ಮೈಸೂರು : ಬಿ.ಎಸ್ ಸಂತೋಷ್ ಅವರನ್ನು ಟ್ವಿಟ್ಟರ್ ನಲ್ಲಿ ಕುಟುಕಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ನಿನ್ನೆ ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿ ಘರ್ಜಿಸಿದ್ದರು. ಹುಲಿಯಾನ ಟೀಕೆಗಳಿಗೆ ಟಾಂಗ್ ನೀಡುತ್ತಾ ಪ್ರತಾಪ್ ಸಿಂಹ ತಮ್ಮ ಟ್ವೀಟ್ ನಲ್ಲಿ ಸಿದ್ದರಾಮಯ್ಯ ಅವರನ್ನು ಬಾಸ್ ಎಂದು ಕರೆದಿದ್ದರು.
ಇದೀಗ ಟ್ವಿಟ್ಟರ್ ನಲ್ಲಿ ಬಾಸ್ ಎಂದು ಉಲ್ಲೇಖಿಸಿದ್ದ ವಿಚಾರವಾಗಿ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯರನ್ನು ಬಾಸ್ ಎನ್ನುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. ಅವರು ಈ ರಾಜ್ಯವನ್ನ ಆಳಿದ ನಾಯಕರು. ಅವರು ವಿರೋಧ ಪಕ್ಷದ ನಾಯಕರಾದರೂ ಮೈಸೂರಿನ ಮಗ. ಅವರ ಬಗ್ಗೆ ನನಗೆ ಅಪಾರ ಗೌರವ ಇದೆ. ನಾನು ಯಾವಗಾಲೂ ಹಿರಿಯರಿಗೆ ಗೌರವ ಕೊಡುವವನು. ಅವರ ಕಾಲಿಗೆ ಬಿದ್ದು ನಮಸ್ಕಾರ ಮಾಡುತ್ತೇನೆ. ಬಾಸ್ ಅಂತ ಗೌರವದಿಂದಲೇ ಕರೆದಿದ್ದೇನೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.








