ನವದೆಹಲಿ: ಮನೆ ಸ್ವಚ್ಛ ಮಾಡುವ ವಿಷಯದಲ್ಲಿ ಪತಿ, ಪತ್ನಿ ಮಧ್ಯೆ ಜಗಳ ನಡೆದು, ಪತ್ನಿಯು ಪತಿಯ ಕಿವಿ ಕಚ್ಚಿ ತುಂಡು ಮಾಡಿರುವ ಘಟನೆ ನಡೆದಿದೆ.
ಈ ಘಟನೆ ದೆಹಲಿ ಸುಲ್ತಾನ್ ಪುರಿ (Sultanpuri) ಪ್ರದೇಶದಲ್ಲಿ ನಡೆದಿದೆ. ಕಿವಿ ತುಂಡಾದ ಹಿನ್ನೆಲೆಯಲ್ಲಿ 45 ವರ್ಷದ ಪತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಪತ್ನಿಯನ್ನು ಬಂಧಿಸಿದ್ದಾರೆ. ನ.20ರಂದು ಹೆಂಡತಿಗೆ ಮನೆ ಸ್ವಚ್ಛಗೊಳಿಸುವಂತೆ ಸೂಚಿಸಿ, ಹೊರಗೆ ಕಸ ಎಸೆಯಲು ಹೋಗಿದ್ದೆ. ನಾನು ಮನೆಗೆ ಮರಳಿ ಬಂದ ಕೂಡಲೇ ನನ್ನ ಹೆಂಡತಿ ಜಗಳ ತೆಗೆದಿದ್ದಾಳೆ. ಮಕ್ಕಳೊಂದಿಗೆ ಪ್ರತ್ಯೇಕವಾಗಿರಲು ಮನೆ ಮಾರಾಟ ಮಾಡಿ, ನನಗೂ ಪಾಲು ನೀಡುವಂತೆ ಕೇಳಿದ್ದಾಳೆ. ಆಗ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಆಗ ಪತ್ನಿ ನನ್ನನ್ನೇ ಹೊಡೆಯಲು ಬಂದಿದ್ದಾಳೆ. ಆಗ ತಳ್ಳಿ, ನಾನು ಮನೆಯಿಂದ ಹೊರಹೋಗುತ್ತಿದ್ದೆ. ಹಿಂಬದಿಯಿಂದ ನನ್ನನ್ನ ಹಿಡಿದು ಬಲ ಕಿವಿ ಕಚ್ಚಿದ್ದಾಳೆ. ನನ್ನ ಕಿವಿ ಮೇಲಿನ ಭಾಗ ತುಂಡಾಗಿ ರಕ್ತಸ್ರಾವವಾಯಿತು ಎಂದು ದೂರಿನಲ್ಲಿ ತಿಳಿಸಿದ್ದಾರೆ.