ಆಷಾಡ ಮಾಸದ ಮಹತ್ವವೇನು.?? ಯಾವುದೇ ಶುಭ ಕಾರ್ಯಗಳಿಗೂ ಈ ಮಾಸ ಶುಭವಲ್ಲ ಏಕೆ ಗೋತ್ತೆ..
ಆಷಾಡ ಮಾಸ ದಕ್ಷಿಣಾಯಣ ಪ್ರಾರಂಭವನ್ನು ಸೂಚಿಸುತ್ತದೆ. ಸೂರ್ಯನು ದಕ್ಷಿಣದ ಕಡೆಗೆ ಸಾಗುತ್ತಾ ಕರ್ಕಾಟಕ ರಾಶಿಗೆ ಪ್ರವೇಶಿಸುತ್ತಾನೆ, ಇದನ್ನು ಕರ್ಕಾಟಕ ಸಂಕ್ರಮಣ ಎಂದು ಕರೆಯಲಾಗುತ್ತದೆ. ಉತ್ತರಾಯಣದ ನಂತರ ನಿಖರವಾಗಿ ಆರು ತಿಂಗಳ ನಂತರ ಇದು ಸಂಭವಿಸುತ್ತದೆ. .
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಆಷಾಡ ಮಾಸದಲ್ಲಿ ಗುರುವಿನ ಪೂಜೆಯನ್ನು ಮಾಡಿದರೆ ಹೆಚ್ಚು ಫಲ ಸಿಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಅಲ್ಲದೇ ದೇವಿಯ ಪೂಜೆ ಮಾಡುವುದು ಕೂಡ ತುಂಬಾ ಮಂಗಳಕರ ಮತ್ತು ಶ್ರೇಯಸ್ಕರ ಎಂದು ನಂಬಲಾಗಿದೆ. ಈ ಮಾಸದಲ್ಲಿ ಶ್ರೀಹರಿ ವಿಷ್ಣುವಿನ ನಾಮಸ್ಮರಣೆ ಹಾಗೂ ಪೂಜೆ ಮಾಡುವುದರಿಂದ ಸಂತಾನ ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತದೆ.
ಆಷಾಡದಲ್ಲೇಕೆ ಶುಭ ಕಾರ್ಯ ಮಾಡುವುದಿಲ್ಲ— ಯಾವುದೇ ಶುಭ ಕಾರ್ಯಗಳಿಗೂ ಈ ಮಾಸ ಶುಭವಲ್ಲ ಎಂದು ನಂಬಿರುವಂತೆ, ಮದುವೆ, ಗೃಹಪ್ರವೇಶ, ಉಪನಯನ, ವಾಹನ ಖರೀದಿ, ಆಸ್ತಿ ಖರೀದಿ, ಹೊಸ ವ್ಯಾಪಾರ ಆರಂಭ ಸೇರಿದಂತೆ ಯಾವುದೇ ಕಾರ್ಯಕ್ರಮಗಳನ್ನು ಈ ಮಾಸದಲ್ಲಿ ನಡೆಸಲಾಗುವುದಿಲ್ಲ. ಅಲ್ಲದೇ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ಹೊಸದಾಗಿ ಮದುವೆಯಾದ ದಂಪತಿಗಳು ಒಟ್ಟಿಗೆ ಇರಲು ಅವಕಾಶವಿಲ್ಲ. ಪತ್ನಿ ಒಂದು ಮಾಸ ಪತಿ ಯನ್ನು ಬಿಟ್ಟು ತನ್ನ ತವರು ಮನೆಯಲ್ಲಿ ನೆಲೆಸುತ್ತಾಳೆ. ಇದರ ಹಿಂದೆ ವೈಜ್ಞಾನಿಕ ಕಾರಣವಿದೆ, ಆಷಾಡ ಸಮಯದಲ್ಲಿ ಹುಡುಗಿ ಗರ್ಭ ಧರಿಸಿದರೆ ಬೇಸಿಗೆ ತಿಂಗಳಿನಲ್ಲಿ ಅವಳಿಗೆ ಹೆರಿಗೆ ಆಗುತ್ತದೆ. ಆದ್ದರಿಂದ ಮಗು ಮತ್ತು ತಾಯಿಗೆ ಬಿಸಿಲಿನ ಶಾಖ ಹೆಚ್ಚುತ್ತದೆ, ಇದರಿಂದ ಆರೋಗ್ಯ ಸಮಸ್ಯೆಗಳಿಗೆ ಒಳಗಾಗಬಹುದು.
