ಬೆಂಗಳೂರು : ಇತ್ತೀಚೆಗೆ ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆದ ವಿಚಾರ ಬಯಲಿಗೆ ಬಂದಿದ್ದವು. ಬರೋಬ್ಬರಿ 7 ಜನ ಸಾಹಿತಿಗಳಿಗೆ ಬೆದರಿಕೆ ಪತ್ರ ಬಂದಿದ್ದವು. ಸದ್ಯ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಎಲ್ಲರಿಗೂ ಓರ್ವ ವ್ಯಕ್ತಿ ಪತ್ರ ಬರೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಈ ವಿಷಯ ಸಿಸಿಬಿ ಪೊಲೀಸರ (CCB Police) ತನಿಖೆಯಿಂದ ಬಯಲಾಗಿದೆ. ಈ ಎಲ್ಲ ಪತ್ರಗಳು ಓರ್ವ ವ್ಯಕ್ತಿಯ ಕೈ ಬರಹದ್ದು ಎಂಬುವುದು ವಿಧಿ ವಿಜ್ಞಾನ ಪ್ರಯೋಗಾಲಯದ (FSL) ಪರೀಕ್ಷೆಯಿಂದ ಸಾಬೀತಾಗಿದೆ. ಅಲ್ಲದೇ, ಈ ಪತ್ರ ದಾವಣಗೆರೆ ಮೂಲದಿಂದ ಬಂದಿರುವುದು ಕೂಡ ಖಚಿತಲಾಗಿದೆ. ಈ ಪತ್ರವನ್ನು ಬೇರೆ ಬೇರೆ ಜಿಲ್ಲೆ ಹಾಗೂ ತಾಲೂಕಿಗೆ ಹೋಗಿ ಪೋಸ್ಟ್ ಮಾಡಲಾಗಿದೆ.
ಪ್ರೊ. ಕೆ. ಮರುಳಸಿದ್ದಪ್ಪ, ಪ್ರೊ. ಎಸ್.ಜಿ. ಸಿದ್ಧರಾಮಯ್ಯ, ಬಂಜಗೆರೆ ಜಯಪ್ರಕಾಶ್, ವಸುಂಧರಾ ಭೂಪತಿ, ಕುಂ.ವೀರಭದ್ರಪ್ಪ ಸೇರಿದಂತೆ 15ಕ್ಕೂ ಅಧಿಕ ಲೇಖಕರಿಗೆ ಒಂದು ವರ್ಷದಿಂದ ಬೆದರಿಕೆ ಪತ್ರಗಳು ಬಂದಿವೆ. ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.