ಜನಪ್ರಿಯ ಮೆಸೆಜಿಂಗ್ ಆಪ್ ವಾಟ್ಸಪ್ (Whats App) ಹಲವಾರು ಹೊಸ ಗೌಪ್ಯತೆಯ ಫೀಚರ್ಸ್ ಗಳನ್ನ ಪರಿಚಯಿಸುತ್ತಿದೆ. (Whats App New Features) ಇದೆಲ್ಲವೂ ಶೀಘ್ರದಲ್ಲೇ ಬಳಕೆದಾರರಿಗೆ ಲಭ್ಯವಾಗಲಿದೆ. ನೀವು ಆನ್ಲೈನ್ ನಲ್ಲಿರು ಸ್ಥಿತಿ ಮರೆಮಾಚುವ ಸಾಮರ್ಥ್ಯ. ಬಳಕೆದಾರರಿಗೆ ತಿಳಿಸದೆಯೇ ವಾಟ್ಸಪ್ ಗ್ರೂಪ್ (Whats App Group) ಗಳಿಂದ ನಿರ್ಗಮಿಸುವುದು (Left) ಮತ್ತು ಕೆಲವು ಸಂದೇಶಗಳಿಗೆ ಸ್ಕ್ರೀನ್ಶಾಟ್ಗಳನ್ನ (Screen Shot) ನಿರ್ಬಂಧಿಸುವ ಫೀಚರ್ಸ್ ಅನ್ನ ಒಳಗೊಂಡಿದೆ.
ವಾಟ್ಸಾಪ್ ನ ಪೋಷಕ ಕಂಪನಿಯಾದ ಮೆಟಾ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್ಬರ್ಗ್ ಅವರು ಮುಂಬರುವ ವಾಟ್ಸಾಪ್ ಫೀಚರ್ಸ್ ಗಳನ್ನ ಮುಂಚಿತವಾಗಿಯೇ ಘೋಷಿಸಿದ್ದಾರೆ.
- ನೀವು ಆನ್ ಲೈನ್ ನಲ್ಲಿರುವುದನ್ನ ಯಾರು ನೋಡಬೇಕು ಎಂದು ನಿರ್ಧರಿಸಬಹುದು..
ವಾಟ್ಸಾಪ್ ಬಳಕೆದಾರರು ಇನ್ನು ಮುಂದೆ ತಾವು ‘ಆನ್ಲೈನ್’ ನಲ್ಲಿರುವ ಸ್ಥಿತಿಯನ್ನ ಯಾರು ನೋಡಬಹುದು ಎಂಬುದನ್ನ ನಿರ್ಧರಿಸಬಹುದು. ಬಳಕೆದಾರರು ಆ್ಯಪ್ನಲ್ಲಿ ಸಕ್ರಿಯರಾಗಿದ್ದಾರೆ ಅಥವಾ ಇಲ್ಲವೇ ಎಂಬುದನ್ನ ಸ್ನೇಹಿತರು ಮತ್ತು ಕುಟುಂಬದ ಸದಸ್ಯರಿಗೆ ಖಾತ್ರಿಪಡಿಸಬಹುದು. - ಒಮ್ಮೆ ವೀಕ್ಷಿಸಬಹುದಾದ ಸಂದೇಶಗಳಿಗಾಗಿ ಸ್ಕ್ರೀನ್ಶಾಟ್ ನಿರ್ಬಂಧ..
ಮೆಸೆಜ್ ಕಳುಹಿಸುವವರು ಅದರಲ್ಲಿ ಸ್ಕ್ರೀನ್ಶಾಟ್ ಗಳನ್ನ ನಿರ್ಬಂಧಿಸುವುದನ್ನ ಆಯ್ಕೆ ಮಾಡಿದರೆ ವಾಟ್ಸಪ್ ಬಳಕೆದಾರರು ಒನ್ ಟೈಮ್ ವೀವ್ ಸಂದೇಶದ ಸ್ಕ್ರೀನ್ಶಾಟ್ಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಫೀಚರ್ಸ್ ‘ಒಮ್ಮೆ ವೀಕ್ಷಿಸಿ’ ವೈಶಿಷ್ಟ್ಯಕ್ಕೆ ಉತ್ತಮ ಸೇರ್ಪಡೆಯಾಗಿದ್ದು, ಬಳಕೆದಾರರು ಫೋಟೋಗಳು ಅಥವಾ ವೀಡಿಯೊಗಳನ್ನ ಡಿಜಿಟಲ್ ಹೆಜ್ಜೆ ಗುರುತನ್ನು ಬಿಡದೆಯೇ ಕಳುಹಿಸಲು ಅನುವು ಮಾಡಿಕೊಡುತ್ತದೆ. - ವಾಟ್ಸಾಪ್ ಗುಂಪುಗಳಿಂದ ಯಾರಿಗು ತಿಳಿಯದಂತೆ ನಿರ್ಗಮಿಸಬಹುದು….
ವಾಟ್ಸಾಪ್ ಗುಂಪುಗಳಿಂದ ನೀವು ಕಿರಿಕಿರಿ ಅನುಭವಿಸುತ್ತಿದ್ದು ಗುಂಪಿನಿಂದ ಹೊರಬರಲು ನಿರ್ಧರಿಸಿದ್ದರೆ ಅದಕ್ಕೆಂದ ಹೊಸ ಫೀಚರ್ ಬಿಡುಗಡೆಯಾಗುತ್ತಿದೆ. ಇದರಿಂದ ನೀವು ಗುಂಪಿನಲ್ಲಿರುವ ಯಾವುದೇ ಸದಸ್ಯರಿಗೆ ತಿಳಿಯದೇಯೇ ಗ್ರೂಪ್ ಗಳಿಂದ ಮೌನವಾಗಿ ನಿರ್ಗಮಿಸಬಹುದು.