ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ – 22 ಕಚ್ಚಾ ಬಾಂಬ್ ಪತ್ತೆ..!
ಪಶ್ಚಿಮ ಬಂಗಾಳ : ಇಂದು ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯಗಳಲ್ಲಿ ಮೊದಲ ಹಂತದ ವಿಧಾನಸಭಾ ಚುನಾವಣೆ ಬಿರುಸಿನಿಂದ ಆರಂಭವಾಗಿದೆ. ಈ ನಡುವೆ ಪಶ್ಚಿಮ ಬಂಗಾಳದಲ್ಲಿ 22 ಕಚ್ಚಾ ಬಾಂಬ್ ಗಳು ಪತ್ತೆಯಾಗಿದ್ದು, ಕಚ್ಚಾ ಬಾಂಬ್ ಗಳನ್ನ ಪೊಲೀಸರು ವಶಪಸಿಕೊಂಡಿದ್ದಾರೆ.
ಪಶ್ಚಿಮಬಂಗಾಳದ 5 ಜಿಲ್ಲೆಗಳ ಒಟ್ಟು 30 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಪಶ್ಚಿಮ ಮೆಡ್ನಾಪುರ, ಬಂಕುರಾ, ಪುರುಲಿಯಾ, ಜಾರ್ಗ್ರಾಮ್, ಪೂರ್ವ ಮಿಡ್ನಾಪುರದಲ್ಲಿ ಚುನಾವಣೆ ನಡೆಯುತ್ತಿದೆ.
ಭಾರೀ ಕುತೂಹಲ ಹಾಗೂ ಸಂಚಲನ ಸೃಷ್ಟಿಸಿರುವ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹಾಗೂ ಆಡಳಿತ ರೂಢ ಪಕ್ಷ TMC ನಡುವೆ ಟಫ್ ಕಾಂಪಿಟೇಶನ್ ಇದ್ದು, ಭರ್ಜರಿ ಮತಯಾಚನೆ, ಹೈಡ್ರಾಮಾಗಳು ನಡೆದುಹೋಗಿವೆ. ಮತದಾರರು ಈ ಬಾರಿ ಯಾರ ಕೈಹಿಡಿಯುತ್ತಾರೆ ಅನ್ನೋ ಕಾತರತೆ ಜೋರಾಗಿದೆ. ಇಂದು ಮತದಾರರು ಒಟ್ಟು 191 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನ ನಿರ್ಧರಿಸಲಿದ್ದಾರೆ.
ಪಶ್ಚಿಮ ಬಂಗಾಳದ ಒಟ್ಟು 5 ಜಿಲ್ಲೆಗಳ 30 ಸ್ಥಾನಗಳಿಗೆ ಮತದಾನ ನಡೆಯಲಿದೆ. ಅಸ್ಸಾಂನಲ್ಲಿನ ಒಟ್ಟು 126 ವಿಧಾನಸಭಾ ಕ್ಷೇತ್ರಗಳ ಪೈಕಿ 47 ಸ್ಥಾನಗಳಿಗೆ ಮತದಾನ ನಡೆಯಲಿದೆ. ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ಮತದಾನ ನಡೆಯಲಿದೆ.
ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಮೊದಲ ಹಂತದ ಚುನಾವಣೆ – ಮೋದಿ ಜನರಿಗೆ ಕೊಟ್ಟ ಸಂದೇಶವೇನು…?
ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಮೊದಲ ಹಂತದ ಚುನಾವಣೆ..! ಬಿರುಸಿನ ಮತದಾನ