ಕೋಳಿ ಕೂಗುವುದಕ್ಕು – ಸೂರ್ಯೋದಯಕ್ಕು ಇರುವ ಸಂಬಂಧವೇನು..? ಬೆಳಗ್ಗಿನ ಹೊತ್ತು ಕೋಳಿ ಕೂಗುವುದು ಯಾಕೆ?
ಈಗೆಲ್ಲಾ ಟೈಮ್ ಗೊತ್ತಾಗೋದಕ್ಕೆ ನಮ್ಮ ಬಳಿ , ಮೊಬೈಲ್ , ವಾಟ್ ಗಡಿಯಾರ , ಟಿವಿ , ಕಂಪ್ಯೂಟರ್ ಇಂದ ಹಿಡಿದು ಸಾಕಷ್ಟು ಉಪಕರಣಗಳಿವೆ.. ಆದ್ರೆ ತುಂಬಾ ವರ್ಷಗಳ ಹಿಂದೆ ಇವ್ಯಾವುದು ಇಲ್ಲದ ಕಾಲವಿತ್ತು.. ಆಗ ಜನರು ಸಮಯಕ್ಕಾಗಿ ಸೂರ್ಯನ ಬೆಳಕು ನೋಡಿ ಅಂದಾಜಿಸಬೇಕಾಗಿತ್ತು..
ಸೂರ್ಯನ ಚಲನವಲನ ಗಮನಿಸಿ ನಿಖರವಾಗಿ ಟೈಮ್ ಹೇಳ್ತಾಯಿದ್ರು ಆಗಿನ ಜನ.. ಹೊಲ ಗದ್ದೆಗಳಿಗೆ ಕೆಲಸ ಮಾಡಲು ಹೋದವರು ಕೂಡ ಇದೇ ರೀತಿ ಸಮಯವನ್ನ ಅಂದಾಜಿಸಿ , ಊಟಕ್ಕೆ , ವಿಶ್ರಾಂತಿಗಾಗಿ ತೆರಳುತ್ತಿದ್ದರು.
ಆದ್ರೆ ಸಮಯವನ್ನ ಅದ್ರಲ್ಲೂ ಮುಂಜಾನೆಯಾಗಿದೆ ಅಂತ ಜನರಿಗೆ ಗೊತ್ತಾಗ್ತಿದ್ದಿದ್ದು ಕೋಳಿ ಕೂಗೋದ್ರಿಮದ. ಇಂದಿಗೂ ಸಹ ಮುಂಜಾನೆ ಕೋಳಿ ಕೂಗುತ್ತವೆ.. ಕೋಳಿ ಕೂಗುವ ಶಬ್ಧ ಬೆಳ್ಳಂ ಬೆಳಗ್ಗೆ ಕೇಳಿಸುತ್ತೆ.. ಹಾಗೆ ನೋಡಿದ್ರೆ ಕೋಳಿ ಕೇವಲ ಬೆಳಿಗ್ಗೆ ಅಷ್ಟೇ ಕೂಗೋದಿಲ್ಲ. ಸುತ್ತಲೂ ನಡೆಯುವ ಕೆಲ ಆಗುಹೋಗುಗಳ ಅನುಗುಣವಾಗಿ ಕೋಳಿಗಳು ಕೂಗುತ್ತಲೇ ಇರುತ್ವೆ.
ಕೋಳಿ ಕೂಗುವುದ್ರಿಂದಲೇ ಬೆಳಗಾಯಿತು ಎಂದು ಆಗಿನ ಕಾಲದ ಜನರು ನಂಬುತ್ತಿದ್ದರು.. ಒಂದು ರೀತಿ ಕೋಳಿಗಳು ಅಲರಾಮ್ ಇದ್ದಂತೆ ಕೆಲಸ ಮಾಡ್ತಿದ್ದವು.. ಕೋಳಿ ಕೂಗಿದ್ದನ್ನ ಕೇಳಿಸಿಕೊಂಡು ಬೆಳಗಾಯಿತು ಎಂದು ಜನರು ಎದ್ದು ದೈನಂದಿನ ಕೆಲಸಗಳಲ್ಲಿ ತೊಡಗುತ್ತಿದ್ದರು.
