ಪಶ್ಚಿಮ ಬಂಗಾಳದಲ್ಲಿ ‘ದೀದಿ’ಗೆ ಮುನ್ನಡೆ , ಬಿಜೆಪಿಗೆ ಹಿನ್ನೆಡೆ , ಕಾಂಗ್ರೆಸ್ , ಎಡಪಕ್ಷಗಳಿಗೆ ತೀವ್ರ ಮುಖಭಂಗ
ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಎಂಸಿ ನಡುವೆ ನೆಕ್ ನೆಕ್ ಫೈಟ್ ಏರ್ಪಟ್ಟಿತ್ತು. ಎರೆಡೂ ಪಕ್ಷಗಳು ಭರ್ಜರಿ ಮತಬೇಟೆ ನಡೆಸಿದ್ದು, ಸಾಕಷ್ಟಯ ಹೈಡ್ರಾಮಾಗಳ ನಂತರ ಇಂದು ಕೊನೆಗೂ ಫಲಿತಾಂಶ ಹೊರಬರಲಿದೆ.
ಮುಂಜಾನೆಯಿಂದಲೇ ಮತೆಣಿಕೆ ಪ್ರಕ್ರಿಯೆ ಆರಂಭವಾಗಿದ್ದು, ಈ ಬಾರಿ ಅಧಿಕಾರದ ಗದ್ದುಗೇರೋದ್ಯಾರು ಎಂಬ ಕುತೂಹಲವಿದೆ. ಸಿಎಂ ಮಮತಾಬ್ಯಾನರ್ಜಿ ಕಣಕ್ಕಿಳಿದಿದ್ದ ನಂದಿಗ್ರಾಮ ಕ್ಷೇತ್ರದಲ್ಲಿ ದೀದಿ 1200 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ತಮ್ಮ ಶಿಷ್ಯ ಸುವೇಂದುವನ್ನ (ಬಿಜೆಪಿ ಅಭ್ಯರ್ಥಿ) ಸೋಲಿಸಿದ್ಧಾರೆ.
ಪಶ್ಚಿಮ ಬಂಗಾಳದಲ್ಲಿ ಅಕ್ಷರಶಃ ಕಾಂಗ್ರೆಸ್ ಮತ್ತು ಎಡಪಕ್ಷಗಳು ನೆಲಕಚ್ಚಿವೆ. ವಿಧಾನಸಭೆ ಚುನಾವಣೆಯಲ್ಲಿ ಒಂದೂ ಕ್ಷೇತ್ರದಲ್ಲಿ ಮುನ್ನಡೆ ಪಡೆಯಲಾಗದೆ ಎರಡೂ ಪಕ್ಷಗಳು ಭಾರೀ ಆಘಾತ ಅನುಭವಿಸಿವೆ. ಟಿಎಂಸಿ, ಬಿಜೆಪಿ ಅಬ್ಬರದ ನಡುವೆ ಕಾಂಗ್ರೆಸ್, ಎಡಪಕ್ಷಗಳ ಅಭ್ಯರ್ಥಿಗಳು ಹೀನಾಯ ಸೋಲನುಭವಿಸಿದ್ದಾರೆ.
ಪಶ್ಚಿಮ ಬಂಗಾಳದ 292 ಕ್ಷೇತ್ರಗಳ ಪೈಕಿ ಸಂಜೆ ವೇಳೆಗೆ ಟಿಎಂಸಿ 212, ಬಿಜೆಪಿ 78 ಮತ್ತು ಇತರರು ಒಂದು ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದವು. ಇನ್ನೂ TMC ಮುಂಚೂಣಿಯಲ್ಲಿದ್ದು, ಈಬಾರಿಯೂ ಗೆಲುವು TMCಯದ್ದೇ ಎಂದೇ ಹೇಳಲಾಗ್ತಿದೆ. ಇತ್ತ ಪಕ್ಷ ಸೋಲಲು ಕಾರಣವೇನು ಎಂಬುದನ್ನ ಆತ್ಮವಿಮರ್ಶೆ ಮಾಡಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ತಿಳಿಸಿದ್ದಾರೆ.