ಮಳೆಯ ಆರ್ಭಟ –ಆಷಾಢ ಮಾಸದಲ್ಲಿ ಶುಭ ಕಾರ್ಯಗಳಿಗೆ ಅಡ್ಡಿಮಾಡುವ ಮತ್ತೊಂದು ವೈಜ್ಞಾನಿಕ ಕಾರಣ ಈ ಮಾಸದಲ್ಲಿ ಮಳೆಯ ಆರ್ಭಟ ಹೆಚ್ಚಿರುತ್ತದೆ. ನಿರಂತರವಾದ ಮಳೆ, ಗಾಳಿಯಿಂದ ಸಂಚಾರಕ್ಕೆ ಅಡೆತಡೆ ಉಂಟಾಗುತ್ತದೆ. ಈ ಎಲ್ಲಾ ಕಾರಣಗಳಿಂದ ಆಷಾಢಮಾಸದಲ್ಲಿ ಶುಭ ಕಾರ್ಯ ಮಾಡಲು ಅನುಕೂಲವಾಗಿಲ್ಲ ಎಂದು ನಿಷೇಧಿಸಿರಬೇಕು. ಸತತ ಮಳೆಯ ಜತೆಗೆ ಈ ಮಾಸದಲ್ಲಿ ರೈತಾಪಿ ವರ್ಗಕ್ಕೆ ಹೊಲ- ಗದ್ದೆಗಳಲ್ಲಿ ಆಪಾರ ಕೆಲಸವಿರುತ್ತದೆ. ಬಿತ್ತನೆ ಮಾಡುವುದು, ಕಳೆ ಕೀಳುವುದು ಬೇಸಾಯ ಕೆಲಸದಲ್ಲಿ ನಿರತರಾಗಿರುತ್ತಾರೆ. ಈ ಸಂದರ್ಭದಲ್ಲಿ ಇತರ ಕೆಲಸ, ಶುಭ ಕಾರ್ಯಗಳಿಗೆ ಹೆಚ್ಚಿನ ಸಮಯ ಸಿಗದ ಕಾರಣವೂ ಸಹ ಆಷಾಡದಲ್ಲಿ ಕಾರ್ಯಕ್ರಮಗಳು ಮಾಡುವ ರೂಢಿ ಇಲ್ಲ. ಮತ್ತೊಂದು ನಂಬಿಕೆಯ ಪ್ರಕಾರ ಈ ಮಾಸದಲ್ಲಿ ಶ್ರೀ ವಿಷ್ಣುವು ಚಾತುರ್ಮಾಸ ದ ಯೋಗನಿದ್ರೆಗೆ ಜಾರುತ್ತಾನೆ, ಹಾಗಾಗಿ ಈ ತಿಂಗಳು ಯಾವುದೇ ಶುಭ ಕಾರ್ಯ ಮಾಡುವುದಿಲ್ಲ ಎಂದು ಹೇಳಲಾಗುತ್ತದೆ.

||ಆಷಾಡ ಏಕಾದಶಿ ವಿಚಾರ ಧಾರೆ॥
20-07-2021
ಶಯನಿ ಏಕಾದಶಿ , ಮಹಾಏಕಾದಶಿ , ಪ್ರಥಮ ಏಕಾದಶಿ , ಪದ್ಮ ಏಕಾದಶಿ , ದೇವ ಶಯನಿ ಏಕಾದಶಿ , ದೇವ ಪೋಢಿ ಏಕಾದಶಿ ಎಂಬ ಹೆಸರುಗಳಿಂದ ಕರೆಯಲಾಗುವ ಈ ದಿನವು ಆಷಾಢ ಶುಕ್ಲ ಪಕ್ಷದ ಹನ್ನೊಂದನೇ ದಿನ (ಏಕಾದಶಿ)
ಆದ್ದರಿಂದ ಇದು ಆಷಾಢ ಏಕಾದಶಿ.
