Whatsapp : 32 ಜನರ ಜೊತೆಗೆ ಒಟ್ಟಿಗೆ ವಿಡಿಯೋ ಕರೆ , ವಾಯ್ಸ್ ಕಾಲ್ ಫೀಚರ್..!!
WhatsApp, ವ್ಯಾಪಕವಾಗಿ-ಜನಪ್ರಿಯತೆ ಗಳಿಸಿರುವ ಮೆಸೇಜಿಂಗ್ ಆಪ್.. ಮೆಟಾ ಆಗಾಗ ವಾಟ್ಸಾಪ್ ಬಳಕೆದಾರರಿಗೆ ಉತ್ತಮ ಫೀಚರ್ ಗಳನ್ನ ಪರಿಚಯಿಸುತ್ತಲೇ ಇರುತ್ತದೆ..
ವಾಟ್ಸಾಪ್ ಮೂಲಕ ವಿಡಿಯೋ ಕರೆ ಕೂಡ ಮಾಡಬಹುದು.. ವಾಯ್ಸ್ ಕಾಲ್ ಸಹ ಮಾಡಬಹುದು..
ಇತ್ತೀಚೆಗೆ ಕರೆಯ ವಿಭಾಗದಲ್ಲಿ ಮತ್ತೊಂದು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿದೆ.
ಬಳಕೆದಾರರು ಈಗ ತಮ್ಮ ಮೊಬೈಲ್ ಸಾಧನಗಳಲ್ಲಿ 32 ಜನರೊಂದಿಗೆ ಒಟ್ಟಿಗೆ ವೀಡಿಯೊ ಅಥವಾ ಧ್ವನಿ ಕರೆಯನ್ನು ಪ್ರಾರಂಭಿಸಬಹುದು.. ಇದಂತೂ ವಾಟ್ಸಾಪ್ ಬಳಕೆದಾರರಿಗೆ ಒಂದೊಳ್ಳೆ ಫೀಚರ್ ಆಗಿದೆ..
ಈ ಮೂಲಕ ಬಳಕೆದಾರರು ನೀವು ಕೊನೆಯ ಕ್ಷಣದಲ್ಲಿ ಕರೆ ಮಾಡುತ್ತಿರಲಿ ಅಥವಾ ಮುಂದೆ ಯೋಜಿಸುತ್ತಿರಲಿ, ಕರೆ ಲಿಂಕ್ ಅನ್ನು ಹಂಚಿಕೊಳ್ಳುವ ಮೂಲಕ ನೀವು ಸುಲಭವಾಗಿ ಜನರನ್ನು ಗುಂಪು ಕರೆಗೆ ಆಹ್ವಾನಿಸಬಹುದು..
Whatsapp news features , saakshatv