ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್ (Kangana Ranaut) ತಮ್ಮ ಹೆಸರಿನ ಬಂಗಲೆ ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಸಿನಿಮಾಗಿಂತಲೂ ರಾಜಕೀಯ (Politics) ರಂಗದಲ್ಲಿ ಬ್ಯುಸಿಯಾಗಿರುವ ಕಂಗನಾ, 40 ಕೋಟಿ ರೂ. ಮೌಲ್ಯದ ಬಂಗಲೆಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಕುರಿತು ಯೂಟ್ಯೂಬ್ ಚಾನೆಲ್ ವೊಂದು ವರದಿ ಮಾಡಿದೆ. ಮುಂಬೈನಲ್ಲಿರುವ ಕೋಟ್ಯಾಂತರ ಮೌಲ್ಯದ ಆ ಕಟ್ಟಡದಲ್ಲಿಯೇ ಮಣಿಕರ್ಣಿಕಾ ಸಿನಿಮಾ ಆಫೀಸ್ ಕೂಡ ಇದೆ. ಈ ಕಟ್ಟಡವು ಮುಂಬೈನ ಬಾಂದ್ರಾದಲ್ಲಿ ಎರಡು ಮಹಡಿಗಳಲ್ಲಿ 3,042 ಚದರ ಅಡಿಗಳಲ್ಲಿ ಹರಡಿದೆ. ಅಲ್ಲದೇ, ಬಂಗಲೆಯನ್ನು 40 ಕೋಟಿ ರೂ.ಗೆ ಮಾರಾಟ ಮಾಡಲು ದರ ಕೂಡ ನಿಗದಿ ಮಾಡಲಾಗಿದೆ ಎನ್ನಲಾಗಿದೆ.
ನಿಯಮಗಳನ್ನು ಉಲ್ಲಂಘಿಸಿ, ಅಕ್ರಮವಾಗಿ ಕಟ್ಟಡ ವಿಸ್ತರಿಸಲಾಗಿದೆ ಎಂಬ ಕಾರಣಕ್ಕೆ ಮುಂಬೈ ಪಾಲಿಕೆ ಅಧಿಕಾರಿಗಳು ಕ್ರಮ ತೆಗೆದುಕೊಂಡಿದ್ದರು. ಅದರ ವಿರುದ್ಧ ನಟಿ ಗರಂ ಆಗಿದ್ದರು. ಈಗ ಅದೇ ಕಟ್ಟಡ ಮಾರಾಟ ಮಾಡಲು ನಟಿ ಮುಂದಾಗಿದ್ದಾರೆ ಎನ್ನಲಾಗಿದೆ. ಕಂಗನಾ ನಿರ್ದೇಶಿಸಿ, ನಿರ್ಮಾಣ ಮಾಡಿರುವ ‘ಎಮರ್ಜೆನ್ಸಿ’ (Emergency Film) ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಸೆಪ್ಪೆಂಟಬರ್ 6ರಂದು ಈ ಚಿತ್ರ ಬಿಡುಗಡೆಯಾಗಲಿದೆ.