ಈ ಪವಿತ್ರ ದಿನವು ವೈಷ್ಣವರಿಗೆ ವಿಶೇಷ ಮಹತ್ವವುಳ್ಳದ್ದಾಗಿದೆ.
ಈ ದಿನ “ವಿಠ್ಠಲ ರುಕುಮಾಯಿ” ಪೂಜೆ ಮಾಡುತ್ತ, ಪ್ರಾರ್ಥನೆ, ಭಜನೆಗಳಲ್ಲಿ ಕಳೆಯುತ್ತಾರೆ.
ಭಕ್ತರು ಉಪವಾಸವಿದ್ದು , ಮುಂದಿನ ನಾಲ್ಕು ತಿಂಗಳ ಕಾಲ (ಚಾತುರ್ಮಾಸ) ದ ಆಚರಿಸಬೇಕಾದ ವ್ರತಗಳನ್ನು ಈ ದಿನ ಇಟ್ಟುಕೊಳ್ಳುತ್ತಾರೆ.
ಇದು ಯಾವುದಾದರೂ ಆಹಾರ ಪದಾರ್ಥವನ್ನು ಬಿಡುವ ಬಗ್ಗೆ ಮತ್ತು ಪ್ರತಿ ಏಕಾದಶಿ ದಿನ ಉಪವಾಸವನ್ನು ಆಚರಿಸುವ ಬಗ್ಗೆ ಇರುತ್ತದೆ.
ವಿಷ್ಣುವು ಕ್ಷೀರಸಾಗರದಲ್ಲಿ ಆದಿಶೇಷನ ಮೇಲೆ ಈ ದಿನ ಮಲಗಿ ಯೋಗನಿದ್ರೆ ಹೋಗುತ್ತಾನೆ ಎಂಬ ನಂಬಿಕೆ ಇದೆ.
ಈ ಕಾರಣದಿಂದ ಇದನ್ನು ದೇವಶಯನಿ ಏಕಾದಶಿ ಅಥವಾ ಹರಿ-ಶಯನಿ ಎಂದು ಕರೆಯಲಾಗುತ್ತದೆ.
ವಿಷ್ಣುವು ನಾಲ್ಕು ತಿಂಗಳ ನಂತರ ಬರುವ ಪ್ರಬೋಧಿನಿ ಏಕಾದಶಿಯಂದು ತನ್ನ ನಿದ್ದೆಯಿಂದ ಎಚ್ಚತ್ತುಕೊಳ್ಳುತ್ತಾನೆ.
ಈ ನಾಲ್ಕು ತಿಂಗಳ ಅವಧಿಯು ಚಾತುರ್ಮಾಸ.
