ಕ್ರಿಕೆಟ್ ರಾಕ್ಷಸ ವಿರಾಟ್ ಕೊಹ್ಲಿ ಟೀಂ ಇಂಡಿಯಾದ ನಾಯಕನಾಗಿ ತಂಡವನ್ನು ಅದ್ಭುತವಾಗಿ ಮುನ್ನಡೆಸುತ್ತಿದ್ದಾರೆ. ಕಳೆದ ವರ್ಷ ವಿಶ್ವಕಪ್ ನ ಸೆಮಿಫೈನಲ್ ನ 40 ನಿಮಿಷಗಳ ಆಟವನ್ನು ಹೊರತು ಪಡಿಸಿದರೇ ಕೊಹ್ಲಿ ನಾಯಕತ್ವದಲ್ಲಿ ಭಾರತದ ಹುಲಿಗಳು ಎದುರಾಳಿಗಳ ಮೇಲೆ ದಂಡಯಾತ್ರೆಯನ್ನೇ ಮಾಡಿದ್ದಾರೆ. ವಿರಾಟ್ ರ ಆಕ್ರಮಣಕಾರಿ ಶೈಲಿ ಕ್ಯಾಪ್ಟನ್ಸಿ, ಎನರ್ಜಿ ತಂಡದ ಯುವ ಆಟಗಾರರಿಗೆ ಬೂಸ್ಟ್ ನೀಡುತ್ತಿದೆ.
ತಂಡದ ನಾಯಕನಾಗಿ ವಿರಾಟ್ ಹೆಬ್ಬುಲಿಯಂತೆ ಘರ್ಜಿಸುತ್ತ ಇನ್ನುಳಿದ ಆಟಗಾರರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದಾರೆ. ವಿರಾಟ್ ನಾಯಕತ್ವದಲ್ಲಿ ಇಂಡಿಯಾದ ಬ್ಲೂ ಪ್ಯಾಂಥರ್ಸ್ ರಣಾಂಗಣದಲ್ಲಿ ಎದುರಾಳಿಗಳ ಬೇಟೆ ಆಡುತ್ತಿದ್ದಾರೆ. ಕ್ರಿಕೆಟ್ ನ ಮೂರು ಮಾದರಿಗಳನ್ನು ಕೊಹ್ಲಿ ತಂಡವನ್ನು ಅತ್ಯುತ್ತಮವಾಗಿ ಮುನ್ನೆಡೆಸುತ್ತಿದ್ದಾರೆ..
ಕೊಹ್ಲಿ ಬಳಿಕ ಯಾರು..?
ಸದ್ಯ ಪರಿಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ಇನ್ನೂ ನಾಲ್ಕೈದು ವರ್ಷಗಳ ಕಾಲ ಮೈದಾನದಲ್ಲಿ ಆರ್ಭಟಿಸಬಲ್ಲರು. ಆದ್ರೆ ಅವರ ಬಳಿಕ ಆ ಸ್ಥಾನವನ್ನು ತುಂಬುವರು ಯಾರು..? ಇಲ್ಲಿ ಆಟಗಾರನಾಗಿ ವಿರಾಟ್ ಕೊಹ್ಲಿವನ್ನು ಯಾರು ಮೀರಿಸಲಾರರು. ಕೊಹ್ಲಿಯ ಆಟವೇ ಬೇರೆ ಆ ಆಟದಲ್ಲಿರುವ ಖದರ್ರೇ ಬೇರೆ.. ಆಟಗಾರನಾಗಿ ವಿರಾಟ್ ಗೆ ವಿರಾಟೇ ಸಾಟಿ, ಸರಿಸಾಟಿ.
ನಾವಿಲ್ಲಿ ಚರ್ಚಿಸುತ್ತಿರೋದು ನಾಯಕತ್ವದ ವಿಚಾರವಾಗಿ. ವಿರಾಟ್ ಬಳಿಕ ಟೀಂ ಇಂಡಿಯಾದ ಸಾರಥಿ ಆಗುವವರು ಯಾರು.. ಇದಕ್ಕೆ ಈಗಲೇ ಉತ್ತರ ಹೇಳುವುದು ಅಷ್ಟು ಸುಲಭವಲ್ಲ. ಆದ್ರೆ ಕೆಲವರ ಹೆಸರಂತು ಕೇಳಿ ಬರುತ್ತಲೇ ಇದೆ.
ರಾಕಿಂಗ್ ರಾಹುಲ್ ವರ್ಸಸ್ ಥಂಡಾ ಶ್ರೇಯಸ್
ಸದ್ಯ ಟೀಂ ಇಂಡಿಯಾದಲ್ಲಿ ಮಿಂಚು ಹರಿಸುತ್ತಿರುವ ಯುವ ಆಟಗಾರರೆಂದರೇ ಅದು ಕನ್ನಡಿಗ ರಾಹುಲ್ – ಶ್ರೇಯಸ್ ಅಯ್ಯರ್. ಇವರು ಟೀಂ ಇಂಡಿಯಾದ ಭವಿಷ್ಯ. ಸದ್ಯ ಕೊಟ್ಟಿರುವ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುತ್ತಿರುವ ಈ ಯಂಗ್ ಗನ್ಸ್, ಮುಂದೊಂದು ದಿನ ಟೀಂ ಇಂಡಿಯಾದ ಕ್ಯಾಪ್ಟನ್ ಗಳಾಗುವುದರಲ್ಲಿ ಡೌಟೇ ಇಲ್ಲ.
