ವಾಟ್ಸಾಪ್ ನ್ಯೂ ಫೀಚರ್ – 32 ಜನರಿಗೆ ಒಂದೇ ಭಾರಿ ಕಾನ್ಪರೆನ್ಸ್ ಕಾಲ್ ಅವಕಾಶ
32 ಜನರಿಗೆ ಒಂದೇ ಬಾರಿಗೆ ಗ್ರೂಪ್ ಕಾಲ್ ( ಕಾನ್ಪರೆನ್ಸ್ ಕಾಲ್ ) ಮಾಡುವುದು ಮತ್ತು 2GB (ಗಿಗಾಬೈಟ್ಗಳು) ಫೈಲ್ಗಳನ್ನು ಒಂದೇ ಬಾರಿಗೆ ಶೇರ್ ಮಾಡುವುದು ಸೇರಿದಂತೆ ಹಲವಾರು ಹೊಸ ಫೀಚರ್ ಗಳನ್ನ WhatsApp ನಲ್ಲಿ ಸೇರಿಸುವುದಾಗಿ ಕಂಪನಿಯು ಗುರುವಾರ ಪ್ರಕಟಿಸಿದೆ.
ಪ್ರಸ್ತುತ ವಾಟ್ಸಾಪ್ನಲ್ಲಿ 8 ಜನರು ಮಾತ್ರ ಗುಂಪು ಕರೆ ಮಾಡಬಹುದು. 1 GB ಗಿಂತ ಚಿಕ್ಕದಾದ ಫೈಲ್ಗಳನ್ನು ಮಾತ್ರ ರವಾನಿಸಬಹುದು.
WhatsApp ಗ್ರೂಪ್ನ ಅಡ್ಮಿನ್ ಯಾವುದೇ ಸಮಯದಲ್ಲಿ ಸಂದೇಶವನ್ನು ಅಳಿಸಬಹುದು. ಅಳಿಸಿದ ಸಂಭಾಷಣೆಗಳನ್ನು ಗುಂಪಿನ ಸದಸ್ಯರಿಗೆ ಕಾಣಿಸದಂತೆ ಮಡುವ ಹೊಸ ವೈಶಿಷ್ಟ್ಯವನ್ನು ಅಳವಡಿಸಲಾಗುವುದು ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.
“ಕಂಪನಿಯು iOS ಆಪರೇಟಿಂಗ್ ಸಿಸ್ಟಮ್ ಹೊಂದಿರುವವರಿಗಾಗಿ WhatsApp ಬೀಟಾದಲ್ಲಿ ಕೆಲವು ಜನರಿಗೆ ಹೊಸ ಡ್ರಾಯಿಂಗ್ ಟೂಲ್ಸ್ ಗಳನ್ನ ಬಿಡುಗಡೆ ಮಾಡುತ್ತಿದೆ. ಎರಡು ಹೊಸ ಪೆನ್ಸಿಲ್ಗಳು ಮತ್ತು ಬ್ಲರ್ ಟೂಲ್ ಗಳನ್ನ ನೀಡಿದೆ.








