ಮಂಕಿಪಾಕ್ಸ್ ಎಂದರೇನು? ಅದರ ಲಕ್ಷಣಗಳೇನು ? ತಿಳಿದುಕೊಳ್ಳಿ..
ಕರೋನಾ ಸಾಂಕ್ರಾಮಿಕದಿಂದ ಹೊರಬರುವ ಮುನ್ನವೇ ಜಗತ್ತು ಇನ್ನೊಂದು ಮಹಾಮಾರಿಗೆ ಆತಂಕಪಡುವ ಪರಿಸ್ಥಿತಿ ಬಂದೊದಗಿದೆ. ದೆಹಲಿಯಲ್ಲಿಂದು ಭಾರತದ ನಾಲ್ಕನೆ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದೆ. ಯಾವುದೇ ಪ್ರಯಾಣದ ಹಿಸ್ಟರಿ ಇಲ್ಲದೆ ಇದ್ದರು ಸೋಂಕಿಗೆ ತುತ್ತಾಗಿರುವುದು ಆತಂಕವನ್ನ ಹೆಚ್ಚಿಸಿದೆ. ಇನ್ನೊಂದೆಡೆ ವಿಶ್ವ ಆರೋಗ್ಯ ಸಂಸ್ಥೆ (WHO) ಮಂಕಿಪಾಕ್ಸ್ ಸೋಂಕನ್ನ ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದೆ. WHO, ಸುದೀರ್ಘ ಚರ್ಚೆಯನ್ನ ನಡೆಸಿ ಈ ನಿರ್ಧಾರವನ್ನ ತೆಗೆದುಕೊಂಡಿದೆ. ಮಂಕಿಪಾಕ್ಸ್ ಇದುವರೆಗೆ 80 ದೇಶಗಳಿಗೆ ಹರಡಿದ್ದು, ಭಾರತದಲ್ಲಿ ಈವರೆಗೆ 4 ವೈರಸ್ ಪ್ರಕರಣಗಳು ವರದಿಯಾಗಿವೆ.
ಮಂಕಿಪಾಕ್ಸ್ ಎಂದರೇನು?
ಈ ಸೋಂಕು ಮಂಕಿಪಾಕ್ಸ್ ಎಂಬ ವೈರಸ್‌ನಿಂದ ಹರಡುತ್ತದೆ. ಮಂಕಿಪಾಕ್ಸ್ ಸಿಡುಬು ರೋಗದ ಕುಟುಂಬಕ್ಕೆ ಸೇರಿದ ವೈರಸ್ ಆದರೆ ಇದರ ಲಕ್ಷಣಗಳು ಸಡುಬಿನಷ್ಟು ತೀವ್ರವಾಗಿರುವುದಿಲ್ಲ. ಸೌಮ್ಯವಾಗಿರುತ್ತವೆ. ಮಂಕಿಪಾಕ್ಸ್ ಅಪರೂಪವಾಗಿ ಮಾರಣಾಂತಿಕ ರೋಗ ಚಿಕನ್ ಪಾಕ್ಸ್ ನ ಲಕ್ಷಣಗಳನ್ನ ಹೊಂದಿದೆಯಾದರೂ ಅದಕ್ಕು ಇದಕ್ಕೂ ಸಂಬಂಧವಿಲ್ಲ.
ಹರಡುವಿಕೆ
ಸೋಂಕು ತಗುಲಿರುವ ವನ್ಯ ಜೀವಿಗಳಿಂದ ಈ ವೈರಾಣು ಹರಡುತ್ತದೆ. ಸೋಂಕು ತಗುಲಿರುವ ವ್ಯಕ್ತಿಯ ನಿಕಟ ಸಂಪರ್ಕದಿಂದ ಮನುಷ್ಯನಿಗೂ ಇದು ಹರಡುತ್ತದೆ ಸೋಂಕಿತ ರೋಗಿಯ ಚರ್ಮದ ಸಂಪರ್ಕದಿಂದ ಹರಡುವ ರೋಗ ಯಾರನ್ನ ಬೇಕಾದರೂಈ ಭಾಧಿಸಬಹುದು. ಇದಲ್ಲದೆ, ಸೋಂಕಿತ ವ್ಯಕ್ತಿಯ ಬಟ್ಟೆ, ಪಾತ್ರೆಗಳು ಮತ್ತು ಹಾಸಿಗೆಗಳ ಸಂಪರ್ಕಕ್ಕೆ ಬರುವ ಮೂಲಕವೂ ಮಂಕಿಪಾಕ್ಸ್ ಹರಡುತ್ತದೆ.
ಲಕ್ಷಣಗಳು
ಸೋಂಕು ತಗುಲಿದ 5-13 ದಿನಗಳಲ್ಲಿ ಲಕ್ಷಣಗಳು ಗೋಚರಿಸುತ್ತದೆ, ಲಕ್ಷಣ ಗೋಚರಿಸಲು 21 ದಿನಗಳಾದರೂ ಅದರಲ್ಲಿ ಅಚ್ಚರಿ ಇಲ್ಲ. ಜ್ವರ, ತಲೆ ನೋವು, ಬೆನ್ನು ನೋವು, ಸ್ನಾಯು ನೋವು, ಚಳಿ ಹಾಗೂ ಬಳಲಿಕೆ, ಜ್ವರದೊಂದಿಗೆ ದೇಹದ ಬೇರೆ ಭಾಗಗಳಿಗೆ ಹರಡುವುದಕ್ಕೂ ಮುನ್ನ, ಮುಖ, ಕೈ ಕಾಲುಗಳಲ್ಲಿ ದದ್ದು ಹೊರಹೊಮ್ಮುತ್ತದೆ. ಬಳಿಕ ಬಾಯಿಯ ಒಳಗೆ, ಕಾರ್ನಿಯಾ, ಜನನಾಂಗಗಳಲ್ಲೂ ಕಾಣಿಸಿಕೊಳ್ಳಬಹುದಾಗಿದೆ.
ಚಿಕಿತ್ಸೆ..
ಹಳೆಯ ಲಸಿಕೆಯನ್ನು ಹೊರತುಪಡಿಸಿದರೆ, ಸಧ್ಯಕ್ಕೆ ಇದಕ್ಕೆ ಯಾವುದೇ ಚಿಕಿತ್ಸೆಯೂ ಇಲ್ಲ, ಡಬ್ಲ್ಯುಹೆಚ್ಒ ಈ ವರೆಗೂ ಮಂಕಿಪಾಕ್ಸ್ ಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆಯನ್ನೂ ಸಲಹೆ ನೀಡಿಲ್ಲ. ಆದರೆ ಆರ್ಥೋಪಾಕ್ಸ್ ವೈರಸ್‌ಗಳ ವಿರುದ್ಧ ರಕ್ಷಿಸಲು ಪರವಾನಗಿ ಪಡೆದ ಟೆಕೊವಿರಿಮಾಟ್‌ನಂತಹ ಆಂಟಿವೈರಲ್‌ಗಳಿವೆ.