WhatsApp data : ಬಳಕೆದಾರರ ಡೇಟಾ ಸೋರಿಕೆ ಸುದ್ದಿ ಸುಳ್ಳೆಂದ ವಾಟ್ಸಾಪ್
84 ದೇಶಗಳ ಸುಮಾರು 50 ಕೋಟಿ ವಾಟ್ಸಾಪ್ ಬಳಕೆದಾರರ ದತ್ತಾಂಶ ಸೋರಿಕೆಯಾಗಿದೆ ಎಂಬ ಸುದ್ದಿ ಸುಳ್ಳು ಎಂದು ವಾಟ್ಸಾಪ್ ಹೇಳಿದೆ.
ಇತ್ತೀಚೆಗೆ ಅನಾಮಧೇಯ ಹ್ಯಾಕರ್, ಭಾರತ ಸೇರಿದಂತೆ ಜಗತ್ತಿನ 84 ದೇಶಗಳ 50 ಕೋಟಿ ಬಳಕೆದಾರರ ಮಾಹಿತಿಯನ್ನು ಮಾರಾಟಕ್ಕೆ ಇಟ್ಟಿದ್ದಾನೆ ಎಂದು ಸೈಬರ್ನ್ಯೂಸ್ ವೆಬ್ಸೈಟ್ ವರದಿ ಮಾಡಿತ್ತು. ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ವಾಟ್ಸಾಪ್, ಸೈಬರ್ನ್ಯೂಸ್ ವರದಿಯಲ್ಲಿ ತಿಳಿಸಿರುವಂತೆ ತನ್ನ ಬಳಕೆದಾರರ ದತ್ತಾಂಶ ಎಲ್ಲಿಯೂ ಸೋರಿಕೆಯಾಗಿಲ್ಲ ಎಂದು ತಿಳಿಸಿದೆ.
ಸೈಬರ್ನ್ಯೂಸ್ ವರದಿಯನ್ನು ತಳ್ಳಿಹಾಕಿರುವ ವಾಟ್ಸಾಪ್ ಸಂಸ್ಥೆ, ವಾಟ್ಸಾಪ್ ಆ್ಯಪ್ ನಿಂದಲೇ ಇಮೇಲ್ ಐಡಿ, ಫೋನ್ ನಂಬರ್ ಮತ್ತು ವಿವಿಧ ವೆಬ್ಸೈಟ್ಗಳ ಮೂಲಕ ಡೇಟಾ ತೆಗೆದುಕೊಳ್ಳಲಾಗಿದೆ ಎಂಬುದಕ್ಕೆ ಸೈಬರ್ನ್ಯೂಸ್ ಬಳಿ ಯಾವುದೇ ಪುರಾವೆಗಳಿಲ್ಲ.
whatsapp-data-user-data-leak-news-fake-whatsapp