whatsapp message recovery; ಡಿಲಿಟ್ ಮಾಡಿದ ಮೆಸೆಜ್ ಹಿಂಪಡೆಯಲು ಆಪ್ಶನ್ ನೀಡಿದ WhatsApp
WhatsApp ಪ್ರಪಂಚದಾದ್ಯಂತ ಲಕ್ಷಾಂತರ ಜನರು ಸಂವಹನಕ್ಕಾಗಿ ಬಳಸುವ ಅಪ್ಲಿಕೇಶನ್ ಆಗಿದೆ. ಈ ಮೆಸೇಜಿಂಗ್ ಆಪ್ ಕಾಲಕಾಲಕ್ಕೆ ಹೊಸ ಫೀಚರ್ ಗಳನ್ನು ಅಪ್ ಡೇಟ್ ಮಾಡುವ ಮೂಲಕ ವಾಟ್ಸಾಪ್ ಬಳಕೆದಾರರಿಗೆ ಉತ್ತಮ ಅನುಭವ ನೀಡಲು ಪ್ರಯತ್ನಿಸುತ್ತಿದೆ. ಇತ್ತೀಚೆಗಷ್ಟೇ ವಾಟ್ಸಾಪ್ ಮತ್ತೊಂದು ಮಹತ್ವದ ಅಪ್ಡೇಟ್ ನೀಡಲು ಮುಂದಾಗಿದೆ.
ನಾವು ಆಕಸ್ಮಿಕವಾಗಿ WhatsApp ನಲ್ಲಿ ಮೆಸೆಜ್ ಡಿಲೀಟ್ ಮಾಡಿದರೆ ಅದನ್ನ ರಿಕವರಿ ಅಥವಾ ಮರು ಪಡೆಯಲು ಅವಕಾಶಗಳಿಲ್ಲ. ಅಳಿಸಿದ ಸಂದೇಶಗಳನ್ನು (whatsapp message delete recovery) ಮರುಪಡೆಯುವ ಆಯ್ಕೆಯನ್ನು ಶೀಘ್ರದಲ್ಲೇ ತರುವುದಾಗಿ WhatsApp ಆಶಿಸುತ್ತಿದೆ. ವಾಟ್ಸಾಪ್ ಆಂಡ್ರಾಯ್ಡ್ ಬೀಟಾ ಅಪ್‌ಡೇಟ್‌ನಲ್ಲಿ ಈ ಫೀಚರ್ ಕಂಡುಬಂದಿದ್ದ, ನ್ನೂ ಪರೀಕ್ಷಾ ಹಂತದಲ್ಲಿದೆ.
Wabetainfo ಪ್ರಕಾರ.. ಅಳಿಸಿದ ಸಂದೇಶಗಳನ್ನು ಹಿಂಪಡೆಯಲು WhatsApp Undo ಬಟನ್ ಅನ್ನು ಬಳಕೆದಾರರಿಗೆ ಲಭ್ಯವಾಗುವಂತೆ ಮಾಡುತ್ತದೆ ಎಂದು ವರದಿಯಾಗಿದೆ. ಈ ವೈಶಿಷ್ಟ್ಯವು ಪ್ರಸ್ತುತ ಬೀಟಾ ಪರೀಕ್ಷಕರಿಗೆ ಮಾತ್ರ ಲಭ್ಯವಿದೆ. ಈ ವೈಶಿಷ್ಟ್ಯವು ಮುಂದಿನ ದಿನಗಳಲ್ಲಿ ಎಲ್ಲಾ WhatsApp ಬಳಕೆದಾರರಿಗೆ ಲಭ್ಯವಾಗಲಿದೆ.








