ಪ್ರತಿದಿನ ಬಿಯರ್ ಕುಡಿದರೆ ಏನಾಗುತ್ತದೆ ? – ಇಲ್ಲಿದೆ ಮಾಹಿತಿ
ಹೊಸದಿಲ್ಲಿ, ಜನವರಿ20: ಬಿಯರ್ ಅನ್ನು ಹೆಚ್ಚಿನವರು ಆಯಾಸದ ಬಳಲಿಕೆಯಿಂದ ರಿಲ್ಯಾಕ್ಸ್ ಪಡೆಯಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ಸೇವನೆ ಮಾಡುವುದನ್ನು ನಾವು ನೋಡುತ್ತಿದ್ದೇವೆ. ಬಿಯರ್ ನಲ್ಲಿ 5 ರಿಂದ 12 ಪ್ರತಿಶತ ಆಲ್ಕೋಹಾಲ್ ಇರುವುದರಿಂದ ಆಲ್ಕೋಹಾಲ್ ಗಿಂತ ಬಿಯರ್ ಕಡಿಮೆ ಹಾನಿಕಾರಕವೆಂದು ಬಿಯರ್ ಪ್ರಿಯರ ಅಂಬೋಣ.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665

ಬಿಯರ್ ಕುಡಿಯುವುದರಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಕಡಿಮೆ ಮತ್ತು ಇದು ನೋವನ್ನು ಕಡಿಮೆ ಮಾಡುತ್ತದೆ ಎಂದು ಹಲವಾರು ಅಧ್ಯಯನಗಳು ಹೇಳಿವೆ. ಆದರೂ ಸಹ ಇದರಲ್ಲಿ ಸ್ವಲ್ಪ ಪ್ರಮಾಣದ ಆಲ್ಕೋಹಾಲ್ ಇದೆ. ಆದ್ದರಿಂದ ಬಿಯರ್ ನ ಅತಿಯಾದ ಮತ್ತು ನಿಯಮಿತ ಸೇವನೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಪ್ರತಿ ದಿನ ಬಿಯರ್ ಕುಡಿದರೆ ಅದು ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ಇಲ್ಲಿ ತಿಳಿಸಲಾಗಿದೆ.
ಹೃದಯದ ಆರೋಗ್ಯಕ್ಕೆ ಬಿಯರ್ ಕುಡಿಯುವುದು ಉತ್ತಮ ಎಂದು ಹಲವಾರು ಅಧ್ಯಯನಗಳು ಹೇಳಿವೆ. ಆದರೆ ಮಿತಿಮೀರಿದ ಬಿಯರ್ ಸೇವನೆಯು ಹೃದಯದ ಸ್ನಾಯುವಿಗೆ ಹಾನಿ ಉಂಟುಮಾಡಬಹುದು. ಅಷ್ಟೇ ಅಲ್ಲ ಪಾರ್ಶ್ವವಾಯು, ಅಧಿಕ ರಕ್ತದೊತ್ತಡ, ಟೈಪ್ 2 ಮಧುಮೇಹ ಮತ್ತು ಹೃತ್ಕರ್ಣದ ಫೈಬ್ರಿಲೇಶನ್ ಇತ್ಯಾದಿ ಅಪಾಯವನ್ನು ಹೆಚ್ಚಿಸುತ್ತದೆ.
ಬಿಯರ್ ಅನ್ನು ಪುರುಷರು ದಿನಕ್ಕೆ ಎರಡು ಪೆಗ್ ಮತ್ತು ಮಹಿಳೆಯರಿಗೆ ಒಂದು ಪೆಗ್ ಮಿತವಾದ ಪಾನೀಯವೆಂದು ಪರಿಗಣಿಸಲಾಗಿದೆ. ಈ ಮಿತಿಯನ್ನು ಮೀರಿ ಹೆಚ್ಚು ಸೇವಿಸಿದರೆ ಅದು ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡುತ್ತದೆ.
ಆಲ್ಕೋಹಾಲ್ ಅಂಶ ಹೆಚ್ಚಿರುವ ಬಿಯರ್ ಕುಡಿಯುವುದರಿಂದ ಅಧಿಕ ರಕ್ತದೊತ್ತಡ ಮತ್ತು ಮೂತ್ರಪಿಂಡದ ಸಮಸ್ಯೆಗಳು ಉಂಟಾಗಬಹುದು. ಏಕೆಂದರೆ ಬಿಯರ್ ಮೂತ್ರವರ್ಧಕವಾಗಿದ್ದು, ಇದರಿಂದಾಗಿ ಮೂತ್ರಪಿಂಡಗಳಿಗೆ ಹೆಚ್ಚಿನ ಒತ್ತಡ ವನ್ನು ಬೀರುತ್ತದೆ. ಇದು ನಿರ್ಜಲೀಕರಣಕ್ಕೂ ಕಾರಣವಾಗಬಹುದು ಮತ್ತು ದೇಹದ ಸಮತೋಲನವನ್ನು ತಪ್ಪಿಸಬಹುದು.
