ADVERTISEMENT
Friday, August 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಎಸ್ ಪಿಬಿಗೆ ಮೊದಲ ಅವಕಾಶ ಕೊಡಿಸಿದ್ದು ಯಾರು ಗೊತ್ತಾ..?

admin by admin
September 25, 2020
in Newsbeat, Samagra karnataka, ರಾಜ್ಯ
Share on FacebookShare on TwitterShare on WhatsappShare on Telegram

ಎಸ್ ಪಿ ಬಾಲಸುಬ್ರಹ್ಮಣ್ಯಂ ಇನ್ನಿಲ್ಲ.. ಇದು ನಂಬಲು ಅಸಾಧ್ಯವಾದ ಕಠೋರ ವಾಸ್ತವ. ಐದು ದಶಕಗಳ ಕಾಲ ಸಂಗೀತ ಸೇವೆ ಮಾಡಿ ಎಲ್ಲರ ಮನೆಮನದಲ್ಲೂ ಮೆಂಮರ್ ಆಗಿರುವ ಎಸ್ ಪಿಬಿ ಇಂದು ಇಹಲೋಕ ತ್ಯಜಿಸಿದ್ದಾರೆ.

ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಡಿನ ಮೂಲಕವೇ ಎಲ್ಲರನ್ನು ಎಲ್ಲವನ್ನೂ ಗೆದ್ದಿದ್ದ ವ್ಯಕ್ತಿ, ವ್ಯಕ್ತಿತ್ವ. ತಮ್ಮ ಅಮೃತ ಕಂಠದ ಮೂಲಕ 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಗಾಯಕ. ಯಶಸ್ಸಿನ ಶಿಖರವೇರಿದ್ದರೂ ಸರಳತೆಯನ್ನು ಮೈಗೂಡಿಸಿಕೊಂಡಿದ್ದ ಸಾಹುಕಾರ.

Related posts

shivarajkumar-bail-movie-teaser-released-pavan-wadeyar-kvn-productions

ಹ್ಯಾಟ್ರಿಕ್ ಹೀರೋ ಶಿವಣ್ಣನ ‘ಬೇಲ್’ ಚಿತ್ರದ ಪವರ್‌ಫುಲ್ ಟೀಸರ್ ಔಟ್: ಪವನ್ ಒಡೆಯರ್-ಕೆವಿಎನ್ ಕಾಂಬಿನೇಷನ್‌ನಲ್ಲಿ ಸದ್ದು ಮಾಡುತ್ತಿದೆ ಖಾಕಿ ಖದರ್!

August 28, 2026
kiccha-sudeep-wishes-rocking-star-yash-for-toxic-movie

‘ರಾಕಿ ಭಾಯ್’ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರಕ್ಕೆ ಬಲ ತುಂಬಿದ ‘ಅಭಿನಯ ಚಕ್ರವರ್ತಿ’

August 28, 2026

ಮೊದಲ ಚಾನ್ಸ್ ಕೊಡಿಸಿದ್ದು ಜಾನಕಮ್ಮ

ಹೌದು..! ಆಗ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಇನ್ನೂ 17ರ ವರ್ಷ. ಕಾಲೇಜುಗಳಲ್ಲಿ ಹಲವಾರು ಸಿಂಗಿಂಗ್ ಕಾಂಪಿಟೇಶನ್ ಗಳಲ್ಲಿ ಹಾಡಿ ಬಹುಮಾನಗಳನ್ನು ಗೆಲ್ಲುತ್ತಿದ್ದರು. ಆಗ ಒಂದು ದಿನ ಜಾನಕಮ್ಮ ಒಂದು ಸ್ಪರ್ಧೆಗೆ ಬಂದಿದ್ದರು. ಈ ವೇಳೆ ಎಸ್ ಪಿಬಿ ಅವರ ಪ್ರತಿಭೆಯನ್ನು ಗುರುತಿಸಿದ್ದ ಜಾನಕಮ್ಮ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದರು. ಅಲ್ಲದೆ ನೀನು ಪ್ಲೇ ಬ್ಯಾಕ್ ಸಿಂಗರ್ ಆಗು ಎಂದು ಹೇಳಿ, ಹಲವಾರು ಪರಿಚಿತ ನಿರ್ದೇಶಕರ ಬಳಿ ಅವರನ್ನು ಕಳಿಸಿದ್ದರು. ಆದ್ರೆ ಬಾಲಸುಬ್ರಹ್ಮಣ್ಯಂ ಅವರಿಗೆ ಆಗಿನ್ನೂ ಚಿಕ್ಕ ವಯಸ್ಸಾಗಿದ್ದ ಕಾರಣ, ನಿರ್ದೇಶಕರು ಶಿಕ್ಷಣ ಮುಗಿಸಿಕೊಂಡು ಬಾ ಎಂದು ಹೇಳಿ ವಾಪಸ್ ಕಳುಹಿಸಿದ್ದರು.

