ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸಲು ಇನ್ನು ಎರಡೇ ಎರಡೂ ದಿನ ಬಾಕಿಯಿದೆ. ವಿಶ್ವದ ದೊಡ್ಡಣ್ಣನನ್ನು ಸ್ವಾಗತಿಸಲು ಭಾರತ ಸಜ್ಜಾಗಿದ್ದು, ಇಷ್ಟು ದಿನ ಟ್ರಂಪ್ ತಮ್ಮ ಪತ್ನಿ ಮೆಲಾನಿಯಾ ಜೊತೆ ಆಗಮಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದ್ರೆ ಇತ್ತೀಚಿಗೆ ಬಂದ ಮಾಹಿತಿ ಪ್ರಕಾರ ಟ್ರಂಪ್ ತಮ್ಮ ಸಹ ಕುಟುಂಬ, ಪರಿವಾರದೊಂದಿಗೆ ಭಾರತಕ್ಕೆ ಆಗಮಿಸಲಿದ್ದಾರಂತೆ. ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ಮತ್ತು ಅಳಿಯ ಜಾರೆದ್ ಕುಶ್ನರ್ ಭಾರತಕ್ಕೆ ಬರಲಿದ್ದಾರೆ.

ಇವಾಂಕಾ ಹಾಗೂ ಕುಶ್ನರ್ ತಾಂತ್ರಿಕವಾಗಿ ಅಮೆರಿಕಾ ಸರ್ಕಾರದ ಭಾಗವಾಗಿದ್ದಾರೆ. ಟ್ರಂಪ್ ನ ಹಿರಿಯ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ . ಕುಶ್ನರ್ ಈ ಹಿಂದೆ 2018ರಲ್ಲಿ ಅವರ ಹಾರ್ವರ್ಡ್ ನಲ್ಲಿ ತಮ್ಮ ಸ್ನೇಹಿತರಾಗಿದ್ದ ನಿತಿನ್ ಸೈಗಲ್ ಅವರ ವಿವಾಹದ ನಿಮಿತ್ತ ಭಾರತಕ್ಕೆ ಭೇಟಿ ನೀಡಿದ್ರು. ಇನ್ನೂ ಇವಾಂಕಾ ಟ್ರಂಪ್ 2017ರಲ್ಲಿ ಹೈದ್ರಾಬಾದ್ ನಲ್ಲಿ ನಡೆದ ಗ್ಲೋಬಲ್ ಇಂಟರ್ ಪ್ರೀನಿಯರ್ ಶಿಫ್ ಸಮ್ಮಿತ್ ನಲ್ಲಿ ಭಾಗವಹಿಸಿದ್ರು. ಟ್ರಂಪ್ ಭಾರತ ಭೇಟಿಯ ವೇಳೆ ಮೆಲಾನಿಯಾ ಟ್ರಂಪ್, ಇವಾಂಕ್ ಟ್ರಂಪ್, ಜಾರೆದ್ ಕುಶ್ನರ್, ವಾಣಿಜ್ಯ ಕಾರ್ಯದರ್ಶಿ ವಿಲ್ಬರ್ ರೋಸ್, ಇಂಧನ ಕಾರ್ಯದರ್ಶಿ ಡಾನ್ ಬ್ರುಲಿಯಟ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಓ ಬ್ರೈನ್ ಅವರು ಕೂಡ ಬರಲಿದ್ದಾರೆ.








