರಾಮ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತ ಹಾಗೂ ಕೇಶಪುರದಲ್ಲಿ ಟಿಎಂಸಿ ಕಾರ್ಯಕರ್ತನ ಮೃತದೇಹ ಪತ್ತೆಯಾಗಿತ್ತು.
ಈ ನಡುವೆ ಪಾತರ್ ಪ್ರತಿಮಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಸಿಆರ್ಪಿಎಫ್ ಯೋಧ ಕಮಲ್ ಗಂಗೋಪಾಧ್ಯಾಯ ಅವರು ಶವವಾಗಿ ಪತ್ತೆಯಾಗಿದ್ದಾರೆ.
ಮತಗಟ್ಟೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಿಆರ್ಪಿಎಫ್ ಯೋಧನ ಮೃತದೇಹ ಕಂಡುಬಂದಿದ್ದು, ಘಟನೆ ಬಳಿಕವೂ ಬಿರುಸಿನಿಂದ ಮತದಾನ ನಡೆದಿದೆ.
ರಶ್ಮಿಕಾಗೆ 2ನೇ ಚಾನ್ಸೂ ಮಿಸ್… ‘ದಳಪತಿ’ಗೆ 2ನೇ ನಾಯಕಿ ಈ ಸ್ಟಾರ್ ನಟಿ..!