ಮುಂದೆ ಶಿಕ್ಷಣ ಮುಗಿಸಿದ ಬಾಲಸುಬ್ರಹ್ಮಣ್ಯಂ ಸಂಗೀತ ಸಾಧನೆ ಮುಂದುವರಿಸಿದರು. 1966 ಆಗಸ್ಟ್ ತಿಂಗಳಿನಲ್ಲಿ ಅವರಿಗೆ ಮೊಟ್ಟ ಮೊದಲ ಬಾರಿಗೆ ಹಿನ್ನೆಲೆ ಗಾಯಕನಾಗಿ ಹಾಡಲು ಅವಕಾಶ ದೊರೆಯಿತು. ಕೊನೆಗೆ ಜಾನಕಮ್ಮನವರ ಜೊತೆಯೇ ಎಸ್ ಪಿಬಿ ನೂರಾರು ಹಾಡುಗಳನ್ನು ಹಾಡಿದರು.

ಅಂದಹಾಗೆ ಗಾಯಕಿ ಎಸ್.ಜಾನಕಮ್ಮ ಅವರೇ ಬಾಲಸುಬ್ರಹ್ಮಣ್ಯಂ ಎಂಬ ನನ್ನ ಹೆಸರನ್ನು ಬಾಲು ಎಂದು ಮಾಡಿದರು. ನಾನು ಪ್ಲೇ ಬ್ಯಾಕ್ ಸಿಂಗರ್ ಆಗಿ ಮೊದಲ ಹೆಜ್ಜೆಯಿಡಲೂ ಜಾನಕಮ್ಮ ಕಾರಣ. ಅವರಿಂದಲೇ ನಾನು ಇಂದು ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದು ಬಾಲಸುಬ್ರಹ್ಮಣ್ಯಂ ಅವರು ಅನೇಕ ಬಾರಿ ಹೇಳಿಕೊಂಡಿದ್ದಾರೆ.

Tags: singer sp balasubrahmaniam
ShareTweetSendShare
Join us on:

Related Posts

shivarajkumar-bail-movie-teaser-released-pavan-wadeyar-kvn-productions

ಹ್ಯಾಟ್ರಿಕ್ ಹೀರೋ ಶಿವಣ್ಣನ ‘ಬೇಲ್’ ಚಿತ್ರದ ಪವರ್‌ಫುಲ್ ಟೀಸರ್ ಔಟ್: ಪವನ್ ಒಡೆಯರ್-ಕೆವಿಎನ್ ಕಾಂಬಿನೇಷನ್‌ನಲ್ಲಿ ಸದ್ದು ಮಾಡುತ್ತಿದೆ ಖಾಕಿ ಖದರ್!

by admin
August 28, 2026
0

ಹ್ಯಾಟ್ರಿಕ್ ಹೀರೋ ಶಿವಣ್ಣನ ‘ಬೇಲ್’ ಚಿತ್ರದ ಪವರ್‌ಫುಲ್ ಟೀಸರ್ ಔಟ್: ಪವನ್ ಒಡೆಯರ್-ಕೆವಿಎನ್ ಕಾಂಬಿನೇಷನ್‌ನಲ್ಲಿ ಸದ್ದು ಮಾಡುತ್ತಿದೆ ಖಾಕಿ ಖದರ್! ಬೆಂಗಳೂರು: ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್...