ಸ್ಟಾಡಿಂಗ್ ಕ್ಯಾಪ್ಟನ್ ಆಗಿ ರಾಹುಲ್ ಸಕ್ಸಸ್
ಹೌದು..! ಕನ್ನಡಿಗ ಕೆ.ಎಲ್ ರಾಹುಲ್ ಈಗಾಗಲೇ ಸ್ಟಾಡಿಂಗ್ ಕ್ಯಾಪ್ಟನ್ ಆಗಿ ತಮ್ಮ ತಾಕತ್ತನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಕಿವೀಸ್ ನೆಲದಲ್ಲಿ ರಾಹುಲ್ ಟಿ-20 ಪಂದ್ಯ ಒಂದರಲ್ಲಿ ಸ್ಟಾಡಿಂಗ್ ಕ್ಯಾಪ್ಟನ್ ಆಗಿ ವಿಕೆಟ್ ಹಿಂದೆ ನಿಂತು ಕೂಲ್ ಆಗಿ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ. ಅಂದಿನ ಪಂದ್ಯದಲ್ಲಿ ರಾಹುಲ್ ರ ನಾಯಕತ್ವ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ವಿರಾಟ್ ಬಳಿಕ ರಾಹುಲ್ ಕ್ಯಾಪ್ಟನ್..!
ವಿರಾಟ್ ಕೊಹ್ಲಿ ಬಳಿಕ ಟೀಂ ಇಂಡಿಯಾ ನಾಯಕತ್ವವನ್ನು ಕೆಎಲ್ ರಾಹುಲ್ ವಹಿಸಿಕೊಳ್ಳುವ ಅವಕಾಶವಿದೆ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ. ಫೇಸ್ ಬುಕ್ ನಲ್ಲಿ ಅಭಿಮಾನಿಗಳೊಂದಿಗೆ ಚಾಟ್ ನಡೆಸಿದ ಆಕಾಶ್ ಚೋಪ್ರಾ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಟೀಂ ಇಂಡಿಯಾ ನಾಯಕತ್ವ ಸ್ಥಾನದಿಂದ ಕೊಹ್ಲಿ ಕೆಳಗಿಳಿಯುವ ವೇಳೆಗೆ ಜವಾಬ್ದಾರಿ ವಹಿಸಿಕೊಳ್ಳಲು ರಾಹುಲ್ ಸಿದ್ಧರಾಗಿರುತ್ತಾರೆ ಎಂದಿದ್ದಾರೆ.
ಚೋಪ್ರಾ “ಕೊಹ್ಲಿ ಒಂದು ದಿನ ನಾಯಕತ್ವದ ಜವಾಬ್ದಾರಿಯನ್ನು ಮತ್ತೊಬ್ಬರಿಗೆ ನೀಡಬೇಕಾಗುತ್ತದೆ. ಆ ಸಂದರ್ಭದಲ್ಲಿ ರಾಹುಲ್ ಮೊದಲ ಸ್ಥಾನದಲ್ಲಿರುತ್ತಾರೆ. ಇದುವರೆಗೂ ಆತನ ಆಟದ ಶೈಲಿ, ವ್ಯವಹಾರದ ಶೈಲಿಯನ್ನು ಗಮನಿಸಿದ ಸಂದರ್ಭದಲ್ಲಿ ಆತ ಕ್ಯಾಪ್ಟನ್ ಆಗಿ ಅತ್ಯುತ್ತಮ ರೀತಿಯಲ್ಲಿ ತಂಡವನ್ನು ಮುನ್ನಡೆಸುವ ನಂಬಿಕೆ ಇದೆ” ಎಂದಿದ್ದಾರೆ.
ರೋಹಿತ್ ಕಥೆ ಏನು..?
ಕೊಹ್ಲಿ ನಂತ್ರ ರೋಹಿತ್ ಕ್ಯಾಪ್ಟನ್ ಆಗಬಹುದಲ್ವಾ ಎಂಬ ಪ್ರಶ್ನೆಗೆ ಸಿಂಪಲ್ ಉತ್ತರ “ವಯಸ್ಸು”
ಕೊಹ್ಲಿ, ರೋಹಿತ್ ಅವರನ್ನು ಗಮನಿಸಿದರೆ ಒಂದು ಅಂಶ ನಮಗೇ ಸ್ಪಷ್ಟವಾಗುತ್ತದೆ. ಇಬ್ಬರೂ ಒಂದೇ ವಯಸ್ಸಿನವರಾಗಿದ್ದು, ಒಂದು ಹಂತಕ್ಕೆ ಬಂದ ಬಳಿಕ ನಾಯಕರಾಗಿ ಗುರುತಿಸಿಕೊಂಡಿದ್ದರು. ಹೀಗಾಗಿ ಕೊಹ್ಲಿ ಬಳಿಕ ರೋಹಿತ್ ಕ್ಯಾಪ್ಟನ್ ಆಗುವುದು ಕಷ್ಟ ಸಾಧ್ಯ.
ಮಹೇಶ್ ಎಂ ದಂಡು.