ರಶ್ಮಿಕಾಗೆ 2ನೇ ಚಾನ್ಸೂ ಮಿಸ್… ‘ದಳಪತಿ’ಗೆ 2ನೇ ನಾಯಕಿ ಈ ಸ್ಟಾರ್ ನಟಿ..!
ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ಅವರ 65ನೇ ಸಿನಿಮಾ ಅದ್ಧೂರಿಯಾಗಿ ಸೆಟ್ಟೇರಿದೆ. ಬಹುನಿರೀಕ್ಷೆಯ ಸಿನಿಮಾದಲ್ಲಿ ರಶ್ಮಿಕಾ ಹೀರೋಯಿನ್ ಅಂತ ಹೇಳಲಾಗ್ತಿತ್ತು. ಆದ್ರೆ ಇತ್ತೀಚೆಗೆ ವಿಜಯ್ ಗೆ ನಾಯಕಿ ಕನ್ನಡದ ಸುಂದರಿ ಸ್ಟಾರ್ ನಟಿ ಪೂಜಾ ಹೆಗ್ಡೆ ಎಂಬುದನ್ನ ಸನ್ ಪಿಕ್ಚರ್ಸ್ ಅಧಿಕೃತವಾಗಿ ರಿವೀಲ್ ಮಾಡಿತ್ತು. ಈ ಮೂಲಕ ರಶ್ಮಿಕಾಗೆ ಸಿನಿಮಾದಲ್ಲಿ ನೋ ಚಾನ್ಸ್ ಅನ್ನೋದು ಗೊತ್ತಾಗಿತ್ತು.
ಆದ್ರೆ ರಶ್ಮಿಕಾ ಸಿನಿಮಾದಲ್ಲಿ 2ನೇ ನಾಯಕಿ ಆಗ್ತಾರೆ ಅಂತ ಹೇಳಲಾಗ್ತಿತ್ತು. ಇದ್ರಿಂದ ರಶ್ಮಕಾ ಫ್ಯಾನ್ಸ್ ನಿರೀಕ್ಷೆ ಹೆಚ್ಚಾಗಿತ್ತು. ಇದೀಗ ರಶ್ಮಿಕಾ ಅಭಿಮಾನಿಗಳು ಮತ್ತೊಮ್ಮೆ ಡಿಸಪಾಯಿಂಟ್ ಆಗಿದ್ದಾರೆ. ಕಾರಣ 2ನೇ ನಾಯಕಿಯೂ ರಶ್ಮಿಕಾ ಅಲ್ಲ ಅನ್ನೋದು ಅಫಿಷಿಯಲ್ ಆಗಿ ಅನೌನ್ಸ್ ಆಗಿದೆ.

ಹೌದು ಸಿನಿಮಾದ 2ನೇ ನಾಯಕಿಯಾಗಿ ಮಲಯಾಳಂ ನ ಸುಂದರಿ ಸ್ಟಾರ್ ನಟಿ ಅಪರ್ಣಾ ದಾಸ್ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು ಈ ಬಗ್ಗೆ ಸ್ವತಃ ಅಪರ್ಣಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ‘ದಳಪತಿ 65 ಚಿತ್ರದ ಭಾಗವಾಗಿರುವುದು ತುಂಬಾ ಖುಷಿಯಾಗುತ್ತಿದೆ. ನಟ ವಿಜಯ್ ಜೊತೆ ತೆರೆಹಂಚಿಕೊಳ್ಳುವ ಕನಸು ನನಸಾಗಿದೆ. ನಿರ್ದೇಶಕ ನೆಲ್ಸನ್ ದಿಲೀಪ್ ಅವರಿಗೆ ಧನ್ಯವಾದಗಳು’ ಎಂದು ಹೇಳಿದ್ದಾರೆ. ಒಟ್ಟಾರೆ ದಳಪತಿ 65ನೇ ಚಿತ್ರಕ್ಕೆ ಇಬ್ಬರೂ ನಾಯಕಿಯರು ಫಿಕ್ಸ್ ಆಗಿದ್ದು, ಊಹಾಪೋಹಗಳು ವದಂತಿಗಳಿಗೆ ಬ್ರೇಕ್ ಬಿದ್ದಿದೆ. ರಶ್ಮಿಕಾಗೆ ಸಿನಿಮಾದಿಂದ ಗೇಟ್ ಪಾಸ್ ಕೊಡಲಾಗಿದೆ.
ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ರಿಲೀಸ್ ಮುಂದೂಡಿಕೆ..?
‘ಮಾವ ‘ಡರ್ ಪೋಕ್’ ಎಂದ ನಿಧಿ… ಆದ್ರೆ ಸಂಬರಗಿ ನಿಲುವೇ ಬೇರೆ ಎಂದ ಶುಭಾ..!
ಪಾಪ ಮನೆಯ ಕಿರಿಯ ಕ್ಯಾಪ್ಟನ್ ವಿಶ್ವನ ವಿರುದ್ಧ ಆರೋಪ ಮಾಡಿದ್ದೇಕೆ ನಿಧಿ..!
‘ತಲೈವಾ’ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಾಶಸ್ತಿ..!
ಬರೆದಿಟ್ಟುಕೊಳ್ಳಿ ಯುವರತ್ನ ಸಿನಿಮಾ ಪಕ್ಕಾ 100 ಡೇಸ್..! ಈಗಿನ ಜೆನರೇಶನ್ ನ ಯುವಕರು ನೋಡ್ಲೇಬೇಕಾದ ಸಿನಿಮಾ..!








