ಏನಿದು ಕಪ್ಪು ಶಿಲೀಂಧ್ರ ಸೋಂಕು..? ಇದರ ಲಕ್ಷಣಗಳೇನು…?
ಹೈದರಾಬಾದ್ : ದೇಶದಾದ್ಯಂತ ಕೊರೊನಾ ಎರಡನೇ ಅಲೆಯ ಅಬ್ಬರ ಜೋರಾಗಿದೆ. ಹೆಮ್ಮಾರಿಯ ನರ್ತನಕ್ಕೆ ಜನರು ಬೀದಿ ಬೀದಿಯಲ್ಲಿ ಸಾಯುವಂತಾಗಿದೆ.
ಇದರ ಮಧ್ಯೆ ಸೋಂಕಿನಿಂದ ಚೇತರಿಸಿಕೊಂಡವರು ಕೂಡ ಈಗ ಚಿಂತೆಗೀಡಾಗುತ್ತಿದ್ದಾರೆ.
ಇದಕ್ಕೆ ಕಾರಣ ಕೋವಿಡ್-19ನಿಂದ ಚೇತರಿಕೆಯಾದ ನಂತರ ಕಾಣಿಸಕೊಳ್ಳುತ್ತಿರುವ ಮ್ಯೂಕಾರ್ಮೈಕೋಸಿಸ್ ಅಥವಾ ಕಪ್ಪು ಶಿಲೀಂಧ್ರ..!!
ಏನಿದು ಕಪ್ಪು ಶಿಲೀಂಧ್ರ..?
ಇದು ಮ್ಯೂಕಾರ್ಮೈಕೋಸಿಸ್ ಎಂಬ ಶಿಲೀಂಧ್ರದಿಂದ ಬರುವ ಸೋಂಕು. ಇದು ದೇಹದ ಯಾವುದೇ ಭಾಗದಲ್ಲಿ ಕಾಣಿಸಿಕೊಳ್ಳಬಹುದು.
ದೇಶದಲ್ಲಿ ಕೊರೊನಾ ಸೋಂಕು ಜೊತೆ ಜೊತೆಗೆ ಕಪ್ಪು ಶಿಲೀಂಧ್ರ ಸೋಂಕು ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ.
ಇದು ದೇಹದಲ್ಲಿ ವೇಗವಾಗಿ ಹರಡುತ್ತದೆ ಮತ್ತು ರೋಗಲಕ್ಷಣಗಳನ್ನು ನಿರ್ಲಕ್ಷಿಸಿದರೆ ಅಥವಾ ಚಿಕಿತ್ಸೆಯು ವಿಳಂಬವಾದರೆ ಇದು ಮಾರಕವಾಗಬಹುದು.
ಕೋವಿಡ್-19 ಚಿಕಿತ್ಸೆಯ ಭಾಗವಾಗಿ ಸ್ಟೀರಾಯ್ಡ್ಗಳನ್ನು ತೆಗೆದುಕೊಳ್ಳುವ ರೋಗಿಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ.
ಇದು ವಿಶೇಷವಾಗಿ ಮಧುಮೇಹ ರೋಗಿಗಳಲ್ಲಿ, ರಕ್ತದ ಸಕ್ಕರೆ ಮಟ್ಟ ಹೆಚ್ಚಳಕ್ಕೆ ಕಾರಣವಾಗಿದೆ.
ರೋಗ ಲಕ್ಷಣಗಳೇನು..?
ಎದೆ ನೋವು, ಉಸಿರಾಟದ ಸಮಸ್ಯೆ
ಕಣ್ಣು ನೋವು, ಮಸುಕಾಗುವ ದೃಷ್ಟಿ
ಮೂಗಿನಲ್ಲಿ ಮೂಗಿನಲ್ಲಿ ಕಪ್ಪು / ರಕ್ತಸಿಕ್ತ ದ್ರವ
ಕೆನ್ನೆಯ ಮೂಳೆಯ ಮೇಲೆ ನೋವಾಗುವುದು.
ಒಂದು ಬದಿಯ ಮುಖದ ಮರಗಟ್ಟುವಿಕೆ
ಮೂಗಿನ ಮೇಲೆ ಕಪ್ಪು ಬಣ್ಣ ಬರುವುದು
ಹಲ್ಲುನೋವು, ಹಲ್ಲುಗಳು ಸಡಿಲಗೊಳ್ಳುವುದು
ಜ್ವರ, ಚರ್ಮದ ಗಾಯ