Toothbrush | ಟೂತ್ ಬ್ರಷ್ ತಯಾರಾಗಿದ್ದು ಹೇಗೆ ಗೊತ್ತಾ..?
ಬೀಜ ಮೊದಲಾ.. ಮರ ಮೊದಲಾ..? ಕೋಳಿ ಮೊದಲಾ..? ಮೊಟ್ಟೆ ಮೊದಲಾ..? ಎಂಬ ಪ್ರಶ್ನೆಗಳು ಆಗಾಗ ತಲೆಗೆ ಬಂದು ಹೋಗುತ್ತಲೇ ಇರುತ್ತವೆ. ಅದೇ ರೀತಿ ನಾವು ಡೈಲಿ ಹಲ್ಲುಜ್ಜಲು ಬಳಸುವ ಟೂತ್ ಬ್ರಷ್ ಬಂದಿದ್ದೇಗೆ…? ಇದನ್ನು ಮೊದಲು ಕಂಡು ಹಿಡಿದವರು ಯಾರು, ಅದು ಹೇಗಿತ್ತು..? ಮುಂದೆ ಓದಿ..
ನಮಗೆಲ್ಲರಿಗೂ ಗೊತ್ತಿರುವಂತೆ ನಮ್ಮ ಪೂರ್ವಜರು ಬೇವಿನ ಕಡ್ಡಿಯಿಂದ ಹಲ್ಲುಜ್ಜುತ್ತಿದ್ದರು ಎಂಬುದು ಗೊತ್ತು. ಈಗಲೂ ಕೆಲವು ಪ್ರದೇಶಗಳಲ್ಲಿ ಹಲ್ಲುಜ್ಜಲು ಬೇವಿನ ಕಡ್ಡಿಗಳನ್ನೇ ಬಳಸಲಾಗುತ್ತದೆ! ಆದ್ರೆ ಟೂತ್ ಬ್ರಷ್ ಬಳಕೆ ಕ್ರಿ.ಪೂ 3000 ಹಿಂದಿನದ್ದು ಎಂದು ಹೇಳಲಾಗುತ್ತದೆ ! ಪ್ರಸ್ತುತ ಬಳಕೆಯಲ್ಲಿರುವ ಬ್ರಷ್ ಅನ್ನು ಬಳಸಿದ ಮೊದಲ ದೇಶ ಚೀನಾ. 600 ವರ್ಷಗಳ ಹಿಂದೆ ನಮ್ಮ ಜಗತ್ತಿಗೆ ಬ್ರಷ್‌ಗಳನ್ನು ಪರಿಚಯಿಸಿದ ದೇಶ ಚೀನಾ!!!
ಜೂನ್ 26, 1498 ರಂದು, ಮೊದಲ ಬಾರಿಗೆ ಚೀನೀ ರಾಜ ಹಲ್ಲುಜ್ಜುವ ಬ್ರಷ್‌ಗೆ ಪೇಟೆಂಟ್ ಪಡೆದರು. ವಿಶ್ವದ ಮೊದಲ ಟೂತ್ ಬ್ರಷ್ ಅನ್ನು ಹಂದಿ ಕೂದಲಿನಿಂದ ತಯಾರಿಸಲಾಗಿದೆಯಂತೆ. ಈ ಟೂತ್ ಬ್ರಷ್‌ನಲ್ಲಿ ಬ್ರಸಲ್ಸ್ ತುಂಬಾ ಗಟ್ಟಿಯಾಗಿದ್ದವಂತೆ. ಇವುಗಳನ್ನು ಹಂದಿಯ ಕತ್ತಿನ ಹಿಂಭಾಗದ ದಪ್ಪ ಕೂದಲಿನಿಂದ ಮಾಡಲ್ಪಟ್ಟಿದೆ. ಈ ಕೂದಲನ್ನು ಬಿದಿರಿನ ಕೋಲಿಗೆ ಕಟ್ಟಿ ಹಲ್ಲುಜ್ಜುವ ಬ್ರಷ್‌ಗಳನ್ನು ತಯಾರಿಸಲಾಗುತ್ತಿದ್ದಂತೆ. 20 ನೇ ಶತಮಾನದವರೆಗೆ, ಈ ಬ್ರಷ್‌ಗಳನ್ನು ಯುರೋಪ್ ಮತ್ತು ಇಂಗ್ಲೆಂಡ್ ದೇಶಗಳು, ಚೀನಾದಿಂದ ಆಮದು ಮಾಡಿಕೊಳ್ಳುತ್ತಿದ್ದವು.
1780 ರಲ್ಲಿ ಇಂಗ್ಲೆಂಡಿನ ಖೈದಿಯಾದ ವಿಲಿಯಂ ಎಡಿಸ್ ಕಂಡುಹಿಡಿಯುವವರೆಗೂ ಈ ಬ್ರಷ್ ಗಳನ್ನೇ ಬಳಸಲಾಗುತ್ತಿತ್ತು. ಆ ಸಮಯದಲ್ಲಿ, ವಿಲಿಯಂ ಸಹ ಹಂದಿ ಕೂದಲಿನೊಂದಿಗೆ ಹಲ್ಲುಜ್ಜುವ ಬ್ರಷ್ ಅನ್ನು ತಯಾರಿಸುತ್ತಿದ್ದರಂತೆ. ಜೈಲಿನಿಂದ ಬಿಡುಗಡೆಯಾದ ನಂತರ ‘ವಿಸ್ಡಮ್ ಟೂತ್ ಬ್ರಷ್’ ಎಂಬ ಕಂಪನಿಯನ್ನು ಪ್ರಾರಂಭಿಸಿ, ಇಂಗ್ಲೆಂಡ್‌ನಲ್ಲಿ ಟೂತ್ ಬ್ರಷ್‌ಗಳನ್ನು ಉತ್ಪಾದಿಸಲು ಪ್ರಾರಂಭಿಸಿದ್ದ. ಪ್ರಸ್ತುತ ಈ ಕಂಪನಿಯಲ್ಲಿ ವರ್ಷಕ್ಕೆ 70 ಮಿಲಿಯನ್ ಟೂತ್ ಬ್ರಷ್‌ಗಳನ್ನು ತಯಾರಿಸುತ್ತದೆ.
1950 ರಲ್ಲಿ ಡುಪಾಂಟ್ ಡಿ ನೆಮೊರ್ಸ್ ಅನ್ನೋ ವ್ಯಕ್ತಿ, ನೈಲಾನ್ ಬ್ರಿಸ್ಟಲ್ ಟೂತ್ ಬ್ರಷ್‌ಗಳನ್ನು ಜಗತ್ತಿಗೆ ಪರಿಚಯಿಸಿದನು. ನವೆಂಬರ್ 7, 1857 ರಂದು, HN ವುಡ್ಸ್‌ವರ್ತ್ ಹಲ್ಲುಜ್ಜುವ ಬ್ರಷ್‌ಗಳನ್ನು ಪೇಟೆಂಟ್ ಮಾಡಿದ ಮೊದಲ ಅಮೇರಿಕನ್ ಆದರು.ಆ ನಂತರ, 1885 ರಲ್ಲಿ, ಯುನೈಟೆಡ್ ಸ್ಟೇಟ್ಸ್ನಲ್ಲಿ ದೊಡ್ಡ ಪ್ರಮಾಣದ ಬ್ರಷುಗಳ ಉತ್ಪಾದನೆಯು ಪ್ರಾರಂಭವಾಯಿತು.