ದೀರ್ಘಾವಧಿಯಲ್ಲಿ, ಇದು ಮೂತ್ರಪಿಂಡಗಳಿಗೆ ಹಾನಿಯನ್ನು ಉಂಟು ಮಾಡಬಹುದು ಮತ್ತು ಮೂತ್ರಪಿಂಡದ ಕಲ್ಲುಗಳು ಅಥವಾ ಮೂತ್ರಪಿಂಡದ ವೈಫಲ್ಯಕ್ಕೂ ಕಾರಣವಾಗಬಹುದು.
ಅನೇಕ ದೇಶಗಳಲ್ಲಿ ನಿಷೇಧಿಸಲಾದ, ಆದರೆ ಭಾರತದಲ್ಲಿ ಮಾರಾಟವಾಗುತ್ತಿರುವ 4 ಔಷಧಿಗಳು
ನಿಯಮಿತವಾಗಿ ಬಿಯರ್ ಸೇವನೆ ಮಾಡುವುದರಿಂದ ಕೆಲವು ವಿಟಮಿನ್ ಗಳು ಮತ್ತು ಖನಿಜಗಳ ಬೇಡಿಕೆಯನ್ನು ಹೆಚ್ಚಿಸಬಹುದು. ಸರಿಯಾದ ಪ್ರಮಾಣದಲ್ಲಿ ಖನಿಜಗಳು ಸಿಗದಿದ್ದರೆ, ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಆಲ್ಕೋಹಾಲ್ ಚಯಾಪಚಯ ಕ್ರಿಯೆಗೆ ದೇಹಕ್ಕೆ ಕೆಲವು ಹೆಚ್ಚುವರಿ ಪೋಷಕಾಂಶಗಳ ಅಗತ್ಯವಿದೆ. ಇದರಿಂದಾಗಿ ದೇಹವು ಅವನ್ನು ಹೀರಿಕೊಳ್ಳಲು ಹೆಚ್ಚು ಶ್ರಮಪಡಬೇಕಾಗುತ್ತದೆ. ಇದು ವಿಟಮಿನ್ ಕೊರತೆಗೆ ಕಾರಣವಾಗಬಹುದು ಮತ್ತು ದೇಹದ ಆಂತರಿಕ ಕ್ರಿಯೆಗೆ ತೊಂದರೆ ಉಂಟುಮಾಡಬಹುದು.
ಕೆಲವು ಅಧ್ಯಯನಗಳ ಪ್ರಕಾರ ಬಿಯರ್ ಕುಡಿಯುವುದರಿಂದ ವ್ಯಕ್ತಿಯು ಬೇಗನೆ ನಿದ್ರೆಗೆ ಜಾರಲು ನೆರವಾಗಬಹುದು. ಆದರೆ ಇದು ಹೆಚ್ಚು ಕಾಲ ಉಳಿಯದೆ ನಿದ್ರಾಹೀನತೆಗೆ ಕಾರಣವಾಗಬಹುದು. ಇದು ಹಗಲು ಹೊತ್ತಿನಲ್ಲಿ ಜಡತ್ವ, ಏಕಾಗ್ರತೆ ಯ ಕೊರತೆ, ಆಯಾಸಕ್ಕೆ ಕಾರಣವಾಗಬಹುದು.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665

ಆಲ್ಕೋಹಾಲ್ ನಿದ್ರೆ ಮತ್ತು ಮನಸ್ಥಿತಿ ಎರಡನ್ನೂ ಹಾಳು ಮಾಡಬಹುದು. ಅತಿಯಾದ ಮದ್ಯ ಸೇವನೆಯಿಂದಾಗಿ ರಾತ್ರಿ ವೇಳೆ ನಿದ್ರಾಹೀನತೆಯಿಂದ ಬಳಲುವ ಸಂಭವವಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
https://twitter.com/SaakshaTv/status/1350836625282981890?s=19
https://twitter.com/SaakshaTv/status/1351192252895408133?s=19








