ಬೆಂಗಳೂರು: ನಗರದ ಮೈಸೂರು ಅರಮನೆಯಲ್ಲಿ ಕಂಬಳ ಸ್ಪರ್ಧೆ ಭರ್ಜರಿಯಾಗಿ ನಡೆದಿದೆ. ಕಾಂತಾರ ಸಿನಿಮಾದಲ್ಲಿ ನಟ ರಿಷಭ್ ಶೆಟ್ಟಿ ಓಡಿಸಿದ್ದ ಅಪ್ಪು-ಕಿಟ್ಟು ಎಂಬ ಕೋಣಗಳು ಕನೆಹಲಗೆ ವಿಭಾಗದಲ್ಲಿ ಪದಕ ಗೆದ್ದಿವೆ.
ಕಣಹಲಗೆಯ 4ನೇ ರೌಂಡ್ ನಲ್ಲಿ ಆರುವರೆ ಅಡಿ ನೀರು ಚಿಮ್ಮಿಸುವ ಮೂಲಕ ಅಪ್ಪು-ಕಿಟ್ಟು ಎಂಬ ಕೋಣಗಳು ಭರ್ಜರಿ ಗೆಲುವು ಸಾಧಿಸಿವೆ. ಬೈಂದೂರಿನ ಪರಮೇಶ್ವರ್ ಭಟ್ ಅವರು ಅಪ್ಪು-ಕಿಟ್ಟು ಕೋಣಗಳ ಮಾಲೀಕರು ಎನ್ನಲಾಗಿದೆ.
ಕಾಂತಾರ ಸಿನಿಮಾ ಕೋಣಗಳಾಗಿರುವುದರಿಂದ ಜನರು ಇದನ್ನು ನೋಡಲು ಮುಗಿಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಈ ಕೋಣಗಳನ್ನು ರಾಘವೇಂದ್ರ ಪೂಜಾರಿ ಓಡಿಸಿದ್ದರು. ಅಪ್ಪು ಮತ್ತು ಕಿಟ್ಟು ಕೋಣಗಳನ್ನು ರಿಷಬ್ ಶೆಟ್ಟಿ ಕಾಂತಾರ ಸಿನಿಮಾದಲ್ಲಿ ಓಡಿಸಿದ್ದರು.