kiccha-sudeep-wishes-rocking-star-yash-for-toxic-movie

‘ರಾಕಿ ಭಾಯ್’ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರಕ್ಕೆ ಬಲ ತುಂಬಿದ ‘ಅಭಿನಯ ಚಕ್ರವರ್ತಿ’

by admin
August 28, 2026
0

ರಾಯನ ಹೊಸ ಅವತಾರಕ್ಕೆ ಪ್ರೀತಿಯಿಂದ ವಿಶ್ ಮಾಡಿದ ಕಿಚ್ಚ ಸುದೀಪ್ ಹಿಂದಿನ ಬ್ಲಾಕ್‌ಬಸ್ಟರ್ ಯಶಸ್ಸಿನ ನಂತರ ರೆಗ್ಯುಲರ್, ಸಿದ್ಧಸೂತ್ರದ ಸಿನಿಮಾ ಮಾಡುವ ಸುಲಭ ಹಾದಿ ಹಿಡಿಯದೆ, ಭಿನ್ನವಾಗಿ...

rishab-shetty-featured-in-forbes-india-top-100-celebrities-kantara

ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪಡೆದ ಕನ್ನಡಿಗ ರಿಷಬ್ ಶೆಟ್ಟಿ: ‘ಕಾಂತಾರ’ ತಾರೆಗೆ ಜಾಗತಿಕ ಮನ್ನಣೆ

by admin
August 28, 2026
0

ಬೆಂಗಳೂರು: ಪ್ರತಿಷ್ಠಿತ 'ಫೋರ್ಬ್ಸ್ ಇಂಡಿಯಾ' ಬಿಡುಗಡೆ ಮಾಡಿರುವ ದೇಶದ ಪ್ರಮುಖ 100 ಗಣ್ಯರ (ಸೆಲೆಬ್ರಿಟಿಗಳ) ಪಟ್ಟಿಯಲ್ಲಿ ಸ್ಯಾಂಡಲ್‌ವುಡ್‌ನ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಸ್ಥಾನ ಪಡೆಯುವ...

darshan-puttannaiah-meets-dk-shivakumar-karnataka-2-digital-platform

ಕೋಡಳ್ಳಿ ಹೊಸೂರಿನಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಗುದ್ದಲಿ ಪೂಜೆ

by admin
August 28, 2026
0

ಹಲವು ಗ್ರಾಮಗಳಿಗೆ ನಿರಂತರ, ಗುಣಮಟ್ಟದ ವಿದ್ಯುತ್ ಸಂಪರ್ಕಕ್ಕೆ ಮುನ್ನುಡಿ ಮಂಡ್ಯ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೋಡಳ್ಳಿ ಹೊಸೂರಿನಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ ವಿದ್ಯುತ್ ಉಪಕೇಂದ್ರ ಸ್ಥಾಪನೆ ಕಾಮಗಾರಿಗೆ...

darshan-puttannaiah-meets-dk-shivakumar-karnataka-2-digital-platform

ದೆಹಲಿಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್‌ ಜೊತೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಹತ್ವದ ಸಭೆ

by admin
August 28, 2026
0

ದೆಹಲಿ/ಬೆಂಗಳೂರು: ಜನಸಾಮಾನ್ಯರ ಕುಂದುಕೊರತೆಗಳಿಗೆ ತಕ್ಷಣವೇ ಸ್ಪಂದಿಸಲು ಹಾಗೂ ಆಡಳಿತದಲ್ಲಿ ಸಂಪೂರ್ಣ ಪಾರದರ್ಶಕತೆ ತರಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯಿರಿಸುವಂತೆ ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಮಹತ್ವದ ಹೆಜ್ಜೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram