ಟೀಮ್ ಇಂಡಿಯಾ ನಾಯಕ ಶುಭ್ಮನ್ ಗಿಲ್ ನಾಯಕತ್ವದ ಬಗ್ಗೆ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
26ರ ಹರೆಯದ ಗಿಲ್ ಬ್ಯಾಟಿಂಗ್ ಶೈಲಿ ಹಾಗೂ ನಾಯಕತ್ವದ ಗುಣಗಳನ್ನು ದಾದಾ ಮನಸಾರೆ ಕೊಂಡಾಡಿದ್ದಾರೆ.
ಶುಭ್ಮನ್ ಗಿಲ್ ಅದ್ಭುತ ಬ್ಯಾಟರ್. ಹಾಗೇ ಪರ್ಫೆಕ್ಟ್ ಕ್ಯಾಪ್ಟನ್. ಯುವ ಆಟಗಾರನಾಗಿ, ಯುವ ನಾಯಕನಾಗಿ ಇಂಗ್ಲೆಂಡ್ ನೆಲದಲ್ಲಿ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಸವಾಲುಗಳನ್ನು ಎದುರಿಸುವುದು ಅಷ್ಟೊಂದು ಸುಲಭದ ಮಾತಲ್ಲ. ಅಂತಹುದರಲ್ಲಿ ಶುಭ್ಮನ್ ಗಿಲ್, ನಾಯಕನಾಗಿ ಹಾಗೂ ಆಟಗಾರನಾಗಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಶುಭ್ಮನ್ ಗಿಲ್ ಮೂರು ಮಾದರಿಯ ಆಟಕ್ಕೂ ಸೈ ಅನ್ನಿಸಿಕೊಂಡಿದ್ದಾರೆ. ಅವರಿಗೆ ನನ್ನ ಶುಭ ಹಾರೈಕೆಗಳು ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.
ಚೊಚ್ಚಲ ನಾಯಕತ್ವದಲ್ಲೇ ಶುಭ್ಮನ್ ಗಿಲ್ ವಿಶ್ವ ಕ್ರಿಕೆಟ್‍ನಲ್ಲಿ ಗಮನ ಸೆಳೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯು 2-2ರಿಂದ ಸಮಬಲಗೊಂಡಿದೆ. ಐದು ಪಂದ್ಯಗಳಲ್ಲಿ ಗಿಲ್ ಅವರು, ನಾಲ್ಕು ಶತಕಗಳೊಂದಿಗೆ 754 ರನ್ ಕಲೆ ಹಾಕಿದ್ದಾರೆ. ಅಲ್ಲದೆ ಈ ಸರಣಿಯಲ್ಲಿ ಸುನೀಲ್ ಗವಾಸ್ಕರ್ ದಾಖಲೆಯನ್ನು ಕೂಡ ಅಳಿಸಿ ಹಾಕಿದ್ದಾರೆ. 1978-79ರಲ್ಲಿ ಸುನೀಲ್ ಗವಾಸ್ಕರ್ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 732 ರನ್ ಕಲೆ ಹಾಕಿದ್ದರು.
ಇಂಗ್ಲೆಂಡ್ ಸರಣಿಯ ಬಳಿಕ ಗಿಲ್ ನಾಯಕತ್ವದಲ್ಲಿ ತವರಿನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು.
ಇದೀಗ ನವೆಂಬರ್ 14ರಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಮೊದಲ ಪಂದ್ಯ ಪಶ್ಚಿಮ ಬಂಗಾಳದ ಈಡನ್ ಗಾರ್ಡನ್ ಅಂಗಣದಲ್ಲಿ ನಡೆಯಲಿದೆ.
ಸದ್ಯ ಗಿಲ್ ನಾಯಕತ್ವದಲ್ಲಿ ಟೀಮ್ ಇಂಡಿಯಾ 2025-27ರ ವಿಶ್ವ ಟೆಸ್ಟ್ ಚಾಂಪಿಯನ್‍ಷಿಪ್‍ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ. ಆಡಿರುವ ಏಳು ಟೆಸ್ಟ್ ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು, ಒಂದು ಸೋಲು ಹಾಗೂ ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ.
ಇಂದರ್‌ಜಿತ್ ಸಿಂಗ್ ಬಿಂದ್ರಾ : ಭಾರತೀಯ ಕ್ರಿಕೆಟ್‌ನ ಚಿತ್ರಣ ಬದಲಾಯಿಸಿದ ದಿಟ್ಟ ಆಡಳಿತಗಾರ..!
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅರ್ಥಾತ್ ಬಿಸಿಸಿಐ.. ಇವತ್ತು ವಿಶ್ವ ಕ್ರಿಕೆಟ್‍ನ ಕುಬೇರ. ಕೈ ಬೆರಳಿನಲ್ಲಿ ವಿಶ್ವ ಕ್ರಿಕೆಟ್ ಅನ್ನು ಆಳುತ್ತಿರುವ ಬಿಸಿಸಿಐ ಇಷ್ಟೊಂದು ಶ್ರೀಮಂತಗೊಳ್ಳಲು ಪ್ರಮುಖ...







