ನ್ಯೂಸ್ ಡೆಸ್ಕ್ಕ : ಭಾರತ ಮತ್ತು ಚೀನಾ ಗಡಿ ಪ್ರದೇಶದಲ್ಲಿ ಐದು ದಶಕಗಳ ಬಳಿಕ ಮತ್ತೆ ರಕ್ತಪಾತವಾಗಿದೆ. ಇದರಿಂದಾಗಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ ಏ) 45 ಸೈನಿಕರು ಹತರಾಗಿದ್ದಾರೆ. ಹಾಗಾಗಿ ಪೂರ್ವ ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ಪರಿಸ್ಥಿತಿ ಪ್ರಕ್ಷುಬ್ಧವಾಗಿದೆ.
ಸೋಮುವಾರ ರಾತ್ರಿ ಪೂರ್ವ ಲಡಾಖ್ ಗಾಲ್ವಾನ್ ಕಣಿವೆಯಲ್ಲಿ ಉಭಯ ದೇಶಗಳ ಯೋಧರ ನಡುವೆ ಸಂಘರ್ಷ ಶುರುವಾಗಿದೆ. ಇದರಿಂದಾಗಿ ಗಡಿ ಭಾಗದಲ್ಲಿ ಬೂದಿ ಮುಚ್ಚಿದ ಕೆಂಡದಂತ ವಾತಾವರಣ ಸೃಷ್ಟಿಯಾಗಿದೆ. ಎರಡು ದೇಶದ ಯೋಧರಲ್ಲಿ ರೋಷ ಹೆಚ್ಚಾಗಿದೆ. ರೋಷ ಯಾವದೇ ಕ್ಷಣದಲ್ಲಿದ್ದಾರೂ ಸ್ಪೋಟಗೊಳ್ಳುವ ಸನ್ನಿವೇಶವಿದೆ.]
ಮಾತುಕತೆ ಮುಕ್ತಾಯಕ್ಕೂ ಮುನ್ನ ಸಂಘರ್ಷ
ಕಳೆದ ಐದು ವಾರಗಳಿಂದ ಉಭಯ ದೇಶಗಳ ನಡುವೆ ಸಮಸ್ಯೆ ಉಂಟಾಗಿದೆ. ಈ ಗಂಭೀರ ಬಿಕ್ಕಟು ಶಮನ ಮಾಡಲು ಉಭಯ ದೇಶಗಳ ಸೇನಾ ಉನ್ನತ ಅಧಿಕಾರಿಗಳು ಪ್ರಯತ್ನ ನಡೆಸುತ್ತಿದ್ದಾರೆ. ಎರಡೂ ದೇಶದ ಸೇನಾಧಿಕಾರಿಗಳು ನಿನ್ನೆ ಮೊನ್ನೆ ಮಧ್ಯರಾತ್ರಿಯಿಂದಲೇ ಸತತ ಸಭೆ ನಡೆಸಿದ್ದಾರೆ. ಪರಿಸ್ಥಿತಿ ಶಾಂತವಾಗುತ್ತದೆ ಎನ್ನುವಷ್ಟರಲ್ಲಿ ಬೀಜಿಂಗ್ ಕುತಂತ್ರದಿಂದ ಪರಿಸ್ಥಿತಿ ಮತ್ತೆ ಉದ್ವಿಗ್ನಗೊಂಡು ಯುದ್ಧ ಭೀತಿಯ ಸನ್ನಿವೇಶ ಸೃಷ್ಟಿಯಾಗಿದೆ.
ಸದ್ಯ ದೇಶದ ಗಡಿ ಭಾಗದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಪರಿಸ್ಥಿ ನಿರ್ಮಾಣವಾಗಿದೆ. ಪೂರ್ವ ಲಡಾಖ್ ನ ಪಂಗಾಂಗ್ ತ್ಸೋ, ಗಾಲ್ವಾನ್ ಕಣಿವೆ ಸೇರಿದಂತೆ ಕಲೆ ಕಡೆ ಎರಡು ದೇಶದ ಯೋಧರು ಅಲರ್ಟ್ ಆಗಿ ನಿಂತಿದ್ದಾರೆ. ಯುದ್ದಾಸ್ತ್ರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಜಮಾ ಮಾಡಿಕೊಂಡಿವೆ. ಜೊತೆಗೆ ಭಾರತ ಮತ್ತು ಚೀನಾ ಯದ್ದದ ಹೆಲಿಕಾಪ್ಟರ್ ಗಳು ಗಡಿ ಪ್ರದೇಶದಲ್ಲಿ ಗಸ್ತು ತಿರುಗುತ್ತಿವೆ.








