WhatsApp ಹೊಸ ಅಪ್ಡೇಟ್ – ಚಾಟ್ ನಲ್ಲಿ ಲಭ್ಯವಿದೆ ರಿಯಾಕ್ಷನ್ ಎಮೋಜಿ ಫೀಚರ್
WhatsApp ಹೊಸದಾಗಿ ರಿಯಾಕ್ಷನ್ ಫೀಚರ್ ಅನ್ನ ಹೊರತಂದಿದೆ. ಈ ಫೀಚರ್ ಈಗಾಗಲೇ ಇನ್ಸ್ಟಾ ಮತ್ತು ಮೆಸೆಂಜರ್ ಚಾಟಿಂಗ್ ನಲ್ಲಿ ಲಭ್ಯವಿತ್ತು ಅದನ್ನ ವಾಟ್ಸಪ್ ಗೂ ಮುಂದುವರೆಸುತ್ತಿದೆ ಮೆಟಾ. ವಾಟ್ಸಾಪ್ ನ ಮೂಲ ಕಂಪನಿ ಮೆಟಾದ ಸಿಇಒ ಮಾರ್ಕ್ ಜುಕರ್‌ಬರ್ಗ್ ತಮ್ಮ ಫೇಸ್‌ಬುಕ್ ಪುಟದಿಂದ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಮೇ 5, 2022 ರಿಂದ WhatsApp ರಿಯಾಕ್ಷನ್ ಪೀಚರ್ ನ್ನ ಪ್ರಾರಂಭಿಸಲಾಗಿದೆ ಎಂದು ಜುಕರ್‌ಬರ್ಗ್ ಹೇಳಿದ್ದಾರೆ. ಆರಂಭದಲ್ಲಿ 6 ಎಮೋಜಿಗಳನ್ನು ವಾಟ್ಸಾಪ್ ಹೊರತಂದಿದೆ. ಅವುಗಳಲ್ಲಿ ಥಂಬ್ಸ್-ಅಪ್, ಹೃದಯ, ನಗು, ಆಶ್ಚರ್ಯ, ದುಃಖ ಮತ್ತು ಧನ್ಯವಾದಗಳು ಎನ್ನುವ ಎಮೋಜಿಗಳನ್ನ ಸೇರಿಸಲಾಗಿದೆ.
WhatsApp ನ ಪ್ರತಿಕ್ರಿಯೆ ಫೀಚರ್ಸ್ ನ ಸಹಾಯದಿಂದ ಬರವಣಿಗೆಯ ಅವಶ್ಯವಿಲ್ಲದೆಯೇ ಎಮೋಜಿಯ ಸಹಾಯದಿಂದ ನಮ್ಮ ಭಾವನೆಗಳನ್ನ ಅಭಿವ್ಯಕ್ತಗೊಳಿಸಬಹುದು. ಮೊದಲೇ ಹೇಳಿದಂತೆ ಈ ಫೀಚರ್ ಈಗಾಗಲೇ ಫೇಸ್‌ಬುಕ್‌ನಲ್ಲಿ ಅಸ್ತಿತ್ವದಲ್ಲಿದೆ. ನಿನ್ನೆಯಿಂದ ವಾಟ್ಸಾಪ್‌ನಲ್ಲಿಯೂ ಎಮೋಜಿಯೊಂದಿಗೆ ಉತ್ತರಿಸುವ ಫೀಚರ್ಸ್ ಲಭ್ಯವಿದೆ.
ಎಮೋಜಿಯ ಅರ್ಥ
ಥಮ್ಸ್ ಅಪ್ – ನಿಮ್ಮ ಮುಂದೆ ಪ್ರಸ್ತಾಪಿಸಿದ ವಿಷಯಗಳನ್ನು ಒಪ್ಪಿಕೊಂಡಿದ್ದೀರ ಎಂದು.
ಹೃದಯ – ಪ್ರೀತಿ ಮತ್ತು ಪ್ರಣಯವನ್ನು ವ್ಯಕ್ತಪಡಿಸಲು ಇದನ್ನು ಬಳಸಬಹುದು.
ನಗು – ನಗುವನ್ನು ವ್ಯಕ್ತಪಡಿಸಲು ನೀವು ಈ ಎಮೋಜಿಯನ್ನು ಬಳಸಬಹುದು.
ಆಶ್ಚರ್ಯ- ಇದರ ಮೂಲಕ ನೀವು ಆಶ್ಚರ್ಯ, ಉತ್ಸಾಹದಂತಹ ಭಾವನೆಯನ್ನು ವ್ಯಕ್ತಪಡಿಸಬಹುದು.
ದುಃಖ – ನಿರಾಶೆ ಅಥವಾ ಯಾವುದೇ ರೀತಿಯ ನಕಾರಾತ್ಮಕ ಅಭಿವ್ಯಕ್ತಿಯನ್ನು ತೋರಿಸಲು ಬಳಸಬಹುದು.
ಧನ್ಯವಾದಗಳು- ಇದರ ಮೂಲಕ ನೀವು ಯಾರಿಗಾದರೂ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಳಸಬಹುದು.
ಎಮೋಜಿ ಬಳಸುವ ವಿಧಾನ
ಇದಕ್ಕೂ ಮೊದಲು WhatsApp ಅಪ್ಡೇಟ್ ಮಾಡಿ. ಆಂಡ್ರಾಯ್ಡ್ ಬಳಕೆದಾರರು Google Play Store ನಿಂದ WhatsApp ಮತ್ತು iOS ಬಳಕೆದಾರರು Apple App Store ನಿಂದ ನವೀಕರಿಸಬಹುದು.
ನಂತರ ನಿಮಗೆ ಬಂದಿರುವ ವಾಟ್ಸಾಪ್ ಸಂದೇಶಗಳನ್ನ ಓಪನ್ ಮಾಡಿ, ನಂತರ ಆ ಚಾಟ್ ಮೇಲೆ ಒತ್ತಿ ಹಿಡಿದುಕೊಳ್ಳಿ, ಇದರ ನಂತರ ಪಾಪ್ – ಆಪ್ ಸಂದೇಶವೊಂದು ಕಾಣಿಸುತ್ತದೆ. ಇದರಲ್ಲಿ ಹಲವು ಎಮೋಜಿಗಳನ್ನ ನೀವು ಕಾಣಬಹುದು. ನೀವು ಪ್ರತ್ಯುತ್ತರಿಸಲು ಬಯಸುವ ಎಮೋಜಿಯನ್ನು ಆಯ್ಕೆಮಾಡಿ. ಇವುಗಳಲ್ಲಿ ಒಂದನ್ನು ಆಯ್ಕೆ ಮಾಡಬೇಕು. ಎಮೋಜಿ ಸಂದೇಶದ ಕೆಳಭಾಗದಲ್ಲಿ ಕಾಣಿಸುತ್ತದೆ.