ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ರಿಲೀಸ್ ಮುಂದೂಡಿಕೆ..?
ಟಾಲಿವುಡ್ ನ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷೆಯ ಸಿನಿಮಾ ‘ಪುಷ್ಪಾ’ ರಿಲೀಸ್ ಡೇಟ್ ಈಗಾಗಲೇ ಅನೌನ್ಸ್ ಮಾಡಿದೆ. ಆಗಸ್ಟ್ 13 ಕ್ಕೆ ಸಿನಿಮಾ ರಿಲೀಸ್ ಆಗುವ ನಿರೀಕ್ಷೆ ಇತ್ತು. ಆದ್ರೆ ಇದೀಗ ಅಲ್ಲು ಫ್ಯಾನ್ಸ್ ಗೆ ಬ್ಯಾಡ್ ನ್ಯೂಸ್ ಸಿಕ್ಕಿದೆ. ಹೌದು ‘ಪುಷ್ಪಾ’ ಬಿಡುಗಡೆ ನಿಗದಿತ ದಿನಾಂಕಕ್ಕಿಂತಲೂ ತಡವಾಗುವ ಸಾಧ್ಯತೆಗಳಿದೆ. ಇದಕ್ಕೆ ಕಾರಣ ಕೊರೊನಾ ಎನ್ನಲಾಗ್ತಿದೆ.
ಆಂಧ್ರ-ತೆಲಂಗಾಣ ರಾಜ್ಯಗಳ ಹೊರಗೆ ಚಿತ್ರೀಕರಣ ಮಾಡುವ ಯೋಜನೆಯನ್ನು ನಿರ್ದೇಶಕ ಸುಕುಮಾರ್ ಹಾಕಿಕೊಂಡಿದ್ದರು. ಆದರೆ ಕೊರೊನಾ ಎರಡನೇ ಅಲೆಯಿಂದಾಗಿ ಹೊರ ರಾಜ್ಯಗಳ ಶೂಟಿಂಗ್ ರದ್ದು ಮಾಡುವ ಪ್ಲಾನ್ ನಲ್ಲಿ ಸಿನಿಮಾ ತಂಡ ಇದ್ದು, ಈ ಕಾರಣದಿಂದಾಗಿ ಸಿನಿಮಾ ರಿಲೀಸ್ ಡೇಟ್ ಪೋಸ್ಟ್ ಪೋನ್ ಆಗಬಹುದು ಎಂದೇ ಹೇಳಲಾಗ್ತಾಯಿದೆ.
ಹೊರ ರಾಜ್ಯಗಳಲ್ಲಿ ಚಿತ್ರೀಕರಣ ಮಾಡುವ ಬದಲಿಗೆ ಸೆಟ್ ಗಳನ್ನು ಹಾಕಿ ಚಿತ್ರೀಕರಣ ಮಾಡುವ ಯೋಚನೆ ಇದೆ ಎಂದೂ ಕೂಡ ಹೇಳಲಾಗಿದೆ. ಇನ್ನೂ ಶೂಟಿಂಗ್ ಮುಕ್ತಾಯವಾದ ಬಳಿಕ ಹೊಸ ಡೇಟ್ ಅನೌನ್ಸ್ ಮಾಡುವ ಸಾಧ್ಯತೆಯಿದೆ. ಇನ್ನೂ ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆಗೆ ಕನ್ನಡ ಕಿರಿಕ್ ರಾಣಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ.
‘ಮಾವ ‘ಡರ್ ಪೋಕ್’ ಎಂದ ನಿಧಿ… ಆದ್ರೆ ಸಂಬರಗಿ ನಿಲುವೇ ಬೇರೆ ಎಂದ ಶುಭಾ..!
ಪಾಪ ಮನೆಯ ಕಿರಿಯ ಕ್ಯಾಪ್ಟನ್ ವಿಶ್ವನ ವಿರುದ್ಧ ಆರೋಪ ಮಾಡಿದ್ದೇಕೆ ನಿಧಿ..!