ತಪ್ತ ಮುದ್ರಾ ಧಾರಣೆ
ಸಂಸಾರ ದುಃಖ ಸಂತಪ್ತರಾದ ಜೀವಿಗಳು ಭಗವಂತನ ಒಲುಮೆಗೆ ಪಾತ್ರರಾಗಲು ಒದಗುವ ಸುಸಂದರ್ಭ ಇದಾಗಿದೆ . ಆಷಾಢಮಾಸದ ಏಕಾದಶಿಯಂದು ಪರಮಾತ್ಮ ಯೋಗನಿದ್ರೆಗೆ ತೊಡಗುತ್ತಾನೆ . | ಆದ್ದರಿಂದ ಭಗವಂತ ಮಲಗಿದರೂ ( ಯೋಗನಿದ್ರೆ ) ನಾವು ಮಲಗದೇ ಎಚ್ಚೆತ್ತ ಸಾಧನೆ ನಡೆಸಿ ಸಾರ್ಥಕ್ಯ ಹೊಂದಬೇಕು . ಆ ಎಚ್ಚರ ಮೂಡಲು ಬಿಸಿಯಾದ ಮುದ್ರೆಯಿಂದ ದೇಹವನ್ನು ಅಂಕಿತಗೊಳಿಸಬೇಕು . ವೈಷ್ಣವದೇಹದ ಗುರುತಿಗಾಗಿ ಸುದರ್ಶನ ಹೋಮ ಮಾಡಿ ಗುರುಗಳಿಂದ ಅಭಿಮಂತ್ರಿತವಾದ ಮುದ್ರೆಯನ್ನು ಧರಿಸಬೇಕು . ಇದರಿಂದ ಈ ದೇಹ ಪರಮಾತ್ಮನಿಗೆ ಸೇರಿದ್ದು ಎಂದು ಸೂಚಿಸಿದಂತೆಯೇ ನಮ್ಮ ಪಾಪಗಳೆಲ್ಲಾ ಬಿಸಿಮುದ್ರೆಯಿಂದ ಸುಟ್ಟು ಹೋಗಿ ನಾವು ವಿಷ್ಣುವಿನ ಸೇವೆಗೆ ಅರ್ಹರಾಗುತ್ತೇವೆ . ಹೀಗಾಗಿ ವೈಷ್ಣವದೀಕ್ಷೆಯಂದಿಗೆ ವಿಷ್ಣು ಪ್ರಿಯವಾದ ಚಾತುರ್ಮಾಸ್ಯ ವ್ರತಕ್ಕೆ ನಮ್ಮ ಮನಸ್ಸಿಗೆ ಭದ್ರಬುನಾದಿ ದೊರಕಿತು
ತಪ್ತ ಮುದ್ರಾಧಾರಣೆ ವಿಷ್ಣು ಭಕ್ತಿಯ ಸಕಲ ಸದ್ಗುಣಗಳಿಗೂ ಹೃದಯ ಸ್ಥಾನೀಯ ಎಂಬುದು ವೈಷ್ಣವರ ನಂಬಿಕೆ. ಹೀಗಾಗಿ ಇದು ವೈಷ್ಣವರ ವಿಶಿಷ್ಟ ಲಕ್ಷಣವೆನ್ನಿಸಿದೆ. ವೈಷ್ಣವತ್ವಕ್ಕೆ ದ್ಯೋತಕವಾದ ಅತ್ಯಂತ ಪ್ರಮುಖ ಬಾಹ್ಯ ಲಕ್ಷಣ ಎಂಬುದು ಇದರ ಹಿರಿಮೆ.
ಪ್ರತಿದಿನದ ಗೋಪಿಚಂದನದ ಊರ್ಧ್ವ ಪುಂಡ್ರಧಾರಣೆ, ಪಂಚಮುದ್ರ ಧಾರಣೆಯಂತೆ ಅತ್ಯಂತ ಮಹತ್ವಪೂರ್ಣವಾದ ಬಾಹ್ಯಸಂಸ್ಕಾರವಾಗಿ ಈ ತಪ್ತ ಮುದ್ರಾಧಾರಣೆ ನಡೆಯುತ್ತದೆ.
ಪ್ರತಿ ವರ್ಷವೂ ಶಯನೈಕಾದಶೀ ದಿನ ತಪ್ತ ಮುದ್ರಾಧಾರಣೆಯನ್ನು ಮಠಾಧೀಶರಿಂದಲೇ ಸ್ವೀಕರಿಸುವುದು ಶ್ರೇಷ್ಠ ಎಂದು ಶಾಸ್ತ್ರಗಳಲ್ಲಿದೆ. ಇಂತಹ (ತಪ್ತ) ಸುದರ್ಶನ ಧಾರಣೆಯು ನಿರ್ಮಲ ತತ್ತ್ವಜ್ಞಾನ ಪ್ರಾಪ್ತಿಯ ಅಪೂರ್ವ ಸಾಧನ ಎಂಬುದರಲ್ಲಿ ಅಪಾರ ಔಚಿತ್ಯವಿದೆ.
