ಚಾಮರಾಜನಗರ: ಬಸ್ ನಲ್ಲಿ ಸಂಚರಿಸಲು ಗಂಡಸರಿಗೂ ಅವಕಾಶ ನೀಡಿದರೆ, ಸಾರಿಗೆ ಸಂಸ್ಥೆಯನ್ನೇ ಮುಚ್ಚಬೇಕಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಚಾಮರಾಜನಗರ (Chamarajanagara) ಜಿಲ್ಲೆಯ ಯಳಂದೂರಲ್ಲಿ ಮಾತನಾಡಿದ ಅವರು, ಗಂಡಸರಿಗೂ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಿದರೆ KSRTC ಮುಚ್ಚಬೇಕಾಗುತ್ತದೆ ಎಂದಿದ್ದಾರೆ. ಸರ್ಕಾರಿ ವೈದ್ಯರು ರೋಗಿಗಳ ಬಳಿ ಚೆನ್ನಾಗಿ ಮಾತನಾಡಿದರೇ ಅರ್ಧ ರೋಗ ಕಡಿಮೆಯಾಗುತ್ತದೆ. ನಮ್ಮ ವೈದ್ಯರು ಬಹಳಷ್ಟು ಜನ ಸರಿಯಾಗಿ ಮಾತನಾಡಿಸುವುದಿಲ್ಲ. ಇನ್ಮೇಲಾದರೂ ರೋಗಿಗಳ ಜೊತೆ ವೈದ್ಯರು ಚೆನ್ನಾಗಿ ಮಾತನಾಡಿಸಿ ಎಂದು ಮಾತನಾಡಿದ್ದಾರೆ.
ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಕೊಡಬೇಕು, ತುರ್ತು ಚಿಕಿತ್ಸೆ ಕೊಡಿ, ರೋಗಿಗಳಿಂದ ವೈದ್ಯರು ಏನನ್ನೂ ನಿರೀಕ್ಷೆ ಮಾಡಬೇಡಿ. ಗೋಲ್ಡನ್ ಅವರ್ ನಲ್ಲಿ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಕೊಡಬೇಕು ಎಂದು ವೈದ್ಯರಿಗೆ ತಾಕೀತು ಮಾಡಿದರು.







