ಪಶ್ಚಿಮ ಬಂಗಾಳ: ಇತ್ತೀಚಿಗಷ್ಟೇ ಕೊರೊನಾ ಸೋಂಕು ತಗುಲಿದ್ದು, ದೃಢವಾದ ಬೆನ್ನಲ್ಲೇ ಚಿಕಿತ್ಸೆಗೆ ಒಳಗಾಗಿದ್ದ 76 ವರ್ಷದ ಸಿಪಿಎಂ ನಾಯಕ ಶ್ಯಾಮಲ್ ಚಕ್ರವರ್ತಿ ಅವರಿಂದ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ಯಾಮಲ್ ಚಕ್ರವರ್ತಿ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದ ಅನೇಕ ರಾಜಕೀಯ ಮುಖಂಡರು ಅಂತಾಪ ಸೂಚಿಸಿದ್ದಾರೆ.
ಇನ್ನೂ ಈ ಶ್ಯಾಮಲ್ ಚಕ್ರವರ್ತಿ ಅವರ ನಿಧನಕ್ಕೆ ಟ್ವೀಟ್ ಮೂಲಕ ಸಂತಾಪ ಸೂಚಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ‘ಹಿರಿಯ ನಾಯಕ, ಮಾಜಿ ಸಂಸತ್ ಸದಸ್ಯ ಮತ್ತು ಬಂಗಾಳದ ಮಾಜಿ ಸಚಿವ ಶ್ಯಾಮಲ್ ಚಕ್ರವರ್ತಿ ಅವರ ನಿಧನದ ಸುದ್ದಿ ನೋವುಂಟು ಮಾಡಿದೆ. ಅವರ ಕುಟುಂಬ, ಸ್ನೇಹಿತರು ಮತ್ತು ಬೆಂಬಲಿಗರಿಗೆ ನನ್ನ ಸಂತಾಪಗಳು’ ಎಂದು ಕಂಬನಿ ಮಿಡಿದಿದ್ದಾರೆ. 