ಮುದ್ರಾಧಾರಣೆಗೆ ಬಳಸುವ ಸುದರ್ಶನ ಮತ್ತು ಪಾಂಚಜನ್ಯ ಮುದ್ರೆಗಳನ್ನು ಬೆಂಕಿಯಲ್ಲಿ ಕಾಯಿಸಿ ಮೈ ಮೇಲೆ ಮುದ್ರೆ ಹಾಕಲಾಗುತ್ತದೆ.
ಬಲ ಭುಜ, ಬಲಸ್ತನ ಭಾಗದಲ್ಲಿ ಚಕ್ರವನ್ನು, ಎಡ ಭುಜ, ಎಡ ಸ್ತನ ಭಾಗದಲ್ಲಿ ಶಂಖವನ್ನು, ಹೊಟ್ಟೆಯ ಮೇಲೆ ಒಂದು ಚಕ್ರವನ್ನು ಮುದ್ರಿಸಬೇಕು.
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಪ್ರಯತ್ನಪೂರ್ವಕವಾಗಿ ಈ ಪಂಚಮುದ್ರೆಯನ್ನು ಧರಿಸಬೇಕು. ಉಪವೀತರಾಗದ ಬಾಲಕರಿಗೆ ಹೊಟ್ಟೆಯ ಮೇಲೆ ಮಾತ್ರ ಒಂದು ಚಕ್ರ, ಸ್ತ್ರೀಯರಿಗೆ ಬಲ, ಎಡ ಕೈಗಳ ಮೇಲೆ ಮಾತ್ರ ಕ್ರಮವಾಗಿ ಚಕ್ರ ಶಂಖಗಳನ್ನು ಮುದ್ರಿಸಬೇಕು.
ಯಾವ ವಸ್ತು ಯಾರ ಅಧೀನವೋ ಅದರ ಮೇಲೆ ಅವರ ಚಿಹ್ನೆ ಹಾಕುವ ನಿಯಮವಿದೆ. ಈ ದೇಹ (ನಮ್ಮದಲ್ಲ) ನಮ್ಮ ಅಧೀನವಾದದ್ದಲ್ಲ. ಭಗವಂತನ ಅಧೀನವಾದದ್ದು. ಭಗವಂತನ ಅಧೀನವಾದ ಈ ದೇಹದ ಮೇಲೆ ಭಗವಂತನ ಚಿಹ್ನೆಗಾದ ಶಂಖ-ಚಕ್ರಗಳು ಬೀಳಬೇಕು ಎನ್ನುವುದು ಇದರ ಹಿಂದಿನ ತತ್ವ.
ಈ ದೇಹಕ್ಕೆ ಎಷ್ಟು ರೀತಿಯಿಂದ ವಿಹಿತವಾದ ಕ್ಲೇಶಗಳನ್ನು (ದಂಡನೆಯನ್ನು) ಕೊಡುತ್ತೇವೆ ಅದೂ ಒಂದು ತಪಸ್ಸು. ಈ ದೃಷ್ಟಿಯಲ್ಲಿ ಶಾಸ್ತ್ರೋಕ್ತವಾದ ದೇಹ ದಂಡನೆಯೂ ಒಂದು ತಪಸ್ಸು ಎಂಬ ಕಾರಣಕ್ಕಾಗಿಯೂ ತಪ್ತಮುದ್ರಾಧಾರಣೆ ವಾಡಿಕೆಯಲ್ಲಿದೆ.
ಮುದ್ರಾಧಾರಣೆಯ ಮುದ್ರೆಯಲ್ಲಿ ವೈದಿಕ ಆಧ್ಯಾತ್ಮಿಕ ದೃಷ್ಟಿಕೋನವಿದ್ದಂತೆ, ಸೂಕ್ಷ್ಮವಾಗಿ ವೈಜ್ಞಾನಿಕ ವೈದ್ಯಕೀಯ ಉದ್ದೇಶವೂ ಇದೆ.