WhatsApp : ಇಂಟರ್ ನೆಟ್ ಬ್ಯಾನ್ ಆಗಿದ್ದಾಗಲೂ ಕಾರ್ಯ ನಿರ್ವಹಿಸಲಿದೆ ವಾಟ್ಸಪ್…..
ಸಾಮಾನ್ಯವಾಗಿ ಪ್ರತಿಯೊಬ್ಬರು ಬಳಸುವ ಮೆಸೆಜಿಂಗ್ ಆಪ್ ಗಳಲ್ಲಿ whatsaap ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಇದೀಗ ವಾಟ್ಸಪ್ ವಿಶೇಷ ಫೀಚರ್ ಒಂದನ್ನ ಬಿಡುಗಡೆ ಮಾಡುತ್ತಿದೆ. ಕೆಲವು ಪ್ರದೇಶಗಳಲ್ಲಿ ಇಂಟರ್ ನೆಟ್ ಸೇವೆಗಳನ್ನ ನಿಷೇಧಿಸಿದ್ದರೂ ಕೂಡ ವಾಟ್ಸಪ್ ಮೂಲಕ ಮೆಸೆಜ್ ಕಳುಹಿಸಬಹುದು. ವಾಟ್ಸಪ್ ಕಾರ್ಯ ನಿರ್ವಹಿಸಲು ಇಂಟರ್ನೆಟ್ ಕೊರತೆ ಇನ್ನು ಮುಂದೆ ಅಡ್ಡಿಯಾಗುವುದಿಲ್ಲ.
ನಿಮ್ಮ ಸ್ಥಳದಲ್ಲಿ WhatsApp ಸೇವೆಗಳನ್ನ ನಿಷೇಧಿಸಿದ್ದರೂ ಅಥವಾ ನಿರ್ಬಂಧಿಸಿದ್ದರೂ ಸಹ ನೀವು whatsaap ಯೂಸ್ ಮಾಡಬಹುದು. WhatsApp ಪ್ರಾಕ್ಸಿ ಸರ್ವರ್ಗಳನ್ನು ಪರಿಚಯಿಸಿದೆ. WhatsApp ಬಳಕೆದಾರರು ಈ ಸರ್ವರ್ ಅನ್ನು ಬಳಸಿಕೊಂಡು ಅಪ್ಲಿಕೇಶನ್ ಕಾರ್ಯ ನಿರ್ವಹಿಸುವಂತೆ ಮಾಡಬಹುದು. ಇಂಟರ್ನೆಟ್ ಸ್ಥಗಿತಗೊಳ್ಳುವ ದೇಶಗಳು ಮತ್ತು ನಗರಗಳಲ್ಲಿ ಹೊಸ ಸೇವೆಗಳನ್ನ ಪ್ರತ್ಯೇಕವಾಗಿ ಪ್ರವೇಶಿಸಬಹುದು.
ಈ ವೈಶಿಷ್ಟ್ಯವು ಪ್ರಪಂಚದಾದ್ಯಂತದ ಬಳಕೆದಾರರಿಗಾಗಿ ಇದ್ದರೂ, ಇದನ್ನು ಪ್ರಾಥಮಿಕವಾಗಿ ಇರಾನ್ನ ಜನರಿಗೆ ಪ್ರಾರಂಭಿಸಲಾಗಿದೆ, ಅಲ್ಲಿನ ಇಸ್ಲಾಮಿಕ್ ರಿಪಬ್ಲಿಕ್ ಕಳೆದ ಸೆಪ್ಟೆಂಬರ್ನಿಂದ ನಡೆಯುತ್ತಿರುವ ಹಿಜಾಬ್ ವಿರೋಧಿ ಪ್ರತಿಭಟನೆಗಳನ್ನು ಹತ್ತಿಕ್ಕುವ ಕ್ರಮಗಳ ಭಾಗವಾಗಿ WhatsApp ಮತ್ತು Instagram ಅನ್ನು ನಿಷೇಧಿಸಿದೆ.
ಹಾಗಾಗಿ ಇರಾನ್ ಮತ್ತು ಇತರ ಪ್ರದೇಶಗಳಲ್ಲಿ ಲಕ್ಷಾಂತರ ಬಳಕೆದಾರರು ತಮ್ಮ ಸೇವೆಗಳನ್ನು ಮುಕ್ತವಾಗಿ ಬಳಸಲು ವಾಟ್ಸಾಪ್ ಸಿಇಒ ವಿಲ್ ಕ್ಯಾತ್ಕಾರ್ಟ್ ವಿಶಿಷ್ಟ ಪೀಚರ್ಸ್ ಅನ್ನ ಪರಿಚಯಿಸಿದ್ದಾರೆ. WhatsApp ಬಳಕೆದಾರರಿಗೆ ಮುಕ್ತವಾಗಿ ಸಂವಹನ ನಡೆಸಲು ಸ್ವಯಂಸೇವಕರು ಮತ್ತು ಸಂಸ್ಥೆಗಳು ಸ್ಥಾಪಿಸಿದ ಸರ್ವರ್ಗಳ ಮೂಲಕ ಪ್ರಾಕ್ಸಿ ಸರ್ವರ್ ಯಾರನ್ನಾದರೂ ಸಂಪರ್ಕಿಸಬಹುದು ಎಂದು ಕ್ಯಾತ್ಕಾರ್ಟ್ ಹೇಳಿದ.
ಇದಕ್ಕಾಗಿ, ಸರ್ವರ್ ನ IP ವಿಳಾಸವನ್ನು ಸೂಚಿಸುವ ಡೊಮೇನ್ (ಅಥವಾ ಸಬ್ಡೊಮೈನ್) ಜೊತೆಗೆ ಈ ಯಾವುದೇ ಪೋರ್ಟ್ಗಳನ್ನ ಹೊಂದಿರುವ ಸರ್ವರ್ಗಳು – 80, 443 ಅಥವಾ 5222 – ಅಗತ್ಯವಿದೆ ಎಂದು ಹೇಳಿದ್ದಾರೆ.
WhatsApp: WhatsApp will work even when the internet is banned.