ಪಶ್ಚಿಮ ಬಂಗಾಳ : ಮತಗಟ್ಟೆ ಬಳಿಯೇ 18ರ ಯುವ ಮತದಾರನಿಗೆ ಗುಂಡಿಟ್ಟು ಕೊಲೆ – TMC ಕೈವಾಡವೆಂದು ಕುಟುಂಬಸ್ಥರ ಆರೋಪ..!
ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದಲ್ಲಿ ಇಂದು 4ನೇ ಹಂತದ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದೆ. 44 ಕ್ಷೇತ್ರಗಳಲ್ಲಿ ಇಂದು 4ನೇ ಹಂತದ ಮತದಾನ ನಡೆಯುತ್ತಿದೆ. ಪ್ರತಿ ಬಾರಿ ಮತದಾನದ ವೇಳೆ ಒಂದಲ್ಲಾ ಒಂದು ಅನಾಹುತಗಳು ಆಗುತ್ತಲೇ ಇವೆ. ಇಂದು ಕೂಡ ದೊಡ್ಡ ಅನಾಹುತ ಒಂದು ನಡೆದುಹೋಗಿದೆ.
ಕೂಚ್ ಬೆಹಾರ್ ಜಿಲ್ಲೆಯ ಸಿತಾಲ್ಕುಚಿ ವಿಧಾನಸಭಾ ಕ್ಷೇತ್ರದ ಮತಗಟ್ಟೆಯ ಹೊರಗೆ ಸಾಲಿನಲ್ಲಿ ನಿಂತಿದ್ದ ಮತದಾರನೊಬ್ಬನನ್ನು ಟಿಎಂಸಿ ಕಾರ್ಯಕರ್ತರು ಗುಂಡಿಕ್ಕಿ ಕೊಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮೃತ ಮತದಾರನನ್ನು 18 ವರ್ಷದ ಆನಂದ ಬರ್ಮನ್ ಎಂದು ಗುರುತಿಸಲಾಗಿದೆ.
ಟಿಎಂಸಿ ಕಾರ್ಯಕರ್ತರೇ ಗುಂಡಿಕ್ಕಿ ಕೊಂದಿದ್ದಾರೆ ಎಂದು ಮೃತನ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಆದ್ರೆ ಈ ಆರೋಪವನ್ನ ಟಿಎಂಸಿ ತಳ್ಳಿ ಹಾಕಿದ್ದು, ಿದು ಬಿಜೆಪಿಯ ಕೃತ್ಯವೆಂದು ಪ್ರತ್ಯಾರೋಪ ಮಾಡಿದೆ.