ಆದ್ರೆ ಅಸಲಿಗೆ ಕೋಳಿ ಕೂಗೋದ್ರಿಂದ ಬೆಳಗಾಗೋದಿಲ್ಲ.. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೂ ಬೆಳ್ಳಂಬೆಳಗ್ಗೆ ಸರಿಯಾಗಿ ಅದೇ ಸಮಯಕ್ಕೆ ಕೋಳಿ ಕೂಗೋದ್ಯಾಕೆ ಅನ್ನೋ ಕುತೂಹಲಗಳು ಸಾಕಷ್ಟು ಜನರಲ್ಲಿ ಇರುತ್ತೆ.. ಅನೇಕ ಮಮದಿಯನ್ನ ಈ ಪ್ರಶ್ನೆ ಕಾಡಿರುತ್ತೆ. ಆದ್ರೆ ಇದರ ಕಾರಣ ರಹಸ್ಯವಾಗಿಯೇ ಇತ್ತು.. ಆದ್ರೆ 2013ರಲ್ಲಿ ಜಪಾನ್ ನ ನಗೋದಿಯಾದಲ್ಲಿ ಸಂಸೊಧಕರು ನಡೆಸಿದ ಅಧ್ಯಯನದಿಂದಾಗಿ ಇದರ ನಿಜವಾದ ಕಾರಣ ಗೊತ್ತಾಗಿದೆ..
ಅಸಲಿಗೆ ಮೊದಲೆಲ್ಲಾ ಕೋಳಿಗಳ ಗೂಡಿಗೆ ಬೆಳಕು ಬೀಳುವುದರಿಂದ, ಕತ್ತಲು ಆವರಿಸೋದ್ರಿಂದಾಗಿ ಅವು ಕೂಗುತ್ತವೆ ಎಂದು ಹೇಳಲಾಗಿತ್ತು.. ಆದ್ರೆ ಈ ಅಧ್ಯಯನದಿಂದ ಬೇರೆಯದ್ದೇ ವಿಚಾರ ಗೊತ್ತಾಗಿತ್ತು..
ಅಧ್ಯಯನದ ಭಾಗವಾಗಿ ಮೊದಲ 2 ವಾರಗಳ ವರೆಗೂ ಕೆಲ ಕೋಳಿಗಳನ್ನ 12 ಗಮಟೆಗಳ ಕಾಲ ಬೆಳಕು 12 ಗಂಟೆಗಳ ಕಾಲ ಕತ್ತಲೆ ಇರುವ ವಾತಾವರಣದಲ್ಲಿ ಬಿಟ್ಟು ಪರೀಕ್ಷೆ ನಡೆಸಲಾಯ್ತು.. ಬೆಳಗಾಗುವುದಕ್ಕೂ 2 ಗಂಟೆ ಮುಂಚೆಯೇ ಕೋಳಿಗಳು ಕೂಗಲು ಶುರು ಮಾಡಿದ್ದವಂತೆ. ಇದೇ ತಂಡ ಮತ್ತೊಂದು ಅಧ್ಯಯನ ನಡೆಸಿತ್ತು.. ಈ ವೇಳೆ ಕೋಳಿಗಳನ್ನ 24 ಗಂಟೆಗಳ ಕಾಲವೂ ಕತ್ತಲೆಯ ಕೋಣೆಯಲ್ಲಿ ಕೂಡಿ ಹಾಕಲಾಗಿತ್ತು. ಆಗಲೂ ಕೋಳಿಗಳು ಸರಿಯಾದ ಸಮಯಕ್ಕೆ ಬೆಳಕಾಗುವ ಮುನ್ನ ಕೂಗುತ್ತಿದ್ದವು.. ಈ ಅಧ್ಯನಯದ ನಂತರ ಕೋಳಿ ಕೂಗುವುದಕ್ಕೆ ಬೆಳಕಿನ ಪರಿಣಾಮ ಇಲ್ಲ ಎನ್ನುವುದು ಸ್ಪಷ್ಟವಾಗಿತ್ತು. ಬೆಳಕು ಇಲ್ಲದೇ ಹೋದ್ರು, ಕತ್ತಲೇ ಇದ್ದರು ಮುಂಜಾನೆ ವೇಲೆ ಕೋಳಿಗಳು ಕೂಗೋದು ಹೊರಗಿನ ವಿದ್ಯಮಾನ ಗಮನಿಸಿ ಅಲ್ಲ ಬದಲಾಗಿ ತನ್ನೊಳಗಿನ ಸಂವೇದನಾ ಶಕ್ತಿ ಅರಿತು ಎಂಬುದು ಸಾಬೀತಾಗಿದೆ..