ಬಿಳಿ ಬಣ್ಣದ ಬೆಕ್ಕು ಹಳದಿ ಬಣ್ಣದ ಪಿಕಾಚು ಆದ ಕಥೆ
ಬ್ಯಾಂಕಾಕ್, ಅಗಸ್ಟ್26: ಭಾರತೀಯ ಮನೆಗಳಲ್ಲಿ ಶತಮಾನಗಳಿಂದ ಅರಿಶಿನವನ್ನು ಔಷಧಿಗಾಗಿ ಬಳಸಲಾಗುತ್ತಿದ್ದರೆ, ಅರಿಶಿನ ಕಲೆಗಳನ್ನು ತೆಗೆದುಹಾಕುವುದು ಕಷ್ಟಕರವಾದ ವಿಷಯವಾಗಿದೆ. ಥೈಲ್ಯಾಂಡ್ ನ ಮಹಿಳೆಯೊಬ್ಬರು ಶಿಲೀಂಧ್ರಗಳ ಸೋಂಕಿಗೆ ಚಿಕಿತ್ಸೆ ನೀಡಲು ಅರಿಶಿನವನ್ನು ಬಳಸಿದ ನಂತರ ಅವಳ ಬಿಳಿ ಬೆಕ್ಕು ಹಳದಿ ಬಣ್ಣಕ್ಕೆ ತಿರುಗಿದೆ.
ಫೇಸ್‌ಬುಕ್ ನಲ್ಲಿ ಥೈಲ್ಯಾಂಡ್ ಮಹಿಳೆ ತನ್ನ ಬಿಳಿ ಬೆಕ್ಕು ಹಳದಿಯಾದ ಅನುಭವವನ್ನು ಹಂಚಿಕೊಂಡಿದ್ದು, ಅದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದೀಗ ಹಳದಿ ಬಣ್ಣದ ಬೆಕ್ಕಿನ ಫೋಟೋಗಳು ಸಖತ್ ವೈರಲ್ ಆಗಿದೆ. ಕೆಲವೇ ದಿನಗಳಲ್ಲಿ ಹಳದಿ ಬೆಕ್ಕು ಸಾಮಾಜಿಕ ಮಾಧ್ಯಮದ ತಾರೆಯಾಗಿ ಮಾರ್ಪಟ್ಟಿದ್ದು, ಹಲವಾರು ಮಂದಿ ಹಳದಿ ಬೆಕ್ಕನ್ನು ಪೊಕ್ಮೊನ್‌ನ ಕಾಲ್ಪನಿಕ ಜೀವಿ ಪಿಕಾಚುಗೆ ಹೋಲಿಸಿದ್ದಾರೆ.
ಶಿಲೀಂಧ್ರ ಸೋಂಕಿನಿಂದ ಬಳಲುತ್ತಿದ್ದ ತನ್ನ ಬಿಳಿ ಬೆಕ್ಕಿಗೆ ಅರಿಶಿನವನ್ನು ಹಚ್ಚುವಾಗ ಥೈಲ್ಯಾಂಡ್ ಮಹಿಳೆ ಆಕಸ್ಮಿಕವಾಗಿ ಅದನ್ನು ತನ್ನ ಬೆಕ್ಕಿನ ಸಂಪೂರ್ಣ ದೇಹದ ಮೇಲೆ ಹಚ್ಚಿದ್ದಾಳೆ. ಅದು ಬಿಳಿ ಬಣ್ಣದ ಬೆಕ್ಕನ್ನು ಹಳದಿ ಬಣ್ಣಕ್ಕೆ ತಿರುಗಿಸಿದ್ದು, ಪೋಕ್ಮನ್ ನ ಪಿಕಾಚು ಆಗಿ ಮಾರ್ಪಟ್ಟಿದೆ.